ಮೊದಲ ಎಪಿಸೋಡ್ ನಲ್ಲೇ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಜೂನಿಯರ್ ಎನ್ ಟಿ ಆರ್

0 2

ತೆಲುಗು ಚಿತ್ರರಂಗದಲ್ಲಿ ಯಂಗ್ ಟೈಗರ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿರುವ ನಟ ಜೂನಿಯರ್ ಎನ್ ಟಿ ಆರ್ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಕಿರುತೆರೆಯ ನಿರೂಪಕರಾಗಿಯೂ ಈಗಾಗಲೇ ಹೆಸರನ್ನು ಮಾಡಿದ್ದಾರೆ. ಕಿರುತೆರೆಯಲ್ಲಿ ನಿರೂಪಣೆ ಅವರಿಗೆ ಹೊಸದಲ್ಲ. ಹಿಂದೊಮ್ಮೆ ಅವರು ಮಾ ಟಿವಿಯಲ್ಲಿ ತೆಲುಗಿನ ಬಿಗ್ ಬಾಸ್ ಆರಂಭವಾದಾಗ ಅದರ ಮೊದಲ ಸೀಸನ್ ಅನ್ನು ನಿರೂಪಣೆ ಮಾಡಿದ್ದರು. ಅದಾದ ನಂತರ ಮತ್ತೆ ಅವರು ಯಾವುದೇ ಹೊಸ ಕಾರ್ಯಕ್ರಮವನ್ನು ನಿರೂಪಣೆ ಮಾಡಿರಲಿಲ್ಲ. ಆದರೆ ಇದೀಗ ಜೂನಿಯರ್ ಎನ್ ಟಿ ಆರ್ ಅವರು ವರ್ಷಗಳ ನಂತರ ಮತ್ತೊಮ್ಮೆ ಕಿರುತೆರೆಯ ಕಾರ್ಯಕ್ರಮವೊಂದರ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಸಂಚಿಕೆಯಲ್ಲೇ ದಾಖಲೆಯನ್ನು ಬರೆದಿದೆ ಅವರ ಈ ಶೋ.

ಜೂನಿಯರ್ ಎನ್ ಟಿ ಆರ್ ಅವರು ತೆಲುಗಿನ ಎವರು ಮೀಲೋ ಕೋಟೇಶ್ವರುಡು ಕಾರ್ಯಕ್ರಮದ 5ನೇ ಸೀಸನ್ ನಿರೂಪಕನಾಗಿ ಎಂಟ್ರಿ ನೀಡಿದ್ದಾರೆ. ಎನ್ ಟಿ ಆರ್ ಅವರು ನಿರೂಪ ಕಡೆ ಮಾಡಿದ ಮೊದಲ ಸಂಚಿಕೆ ಟಿ ಆರ್ ಪಿ ಗಳಿಕೆಯಲ್ಲಿ ಹಿಂದಿನ ನಾಲ್ಕು ಸಂಚಿಕೆಗಳ ರೇಟಿಂಗ್ ಅನ್ನು ಬದಿಗೊತ್ತಿ ಹೆಚ್ಚು ರೇಟಿಂಗ್ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಹೌದು ಎವರು ಮೀಲೋ ಕೋಟೇಶ್ವರುಡು ಶೋ ನ ಮೊದಲನೇ ಆವೃತ್ತಿ ನಾಗಾರ್ಜುನ ಅವರ ನಿರೂಪಣೆಯಲ್ಲಿ ಮೂಡಿ ಬಂದಾಗ ಟಿ ಆರ್ ಪಿ 9.7, ಎರಡನೇ ಆವೃತ್ತಿಯಲ್ಲೂ ನಾಗಾರ್ಜುನ ಅವರೇ ನಿರೂಪಣೆ ಮಾಡಿದ್ದ ಈ ಶೋ ನ ರೇಟಿಂಗ್ 8.2 ಆದರೆ ಮತ್ತೊಮ್ಮೆಮೂರನೇ ಆವೃತ್ತಿಯಲ್ಲಿ 6.72 ಆಗಿತ್ತು. ಇನ್ನು ನಾಲ್ಕನೇ ಸೀಸನ್ ಅನ್ನು ಮೆಗಾಸ್ಟಾರ್ ಚಿರಂಜೀವಿ ಅವರು ನಿರೂಪಣೆ ಮಾಡಿದ್ದರು. ಆಗ 3.62 ಟಿಆರ್‌ಪಿ ರೇಟಿಂಗ್ ಸಿಕ್ಕಿತ್ತು.

ಆದರೆ ಈಗ ಜೂನಿಯರ್ ಎನ್ ಟಿ ಆರ್ ಅವರು ನಡೆಸಿ ಕೊಟ್ಟಂತಹ ಮೊದಲ ಸಂಚಿಕೆಯ ಟಿಆರ್ ಪಿ ರೇಟಿಂಗ್ 11.2 ಆಗಿದ್ದು, ಇದು ಹಿಂದಿನ ಎಲ್ಲಾ ಸೀಸನ್ ಗಳಿಗಿಂತ ಇದು ಹೆಚ್ಚಿನ ಟಿ ಆರ್ ಪಿ ಆಗಿದೆ. ಮೊದಲನೆಯ ಸಂಚಿಕೆಯಲ್ಲಿ ತೆಲುಗಿನ ಸ್ಟಾರ್ ನಟ ರಾಮ್ ಚರಣ್ ತೇಜಾ ಅವರು ಅತಿಥಿಯಾಗಿ ಆಗಮಿಸಿ ಮೊದಲ ಸ್ಪರ್ಧಿಯಾಗಿ ಹಾಟ್ ಸೀಟಿನಲ್ಲಿ ಕುಳಿತು, 25 ಲಕ್ಷ ರೂಪಾಯಿಗಳನ್ನು ಗೆದ್ದಿದ್ದಾರೆ. ಅವರು ಈ ಹಣವನ್ನು ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಹೇಳಿ ನೀಡುವುದಾಗಿ ಹೇಳಿದ್ದಾರೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿರುವ ಈ ಇಬ್ಬರು ನಟರು ಎವರು ಮೀಲೋ ಕೋಟೀಶ್ವರುಡು ಕಾರ್ಯಕ್ರಮದ ಮೊದಲ ಸಂಚಿಕೆಯ ವಿಶೇಷ ಆಕರ್ಷಣೆಯಾಗಿದ್ದರು.

Leave A Reply

Your email address will not be published.