ಮೊಟ್ಟ ಮೊದಲ ಬಾರಿಗೆ ರಾಧೇ ಶ್ಯಾಮ್ ಹೀನಾಯ ಸೋಲಿ‌ನ ಬಗ್ಗೆ ಮಾತನಾಡಿದ ನಟ ಪ್ರಭಾಸ್!!

Entertainment Featured-Articles News

ತೆಲುಗಿನ ಸ್ಟಾರ್ ನಟ, ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ ಬಾಹುಬಲಿ ಸಿನಿಮಾ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಮಟ್ಟಕ್ಕೆ ದೊಡ್ಡ ಹೆಸರು, ಜನಪ್ರಿಯತೆ ಪಡೆದಿರುವುದು ಮಾತ್ರವೇ ಅಲ್ಲದೇ, ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸಾಲು ಸಾಲಾಗಿ ಬ್ಯುಸಿಯಾಗಿದ್ದಾರೆ. ಆದರೆ ಒಂದು ಬೇಸರದ ವಿಷಯ ಏನೆಂದರೆ ಬಾಹುಬಲಿ ನಂತರ ನಟ ಪ್ರಭಾಸ್ ಅವರ ಸಿನಿಮಾಗಳು ದೊಡ್ಡ ಸಕ್ಸಸ್ ಪಡೆಯುವಲ್ಲಿ ವಿಫಲವಾಗಿದೆ. ಇದು ಅಭಿಮಾನಿಗಳಿಗೆ ಸಹಾ ಬೇಸರವನ್ನು ಉಂಟು ಮಾಡಿದೆ.

ಬಾಹುಬಲಿ ನಂತರ ನಟ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು ಆದರೆ ಸಿನಿಮಾ ಸಕ್ಸಸ್ ಪಡೆಯುವಲ್ಲಿ ವಿಫಲವಾಗಿದೆ‌. ಅನಂತರ ರಾಧೇ ಶ್ಯಾಮ್ ಸಿನಿಮಾ ಟೀಸರ್, ಟ್ರೈಲರ್ ಗಳ ಮೂಲಕ ಸಾಕಷ್ಟು ಕುತೂಹಲವನ್ನು ನಿರ್ಮಾಣ ಮಾಡಿತ್ತು. ಈ ಸಿನಿಮಾ ದೊಡ್ಡ ಸಕ್ಸಸ್ ಪಡೆಯಲಿದೆ ಎಂದು ನಿರೀಕ್ಷೆಗಳಿದ್ದವು. ಆದರೆ ಬಿಡುಗಡೆ ನಂತರ ಮತ್ತೊಮ್ಮೆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ರಾಧೇ ಶ್ಯಾಮ್ ದೊಡ್ಡ ಸೋಲನ್ನು ಎದುರುಗೊಂಡಿತು.

ಸಾಹೋ ಸೋಲಿನಿಂದ ಹೊರ ಬರಲು ಬಯಸಿದ್ದ ನಟ ಪ್ರಭಾಸ್ ಅವರಿಗೆ ರಾಧೇ ಶ್ಯಾಮ್ ಮತ್ತೊಂದು ಸೋಲಿನ ಕಹಿಯನ್ನು ಉಳಿಸಿದೆ. ರಾಧೇ ಶ್ಯಾಮ್ ಸಿನಿಮಾ ನಂತರ ಪ್ರಭಾಸ್ ಅವರು ಸಹಾ ಹೊರಗೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ ಅವರ ಕಾಲಿನ ಸರ್ಜರಿಗಾಗಿ ವಿದೇಶಕ್ಕೆ ಹೋಗಿದ್ದಾರೆ ಎನ್ನುವ ಸುದ್ದಿಯೊಂದು ಕೂಡಾ ಬಂದಿತ್ತು. ಈಗ ಸರ್ಜರಿ ನಂತರ ಮತ್ತೆ ದೇಶಕ್ಕೆ ವಾಪಸಾಗಿರುವ ಪ್ರಭಾಸ್ ಅವರು ಮೊದಲ ಬಾರಿಗೆ ರಾಧೇ ಶ್ಯಾಮ್ ಸೋಲಿನ ಬಗ್ಗೆ ಮಾತನಾಡಿದ್ದಾರೆ.

ಹೌದು, ನಟ ಪ್ರಭಾಸ್ ಅವರು ಆಂಗ್ಲ ಮಾದ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಸಾಹೋ ಸೋಲಿನ ಬಗ್ಗೆ ಮಾತನಾಡಿ, ಬಹುಶಃ ಕೋವಿಡ್ ಕಾರಣದಿಂದ ಅಥವಾ ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಏನೋ ಲೋಪವಿರಬಹುದು ಎನ್ನುವ ಮಾತನ್ನು ಹೇಳಿದ್ದಾರೆ. ಜನರಿಗೆ ಎಲ್ಲರಿಗೂ ತಿಳಿಯುತ್ತದೆ ಎಂದಿರುವ ನಟ ಪ್ರಭಾಸ್ ಇದೇ ವೇಳೆ ಬಹುಶಃ ಜನರಿಗೆ ತನ್ನನ್ನು ಈ ರೀತಿಯ ಸಿನಿಮಾಗಳಲ್ಲಿ ನೋಡಲು ಇಷ್ಟ ಪಡದೇ ಇರಬಹುದು ಎನ್ನುವ ಮಾತುಗಳನ್ನು ಸಹಾ ಹೇಳಿದ್ದಾರೆ.

ಇನ್ನು ರಾಧೇ ಶ್ಯಾಮ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದು, ಕುಟುಂಬ ಸಮೇತ ಜನರು ಸಿನಿಮಾ ನೋಡಿ ಎಂಜಾಯ್ ಮಾಡಬಹುದು ಎಂದು ಭಾವಿಸುತ್ತೇನೆ ಎಂದಿದ್ದಾರೆ. ಕೋವಿಡ್ ನಂತರದ ದಿನಗಳಲ್ಲಿ ಜನರು ಮನೆಗಳಲ್ಲಿ ಒಟ್ಟಿಗೆ ಕುಳಿತು ಟಿವಿಯಲ್ಲಿ ಸಿನಿಮಾಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ ಎಂದು ಹೇಳಿದ ನಟ ಪ್ರಭಾಸ್ ದಕ್ಷಿಣ ಸಿನಿಮಾಗಳ ಯಶಸ್ಸಿನ ಕುರಿತಾಗಿ ಸಹಾ ಅವರು ಮಾತನಾಡಿದ್ದಾರೆ.

ದಕ್ಷಿಣ, ಉತ್ತರ, ಪೂರ್ವ ಅಥವಾ ಪಶ್ಚಿಮ ಸಿನಿಮಾ ಎಂದಲ್ಲ, ಜನರು ಸಿ‌ನಿಮಾಗಳನ್ನು ಇಷ್ಟ ಪಡುತ್ತಾರೆ. ಅದು ಯಾವುದೇ ಭಾಗದ್ದೇ ಆಗಿರಲಿ ಜನ ಇಷ್ಟ ಪಡುವರು ಎಂದಿದ್ದಾರೆ. ಇನ್ನು ಬಾಹುಬಲಿ ನಂತರ ಸಹಜವಾಗಿಯೇ ಅಭಿಮಾನಿಗಳು ಮತ್ತು ಪ್ರೇಕ್ಷಕರು ಪ್ರಭಾಸ್ ಅವರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಪ್ರಸ್ತುತ ನಟ ಪ್ರಭಾಸ್ ಅವರು ಸಲಾರ್, ಆದಿಪುರುಷ್ ಮತ್ತು ಪ್ರಾಜೆಕ್ಟ್ ಕೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *