ಮೊಟ್ಟ ಮೊದಲ ಟಾಕ್ ಶೋ ನಿರೂಪಣೆಗೆ ನಂದಮೂರಿ ಬಾಲಕೃಷ್ಣ ಪಡೆದ ದಾಖಲೆ ಮೊತ್ತದ ಸಂಭಾವನೆ ಎಷ್ಟು ಗೊತ್ತಾ??
ಮೊದಲು ಕಿರುತೆರೆಯ ವ್ಯಾಪ್ತಿ ಸೀಮಿತವಾಗಿತ್ತು ಆದರೆ ಇಂದು ಕಿರುತೆರೆ ಖಂಡಿತ ಹಿಂದಿನಂತೆ ಇಲ್ಲ, ಅದರಲ್ಲೂ ಓಟಿಟಿ ಪ್ಲಾಟ್ ಫಾರಂ ಗಳ ಪರಿಚಯದ ನಂತರವಂತೂ ಕಿರುತೆರೆ ಇನ್ನೂ ವಿಸ್ತರಿಸಿದೆ. ಬೆಳ್ಳಿ ತೆರೆಯ ಮೇಲೆ ದೊಡ್ಡ ದೊಡ್ಡ ಸ್ಟಾರ್ ಗಳಾಗಿ, ತಮ್ಮದೇ ತಾರಾ ವರ್ಚಸ್ಸು ಹೊಂದಿರುವ ಸ್ಟಾರ್ ನಟರು ಕೂಡಾ ಓಟಿಟಿಗೆ ಎಂಟ್ರಿ ನೀಡಿರುವುದು, ನೀಡುತ್ತಿರುವುದು ಇತ್ತೀಚಿಗೆ ಸಾಮಾನ್ಯ ಎನಿಸಿದೆ. ಅಂತಹ ಒಂದು ಪ್ರಯತ್ನ ಎನ್ನುವಂತೆ ತೆಲುಗು ಸಿನಿರಂಗದ ದಿಗ್ಗಜ ನಟ ನಂದಮೂರಿ ಬಾಲಕೃಷ್ಣ ಕೂಡಾ ಓಟಿಟಿ ಯಲ್ಲಿ ಒಂದು ಟಾಕ್ ಶೋ ನಿರೂಪಣೆ ಮಾಡುತ್ತಿದ್ದಾರೆ.
ಅಖಂಡ ಸಿನಿಮಾದ ಅಖಂಡದ ವಿಜಯದಿಂದ ಬೀಗುತ್ತಿರುವ ನಂದಮೂರಿ ಬಾಲಕೃಷ್ಣ ಅವರು ಸಿನಿಮಾ ರಂಗದಲ್ಲಿ ಸದ್ದು ಮಾಡವಾಗಲೇ, ಓಟಿಟಿಯಲ್ಲಿ ಅವರು ನಿರೂಪಣೆ ಮಾಡುತ್ತಿರುವ ಅನ್ ಸ್ಟಾಪಬಲ್ ವಿತ್ ಎನ್ ಬಿ ಕೆ ಶೋ ಕೂಡಾ ಜನಪ್ರಿಯತೆಯನ್ನು ಪಡೆಯುವ ಜೊತೆಗೆ ಯಶಸ್ಸನ್ನು ಸಹಾ ಪಡೆದುಕೊಂಡಿದೆ. ನಟ ಬಾಲಕೃಷ್ಣ ಅವರು ಈ ಟಾಕ್ ಶೋ ಗಾಗಿ ಬಹು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ.
ನಟ ಬಾಲಕೃಷ್ಣ ಅವರು ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನಿರ್ವಹಿಸಿದ ಟಾಕ್ ಶೋ ಆಹಾ ಓಟಿಟಿ ಪ್ಲಾಟ್ ಫಾರಂ ನಲ್ಲಿ ಪ್ರಸಾರವಾಯಿತು. ಈ ಕಾರ್ಯಕ್ರಮಕ್ಕೆ ಟಾಲಿವುಡ್ ನ ದಿಗ್ಗಜರೆಲ್ಲಾ ಅತಿಥಿಗಳಾಗಿ ಆಗಮಿಸಿದ್ದು ವಿಶೇಷ. ಇನ್ನು ನಟ ಬಾಲಕೃಷ್ಣ ಅವರು ತಮ್ಮದೇ ಆದ ರೀತಿಯಲ್ಲಿ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ ಈ ಶೋ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ಬಾಲಕೃಷ್ಣ ಅವರ ನಿರೂಪಣೆಯ ಸಾರಥ್ಯದಲ್ಲಿ ಮೂಡಿ ಬಂದು ಯಶಸ್ಸನ್ನು ಪಡೆದುಕೊಂಡ ದಿ ಅನ್ಸ್ಟಾಪಬಲ್ ವಿತ್ ಎನ್ ಬಿ ಕೆ ಶೋ ನ ಒಂದು ಎಪಿಸೋಡ್ ನಿರೂಪಣೆಗೆ ನಟ ಬಾಲಕೃಷ್ಣ ಅವರು 25 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಒಟ್ಟು ಹತ್ತ ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡಿರುವ ಬಾಲಕೃಷ್ಣ ಅವರು 2.5 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದು ಬಾಲಕೃಷ್ಣ ಅವರು ತಮ್ಮ ಮೊದಲ ಟಾಕ್ ಶೋ ನಿರೂಪಣೆಗೆ ಪಡೆದ ಸಂಭಾವನೆಯಾಗಿದೆ.