ಮೊಟ್ಟ ಮೊದಲ ಬಾರಿಗೆ ಮೈತುಂಬಾ ಬಟ್ಟೆ ತೊಟ್ಟು ಬಂದ ಉರ್ಫಿ: ಮುಟ್ಟಿನ ಮೊದಲ ದಿನ ಎಂದು ಮಾಡಿದ್ದು ಈ ಕೆಲಸ

Entertainment Featured-Articles Movies News
68 Views

ಉರ್ಫಿ ಜಾವೇದ್ ಈ ಹೆಸರು ಓಟಿಟಿ ಯಲ್ಲಿ ಪ್ರಸಾರವಾದ ಮೊದಲ ಬಿಗ್ ಬಾಸ್ ಸೀಸನ್ ನಂತರ ಬೇರೆಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚು ಸದ್ದು, ಸುದ್ದಿ ಮಾಡಿದ ಹೆಸರು ಎನ್ನುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಉರ್ಫಿ ಇಷ್ಟೊಂದು ಸದ್ದು ಮಾಡಿದ್ದು ಯಾವುದೇ ಶೋ, ಸೀರಿಯಲ್ ಅಥವಾ ಜಾಹೀರಾತಿನಿಂದಲ್ಲ, ಬದಲಿಗೆ ತಾನು ಧರಿಸುವ ಬೋಲ್ಡ್ ಮತ್ತು ಹಾಟ್ ಡ್ರೆಸ್ ಗಳಿಂದಾಗಿ.‌ ಬಹುಶಃ ಡ್ರೆಸ್ ಗಳ ವಿಚಾರದಲ್ಲಿ ಉರ್ಫಿ ಮಾಡಿದಷ್ಟು ಸುದ್ದಿಯನ್ನು ಕಳೆದ ಒಂದು ವರ್ಷದಲ್ಲಿ ಬೇರೆ ಯಾವ ನಟಿಯರು ಸಹಾ ಮಾಡಲಿಲ್ಲ ಎಂದೇ ಹೇಳಬಹುದು.

ಹೀಗೆ ಸದಾ ಹಾಟ್ ಹಾಟ್ ಡ್ರೆಸ್ ಗಳನ್ನು ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದ ಉರ್ಫಿ ಈಗ ತಮ್ಮ ಎಲ್ಲಾ ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ಒಂದು ಭರ್ಜರಿ ಶಾ ಕ್ ನೀಡಿದ್ದಾರೆ. ಹೌದು ಮೊದಲ ಬಾರಿಗೆ ಉರ್ಫಿ ಮೈತುಂಬಾ ಬಟ್ಟೆಯನ್ನು ಧರಿಸಿ ಕ್ಯಾಮರಾ ಕಣ್ಣುಗಳಿಗೆ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಈ ಹೊಸ ಅವತಾರ ಕಂಡು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಇದು ಅಚ್ಚರಿ ಎನ್ನುವುದಕ್ಕಿಂತ ಒಂದು ಶಾ ಕ್ ಎಂದೇ ಹೇಳಬಹುದಾಗಿದೆ.

ಬಿಳಿಯ ಬಣ್ಣದ ಬಟ್ಟೆ ಧರಿಸಿ ಮೇಲೆ ನೀಲಿ ಬಣ್ಣದ ದುಪ್ಪಟ್ಟ ಧರಿಸಿ ಬಂದ ಉರ್ಫಿಯನ್ನು ಕಂಡು ಎಲ್ಲರೂ ದಂಗಾಗಿದ್ದಾರೆ. ಸದಾ ತುಂಡುಡುಗೆಗಳನ್ನು ಧರಿಸಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದ ಉರ್ಫಿಯು ಏಕಾಏಕೀ ಮೈ ತುಂಬಾ ಬಟ್ಟೆ ಧರಿಸಿರುವುದನ್ನು ಕಂಡು, ಆಕೆಯ ಸರಳ ಉಡುಗೆ ನೋಡಿ ಅಭಿಮಾನಿಗಳಿಗೆ ಕೂಡಾ ಇದನ್ನು ನಂಬಲು ಕಷ್ಟವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಉರ್ಫಿ ಯ ಹೊಸ ಲುಕ್ ವೈರಲ್ ಆಗಿದೆ.

ನೆಟ್ಟಿಗರು ಉರ್ಫಿ ಮೈ ತುಂಬಾ ಬಟ್ಟೆ ಹಾಕಿದ್ದನ್ನು ಕಂಡು ಹಾಡಿ ಹೊಗಳಿದ್ದಾರೆ. ಬಹಳ ಸುಂದರವಾಗಿ ಕಾಣುತ್ತಿರುವಿರಿ ಎಂದು ಹೇಳಿದ್ದಾರೆ. ನೆಟ್ಟಿಗರೊಬ್ಬರು ಇದೇ ಮೊದಲ ಬಾರಿಗೆ ಉರ್ಫಿ ಮೈ ತುಂಬಾ ಬಟ್ಟೆ ಧರಿಸಿರುವುದನ್ನು ನಾನು ನೋಡಿದ್ದು ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಹೀಗೆ ಮೈತುಂಬಾ ಬಟ್ಟೆ ಹಾಕಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು ಎನ್ನುವ ಮಾತುಗಳನ್ನು ಸಹಾ ಹೇಳಿದ್ದಾರೆ. ಒಟ್ಟಾರೆ ಮೈ ತುಂಬಾ ಬಟ್ಟೆ ತೊಟ್ಟು ಮತ್ತೊಮ್ಮೆ ಉರ್ಫಿ ಸುದ್ದಿಯಾಗಿದ್ದಾರೆ.

ಇನ್ನು ಈ ವೇಳೆ ಇದು ಮುಟ್ಟಿನ ಮೊದಲ ದಿನ ಎಂದಿದ್ದಾರೆ. ಆಗ ಫೋಟೋಗ್ರಾಫರ್ ಒಬ್ಬರು ಇಂದಿಗೂ ಮುಟ್ಟಿನ ದಿನಗಳಲ್ಲಿ ಮಹಿಳೆಯರನ್ನು ಅಸ್ಪೃಶ್ಯರಂತೆ ನೋಡುತ್ತಾರೆ ಅದನ್ನು ನೀವು ನಂಬುವಿರಾ ಎಂದಾಗ, ಅಲ್ಲಿದ್ದವರಲ್ಲಿ ಒಬ್ಬರನ್ನು ಮುಟ್ಟಿದ ಉರ್ಫಿ ನನಗೆ ಅಂತಹ ಅನುಭವ ಖಂಡಿತ ಆಗಿಲ್ಲ ಎನ್ನುವ ಮಾತನ್ನು ಹೇಳಿ ಗಮನ ಸೆಳೆದಿದ್ದಾರೆ.

Leave a Reply

Your email address will not be published. Required fields are marked *