ಮೊದಲು ನನಗೆ ಖಂಡಿತ ಭಯವಾಗಿತ್ತು:ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಹೀಗೆ ಹೇಳಿದ್ದಾದ್ರು ಏಕೆ??

0
143

ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪ್ರಸ್ತುತ ರಶ್ಮಿಕಾ ಮಂದಣ್ಣ ತೆಲುಗು ಹಾಗೂ ಹಿಂದಿ ಸಿನಿಮಾಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಿದ್ದಾರೆ. ತೆಲುಗಿನಲ್ಲಿ ಒಂದರ ನಂತರ ಮತ್ತೊಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಳ್ಳುವ ಮೂಲಕ ತನ್ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ರಶ್ಮಿಕಾ ನಟನೆಯ ಎರಡು ಹಿಂದಿ ಸಿನಿಮಾಗಳು ತೆರೆಗೆ ಬರಲು ಕಾಯುತ್ತಿವೆ.

ನಟಿ ರಶ್ಮಿಕಾ ಕುರಿತಾಗಿ ಒಂದಲ್ಲಾ ಒಂದು ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಅಲ್ಲದೇ ರಶ್ಮಿಕಾ ಮಂದಣ್ಣ ಟ್ರೋಲ್ ಆಗುವುದು ಕೂಡಾ ಬಹಳ ಸಾಮಾನ್ಯ ಎನಿಸುವಂತಾಗಿದೆ. ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಯುವ ನಟ ಸ್ಟಾರ್ ನಟ ಕೂಡಾ ಆಗಿರುವ ವಿಜಯ್ ದೇವರಕೊಂಡ ಜೊತೆಗಿನ ಸ್ನೇಹ ಹಾಗೂ ಒಡನಾಟದ ವಿಷಯವಾಗಿಯೂ ಈಗಾಗಲೇ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ ಮತ್ತು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇವರಿಬ್ಬರೂ ಎರಡು ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೋಡಿಯನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಅಲ್ಲದೇ ಇವರ ನಡುವಿನ ಸ್ನೇಹ ಹಾಗೂ ಒಡನಾಟವನ್ನು ಕಂಡು ಇವರ ಮಧ್ಯೆ ಪ್ರೀತಿ ಚಿಗುರೊಡೆದಿದೆ ಎನ್ನುವ ಸುದ್ದಿಗಳು ಕೂಡಾ ಹರಿದಾಡಿದವು. ಅದಕ್ಕೆ ಪೂರಕ ಎನ್ನುವಂತೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆಗಾಗ ಜೊತೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ವಿಚಾರ ಇನ್ನಷ್ಟು ಬಲವಾಗುವಂತೆ ಮಾಡಿತು. ಆದರೆ ಇಬ್ಬರಲ್ಲಿ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ನಟಿ ರಶ್ಮಿಕಾ ವಿಜಯ್ ದೇವರಕೊಂಡ ಜೊತೆಗೆ ಮೊದಲ ಸಿನಿಮಾ ಮಾಡುವಾಗ ನಟ ವಿಜಯ್ ದೇವರಕೊಂಡ ಬಗ್ಗೆ ತಾನು ಹೇಳಿದ್ದ ಮಾತುಗಳು ಈಗ ಮತ್ತೊಮ್ಮೆ ಹಲವು ಮಾಧ್ಯಮಗಳಲ್ಲಿ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹೌದು, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗೆ ಮೊದಲ ಸಿನಿಮಾ ಮಾಡುವಾಗ, ಹೊಸ ಜನರನ್ನು ಕಂಡರೆ ನನಗೆ ಭಯ, ಆದ್ದರಿಂದಲೇ ವಿಜಯ್ ದೇವರಕೊಂಡ ಅವರನ್ನು ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಭೇಟಿಯಾದಾಗ ನಾನು ಭಯಪಟ್ಟಿದ್ದೆ ಎಂದಿದ್ದರು.

ನಂತರ ಅವರು ಬಹಳ ಸ್ನೇಹಜೀವಿ ಎನ್ನುವುದು ಅರ್ಥವಾಯಿತು. ಅವರೊಡನೆ ಕೆಲಸ ಮಾಡುವುದು ಸುಲಭವಾಯಿತು. ನಮ್ಮಿಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿರುವುದರಿಂದ ಶೂಟಿಂಗ್ ಮಾಡುವುದು ಬಹಳ ಸುಲಭ, ನಾನು ಅವರನ್ನು ಅರ್ಥ ಮಾಡಿಕೊಳ್ಳಲು ನಾನು ಹೆಚ್ಚುವ ಶ್ರಮಪಡಬೇಕಾಗಿಲ್ಲ, ಅದೇ ನಮ್ಮ ನಡುವಿನ ಸ್ನೇಹ ದಲ್ಲಿ ಇರುವ ಉತ್ತಮವಾದ ಅಂಶ ಎಂದು ರಶ್ಮಿಕಾ ಮಂದಣ್ಣ ಅಂದು ಹೇಳಿದ ಮಾತುಗಳು ಈಗ ಮತ್ತೊಮ್ಮೆ ಸದ್ದು ಮಾಡುತ್ತಿವೆ.‌

LEAVE A REPLY

Please enter your comment!
Please enter your name here