ಮೊಟ್ಟೆ ಬೇಡ ಅಂದ್ರೆ ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಅಸಮಾಧಾನ ಹೊರ ಹಾಕಿದ ವಿದ್ಯಾರ್ಥಿನಿ

Written by Soma Shekar

Published on:

---Join Our Channel---

ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಬಾಳೆಹಣ್ಣು ಹಾಗೂ ಮೊಟ್ಟೆಯನ್ನು ನೀಡುವ ವಿಷಯವಾಗಿ ರಾಜ್ಯದಲ್ಲಿ ಈಗಾಗಲೇ ಪರ ವಿ ರೋ ಧ ಚರ್ಚೆಗಳು ಬಹಳ ಜೋರಾಗಿ ನಡೆಯುತ್ತಿದೆ. ‌ಈಗ ಇದೇ ವಿಚಾರವಾಗಿ ಶಾಲಾ ವಿದ್ಯಾರ್ಥಿನಿಯೊಬ್ಬಳು ತಮ್ಮ ಅ ಸಮಾಧಾನ ಹೊರ ಹಾಕಿದ್ದು, ಬಾಲಕಿ ಹೇಳಿದ ಮಾತುಗಳು ಇದೀಗ ದೊಡ್ಡ ಸುದ್ದಿಯಾಗಿದೆ. ಗಂಗಾವತಿಯ ವಿದ್ಯಾರ್ಥಿನಿಯೊಬ್ಬಳು ಹೇಳಿಕೆಯೊಂದನ್ನು ನೀಡಿದ್ದು, ನಾವು ಮೊಟ್ಟೆ ತಿಂದು ಬದುಕುತ್ತೇವೆ, ಇಲ್ಲವಾದರೆ ಸಾಯುತ್ತೇವೆ ಎನ್ನುವ ಮಾತನ್ನು ಹೇಳಿರುವುದು ಈಗ ಎಲ್ಲರ ಗಮನವನ್ನು ಸೆಳೆದಿದೆ.

ಶಾಲೆಯಲ್ಲಿ ಮಕ್ಕಳಿಗೆ ಊಟದ ಜೊತೆಯಲ್ಲಿ ಮೊಟ್ಟೆಯನ್ನು ನೀಡುವ ವಿಚಾರವಾಗಿ ಕೆಲವು ಮಠಾಧೀಶರು ವಿ ರೋ ಧ ವನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಎಸ್ ಎಫ್ ಐ ಸಂಘಟನೆಯು ಮಠಾಧೀಶರ ಈ ಅಸಮಾಧಾನವನ್ನು ವಿ ರೋ ಧಿ ಸಿ ಹಮ್ಮಿಕೊಂಡಿದ್ದ ಪ್ರ ತಿ ಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯು ಇಂತಹ ಮಾತುಗಳನ್ನು ಆಡಿದ್ದಾಳೆ.
ಈ ವೇಳೆ ಬಾಲಕಿಯು ಮೊಟ್ಟೆ ತಿಂದರೇನೇ ನಾವು ಮುಂದೆ ಬದುಕುತ್ತೇವೆ. ಇಲ್ಲವಾದರೆ ನಾವು ಸಾಯುತ್ತೇವೆ. ನಾವು ಸಾಯವುದು ಬೇಕಾ??

ಅಥವಾ ಮೊಟ್ಟೆ ಕೊಡದೇ ಇರುವುದು ಬೇಕಾ?? ನೀವೇ ಹೇಳಿರೆಂದು ಬಾಲಕಿ ಪ್ರಶ್ನೆ ಮಾಡಿದ್ದಾಳೆ. ಇಷ್ಟೇ ಅಲ್ಲ ನಮಗೆ ಮೊಟ್ಟೆ ಕೊಡಬೇಡಿ ಎಂದು ವಿ ರೋ ಧ ಮಾಡಿದರೆ ನಾವು ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗುತ್ತೇವೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾಳೆ. ನಮಗೆ ಯಾಕೆ ಈ ರೀತಿ ವಿ ರೋ ಧ ಮಾಡುತ್ತಿದ್ದೀರಿ?? ಮಕ್ಕಳು ದೇವರ ಸಮಾನ ಅಂತಾರೆ, ಹಾಗಾದರೆ ದೇವರ ಆಸೆಯನ್ನು ಏಕೆ ಈಡೇರಿಸುವುದಿಲ್ಲ, ನಾವು ರಸ್ತೆಗಿಳಿದು ಹೋ ರಾ ಟ ಮಾಡಬೇಕಾ?? ಎಂದು ಮಠಾದೀಶರನ್ನು ಪ್ರಶ್ನೆ ಮಾಡಿದ್ದಾಳೆ ವಿದ್ಯಾರ್ಥಿನಿ.

ಇದೇ ವೇಳೆ ವಿದ್ಯಾರ್ಥಿನಿಯು ನಾವು ಒಂದಲ್ಲಾ ಎರಡು ಮೊಟ್ಟೆ ತಿಂತೀವಿ, ಅದನ್ನು ಕೇಳಲು ನೀವು ಯಾರು?? ನಾವು ನಿಮ್ಮ ಮಠಕ್ಕೆ ಸ್ನಾನ ಮಾಡಿ ಬಂದು ಪೂಜೆ ಮಾಡಿಲ್ಲವೇ?? ನಿಮಗೆ ದಕ್ಷಿಣೆಯನ್ನು ಹಾಕಿಲ್ಲವೇ?? ಎಂದೆಲ್ಲಾ ವಿದ್ಯಾರ್ಥಿನಿಯು ಸಾಲು ಸಾಲಾಗಿ ಪ್ರಶ್ನೆಗಳನ್ನು ಕೇಳಿದ್ದು, ಬಾಲಕಿಯು ಕೇಳಿದ ಈ ಪ್ರಶ್ನೆಗಳು ಈಗ ದೊಡ್ಡ ಸುದ್ದಿಯಾಗಿದೆ.

Leave a Comment