ಮೊದಲ ಸಿನಿಮಾಕ್ಕೆ ಕನ್ನಡತಿ, ಮಿಸ್ ಇಂಡಿಯಾ ಸಿನಿ ಶೆಟ್ಟಿ ಸಜ್ಜು: NTR ಜೊತೆ ರೊಮ್ಯಾನ್ಸ್ ಮಾಡಲಿದ್ದಾರಾ??
ಕರ್ನಾಟಕದ ಸಿನಿ ಶೆಟ್ಟಿ 2022 ರ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಕಿರೀಟವನ್ನು ಗೆಲ್ಲುವ ಮೂಕ ಇಡೀ ದೇಶದ ಗಮನವನ್ನು ಸೆಳೆದಿದೆ. ಸಿನಿ ಶೆಟ್ಟಿ ಸೌಂದರ್ಯ ಕಿರೀಟ ಗೆದ್ದ ನಂತರ ಎಲ್ಲೆಲ್ಲೂ ಅವರ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಸಿನಿ ಶೆಟ್ಟಿಯ ಅಂದವಾದ ಫೋಟೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಸಿನಿ ಶೆಟ್ಟಿ ಸೌಂದರ್ಯ ಕಿರೀಟವನ್ನು ಧರಿಸದ ನಂತರ ಎಲ್ಲರ ದೃಷ್ಟಿ ಈ ಅಂದಗಾತಿಯ ಕಡೆಗೆ ನೆಟ್ಟಿರುವಾಗಲೇ, ಅವರ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನ ಮಾಡುವಾಗಲೇ ಹೊಸ ಆಸಕ್ತಿಕರ ಸುದ್ದಿಯೊಂದು ಹೊರ ಬಂದಿದೆ.
ಸಾಮಾನ್ಯವಾಗಿಯೇ ಮಾಡೆಲಿಂಗ್ ಕ್ಷೇತ್ರದಿಂದ ಬಂದು, ಸೌಂದರ್ಯ ಕಿರೀಟವನ್ನು ತಮ್ಮದಾಗಿಸಿಕೊಂಡ ಅಂದಗಾತಿಯರಲ್ಲಿ ಅನೇಕರು ನಂತರ ಸಿನಿಮಾಗಳ ಕಡೆಗೆ ದೃಷ್ಟಿ ಹೊರಳಿಸುತ್ತಾರೆ. ಮಾಜಿ ಮಿಸ್ ಇಂಡಿಯಾಗಳಾದ ಜೂಹಿ ಚಾವ್ಲಾ, ನಮ್ರತಾ ಶಿರೋಡ್ಕರ್, ಮಾತ್ರವೇ ಅಲ್ಲದೇ ಮಾಜಿ ಮಿಸ್ ವರ್ಲ್ಡ್ ಗಳಾದ ಐಶ್ವರ್ಯ ರೈ, ಪ್ರಿಯಾಂಕಾ ಚೊಪ್ರಾ, ಮಾನುಷಿ ಚಿಲ್ಲರ್, ಮಿಸ್ ಯೂನಿವರ್ಸ್ ಕಿರೀಟ ಗೆದ್ದ ಸುಶ್ಮಿತಾ ಸೇನ್, ಲಾರಾ ದತ್ತಾ ಹೀಗೆ ಸೌಂದರ್ಯ ಕಿರೀಟ ಗೆದ್ದ ಅನೇಕರು ಇಂದು ಸ್ಟಾರ್ ನಟಿಯರಾಗಿ ಛಾಪು ಮೂಡಿಸಿದ್ದಾರೆ.
ಈಗ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದಿರುವ ಸಿನಿ ಶೆಟ್ಟಿ ಸಹಾ ಸಿನಿಮಾದ ಕಡೆಗೆ ಹೆಜ್ಜೆ ಹಾಕಲಿದ್ದಾರಾ? ಎನ್ನುವ ಒಂದು ವಿಷಯವು ಮುನ್ನೆಲೆಗೆ ಬಂದಿದ್ದು, ಟಾಲಿವುಡ್ ನ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆಯೇ? ಎನ್ನುವ ವಿಷಯವೊಂದು ಮಾದ್ಯಮಗಳಲ್ಲಿ ಹರಿದಾಡಿ ಎಲ್ಲರ ಗಮನವನ್ನು ಸೆಳೆದಿದೆ. ಹೌದು, ಸಿನಿ ಶೆಟ್ಟಿ ಎನ್ ಟಿ ಆರ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಲಿದ್ದಾರೆ ಎನ್ನುವ ವಿಷಯವೊಂದು ಅಭಿಮಾನಿಗಳ ಗಮನವನ್ನು ಸೆಳೆದಿದೆ.
ಹೌದು, ಸಿನಿ ಶೆಟ್ಟಿ ಶೀಘ್ರದಲ್ಲೇ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರ ‘ಎನ್‌ಟಿಆರ್ -30’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯೊಂದಾಗಿದ್ದು ಸಂಚಲನ ಸೃಷ್ಟಿಸಿದೆ. ಎನ್‌ಟಿಆರ್-30 ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಿರ್ಮಾಪಕರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವರದಿಗಳ ಪ್ರಕಾರ, ಸಿನಿ ಶೆಟ್ಟಿಯನ್ನು ಅವರ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಗೆ ನಾಯಕಿ ಎನ್ನಲಾಗುತ್ತಿದೆ. ಆದರೆ ಅಧಿಕೃತ ಘೋಷಣೆ ವರೆಗೆ ಇದಕ್ಕೆ ಸ್ಪಷ್ಟತೆ ಇಲ್ಲ ಎನ್ನುವುದು ವಾಸ್ತವ.