ಮೊದಲು ತಿನ್ನುತ್ತಿದ್ದೆ, ಈಗಲೂ ಗೋಮಾಂಸ ತಿನ್ನುತ್ತೇನೆಂದ ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ದೇಶಕ: ವೈರಲ್ ವೀಡಿಯೋ ಇವರಿಗೆ ಬಹಿಷ್ಕಾರ ಏಕಿಲ್ಲ?

Entertainment Featured-Articles Movies News Viral Video

ವರ್ಷಗಳ ಹಿಂದೆ ನಟ ರಣಬೀರ್ ಕಪೂರ್ ಒಂದು ಸಂದರ್ಶನದಲ್ಲಿ ತಮ್ಮ ಕುಟುಂಬ ಪೇಶಾವರದಿಂದ ಬಂದಿದ್ದು, ತಾವು ಮಾಂಸ ಪ್ರಿಯರು, ತಮ್ಮ ಮನೆಯಲ್ಲಿ ಮಾಂಸದ ಆಹಾರ ಇರಲೇಬೇಕು ಎಂದು ಹೇಳುತ್ತಾ ಅವರು ತನಗೆ ಗೋಮಾಂಸ ಎಂದರೆ ಬಹಳ ಇಷ್ಟ ಎನ್ನುವ ಮಾತನ್ನು ಹೇಳಿದ್ದರು. ಈ ಮಾತು ಈಗ ಮತ್ತೆ ಸುದ್ದಿಯಾಗಿದೆ. ಇದೇ ಹೇಳಿಕೆಯ ಆಧಾರದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಈ ನಟ ಹೊಸ ಸಿನಿಮಾ ಬ್ರಹ್ಮಾಸ್ತ್ರ ವನ್ನು ಬಹಿಷ್ಕಾರ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಅಲ್ಲದೇ ಸಿನಿಮಾ ಬಿಡುಗಡೆಗೆ ಮೊದಲು ಉಜ್ಜಯಿನಿಯ ಮಹಾಕಾಳೇಶ್ವರನ ದರ್ಶನಕ್ಕೆ ಹೋದ ನಟನಿಗೆ ಆಲಯದೊಳಕ್ಕೆ ಪ್ರವೇಶ ಕೂಡಾ ನಿರ್ಬಂಧಿಸಲಾಗಿತ್ತು.

ರಣಬೀರ್ ಆಲಿಯಾ ಇಬ್ಬರೂ ಸಹಾ ದೇಗುಲದಿಂದ ಹೊರಗೆ ಉಳಿಯಬೇಕಾಯಿತು. ನಿರ್ದೇಶಕ ಅಯಾನ್ ಮುಖರ್ಜಿ ದೇವರ ದರ್ಶನ ಮಾಡಿ ಬಂದರು. ಹೀಗೆ ರಣಬೀರ್ ಗೋಮಾಂಸ ಸೇವನೆಯ ಕುರಿತು ನೀಡಿದ್ದ ಹೇಳಿಕೆಯೇ ಹಿಂದೂ ಪರ ಸಂಘಟನೆಗಳ ಆ ಕ್ರೋ ಶ ಕ್ಕೆ ಕಾರಣವಾಗಿದೆ. ಈಗ ಈ ಎಲ್ಲಾ ವಿಚಾರಗಳ ನಡುವೆ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಹಾ ಇಂತದ್ದೇ ಒಂದು ವಿ ವಾ ದಕ್ಕೆ ಸಿಲುಕಿಕೊಂಡಿದ್ದಾರೆ. ಈ ಹಿಂದೆ ಅವರು ಸಂದರ್ಶನದಲ್ಲಿ ನೀಡಿದ್ದ ಒಂದು ಹೇಳಿಕೆ ಈಗ ಅವರ ಪಾಲಿಗೆ ಮುಳುವಾಗಿದೆ. ನಿರ್ದೇಶಕನ ಬಗ್ಗೆ ಅಸಮಾಧಾನಕ್ಕೆ ಅದು ಕಾರಣವಾಗಿದೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ, “ನಾನು ಈ ಹಿಂದೆಯೂ ಗೋಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ” ಎಂದು ಹೇಳಿದ್ದಾರೆ. ಅವರು ಹಾಗೆ ಹೇಳಿದ ವೀಡಿಯೋದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.‌ ಸದಾ ಹಿಂದೂ ಪರ ಯೋಚನೆ ಮಾಡುವ ವಿವೇಕ್ ಅಗ್ನಿಹೋತ್ರಿ ಅವರ ಈ ಗೋಮಾಂಸ ಸೇವನೆಯ ಹೇಳಿಕೆಯ ಕುರಿತಾಗಿ ಭಜರಂಗದಳವು ಏಕೆ ಮೌನವಾಗಿದೆ? ಎನ್ನುವುದು ಈಗ ಅನೇಕರ ಪ್ರಶ್ನೆಯಾಗಿದೆ. ಗೋಮಾಂಸ ಸೇವನೆ ಮಾಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿರುವ ಇವರ ಸಿನಿಮಾಗಳನ್ನು ಸಹಾ ಬಹಿಷ್ಕರಿಸಬೇಕು ಮತ್ತು ಅವರನ್ನೂ ಯಾವ ದೇವಾಲಯದೊಳಕ್ಕೂ ಬಿಡಬಾರದು ಎಂದು ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು.

ನಟ ರಣಬೀರ್ ಕಪೂರ್ ಪರವಾಗಿ ನಿಂತಿರುವ ಅವರ ಅಭಿಮಾನಿಗಳು ಮಾತ್ರ ವಿವೇಕ್ ಅಗ್ನಿಹೋತ್ರಿಯವರ ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದು, ಗೋಮಾಂಸ ವಿಚಾರದಲ್ಲಿ ಕೇವಲ ರಣಬೀರ್ ಗೆ ಮಾತ್ರವಲ್ಲ, ಅದರ ಬಿಸಿ ವಿವೇಕ್ ಅಗ್ನಿಹೋತ್ರಿಗೂ ತಾಗಬೇಕು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಂದರ್ಶನದ ವೀಡಿಯೋ ವೈರಲ್ ಆಗುತ್ತಿರುವ ವಿಚಾರವಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೇ ಮೌನವಾಗಿ ಇದ್ದಾರೆ.

Leave a Reply

Your email address will not be published.