ಮೊಟ್ಟೆ‌ ಒಡೆಯುವ ಇಂತಹ ತಂತ್ರ ನೀವು ನೋಡಿರೋಕೆ ಸಾಧ್ಯ ಇಲ್ಲ: ಪ್ರತಿಯೊಬ್ಬರಿಗೂ ಆಗ್ತಿದೆ ಅಚ್ಚರಿ!!

Written by Soma Shekar

Updated on:

---Join Our Channel---

ಕೆಲಸ ಯಾವುದೇ ಆಗಿರಲಿ ಅದನ್ನು ಮಾಡಲು ಕೆಲಸದಲ್ಲಿ ಪರಿಣಿತಿ ಪಡೆದಿರುವವರು ಕೆಲವೊಂದು ತಂತ್ರಗಳನ್ನು ಬಳಸಿಕೊಳ್ಳುತ್ತಾರೆ. ಈ ತಂತ್ರಗಳ ಬಳಕೆಯಿಂದ ಮಾಡುವ ಕೆಲಸ ಸುಲಭವಾಗುತ್ತದೆ. ಅಲ್ಲದೇ ಅದರಿಂದ ಸಮಯ ಹಾಗೂ ಶ್ರಮದ ಉಳಿತಾಯವೂ ಆಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕೆಲಸಗಳಿಗೂ ಕೂಡಾ ಅದಕ್ಕೆ ಅನ್ವಯವಾಗುವಂತಹ ಹೊಸ ಹೊಸ ಯಂತ್ರಗಳು ಬಂದಿವೆ. ಈ ಯಂತ್ರಗಳ ಬಳಕೆಯಿಂದ ಜನರು ಬಹಳ ಸುಲಭವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಶ್ರಮ ಮತ್ತು ಸಮಯ ಉಳಿತಾಯ ಆಗುತ್ತಿದ್ದರೂ ಇನ್ನೊಂದು ಕಡೆ ಕೆಲವರು ಯಂತ್ರಗಳ ಕಾರಣದಿಂದಾಗಿಯೇ ಸೋಮಾರಿಗಳು ಸಹಾ ಆಗುತ್ತಿದ್ದಾರೆ.

ಪ್ರಸ್ತುತ ಕೆಲಸದಲ್ಲಿ ಬಳಸುವ ತಂತ್ರವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರ ಗಮನವನ್ನು ಸೆಳೆಯುತ್ತಿದೆ. ಈ ವಿಡಿಯೋ ನೋಡಿ ಅನೇಕ ಮಂದಿ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿರುವುದು ಮಾತ್ರವೇ ಅಲ್ಲದೇ ಅಂತಹದೊಂದು ವಸ್ತು ನಮ್ಮ ಮನೆಯಲ್ಲಿ ಇದ್ದರೂ ಬಹಳ ಉಪಯೋಗವಾಗುತ್ತದೆ ಎಂದು ಹೇಳುತ್ತಿದ್ದಾರೆ. ಹೌದು, ಸಾಮಾನ್ಯವಾಗಿ ಮೊಟ್ಟೆಯನ್ನು ಬಳಸಿ ಯಾವುದಾದರೂ ಆಹಾರ ತಯಾರಿಸುವಾಗ, ಮೊಟ್ಟೆಯನ್ನು ಒಡೆಯುವಾಗ ಎಚ್ಚರಿಕೆಯನ್ನು ವಹಿಸಲೇಬೇಕಾಗಿರುತ್ತದೆ.

ಮೊಟ್ಟೆಯನ್ನು ಕೈಯಿಂದ ಒಡೆಯುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೆ ಮೊಟ್ಟೆಯೊಳಗಿನ ದ್ರವ ಅಂಶವು ಹೊರೆಗಲ್ಲಾ ಚೆಲ್ಲುತ್ತದೆ. ಅದು ಪಾತ್ರೆಗಳ ಮೇಲೆ, ಬಟ್ಟೆಗಳ ಮೇಲೆ, ನೆಲದ ಮೇಲೆ ಕೂಡಾ ಬೀಳಬಹುದು. ಆದರೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮೊಟ್ಟೆಯನ್ನು ಆರಾಮವಾಗಿ ಒಡೆಯಲು, ಕೈಯಿಂದ ಬಳಸುವ ಒಂದು ಹೊಸ ಪರಿಕರವನ್ನು ನೋಡಬಹುದಾಗಿದೆ. ಇದನ್ನು ಬಳಸುವ ಮೂಲಕ ಯಾವುದೇ ಕಷ್ಟವಿಲ್ಲದೆ ಮೊಟ್ಟೆಯನ್ನು ಒಡೆದು ಹಾಕಿದ್ದಾರೆ.

ಮೊಟ್ಟೆ ಒಡೆಯುವಾಗ ಅದರ ಸಿಪ್ಪೆ ಅಲ್ಲಿ, ಇಲ್ಲಿ ಬಿಳುತ್ತದೆ ಎನ್ನುವ ಯೋಚನೆ ಮಾಡುವ ಅಗತ್ಯವೇ ಇಲ್ಲ. ಮೊಟ್ಟೆಯೊಳಗಿರುವ ದ್ರವ ಪದಾರ್ಥವು ಹೊರ ಚೆಲ್ಲುತ್ತದೆ ಎನ್ನುವ ಆ ತಂ ಕವೂ ಬೇಕಿಲ್ಲ. ಅಲ್ಲದೇ ಹೆಚ್ಚು ಸಮಯವೂ ಹಿಡಿಯುವುದಿಲ್ಲ. ಇಂತಹದೊಂದು ಪರಿಕರವನ್ನು ತೋರಿಸುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸೂಪರ್ ಐಟಂಸ್ ವರ್ಲ್ಡ್ ಎನ್ನುವ ಖಾತೆದಾರರು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ನೋಡಿದ ಜನರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಕೆಲವರು ಮೊಟ್ಟೆ ಒಡೆಯುವಂತಹ ಸುಲಭವಾದ ಕೆಲಸಕ್ಕೂ ಕೂಡ ಇಂತಹದೊಂದು ತಂತ್ರಜ್ಞಾನ ಬೇಕೇ ಎಂದು ಅಚ್ಚರಿಪಟ್ಟಿದ್ದಾರೆ. ವಿಡಿಯೋದಲ್ಲಿ ಗಮನಿಸಿದಾಗ ವ್ಯಕ್ತಿಯೊಬ್ಬರು ಸ್ಟೀಲ್ ನಿಂದ ತಯಾರಿಸಿದ ಕಡ್ಡಿಯಂತಹ ವಸ್ತುವೊಂದನ್ನು ಕೈಯಲ್ಲಿ ಹಿಡಿದಿರುತ್ತಾರೆ. ಅದರ ತಳ ಭಾಗವು ಮೊಟ್ಟೆಯ ಮೇಲ್ಭಾಗದ ಆಕಾರದಲ್ಲಿ ಕಾಣುತ್ತದೆ. ಆ ವ್ಯಕ್ತಿಯು ಒಡೆಯಬೇಕಾಗಿರುವ ಮೊಟ್ಟೆಯನ್ನು ತೆಗೆದುಕೊಂಡು ಆ ಭಾಗಕ್ಕೆ ಸೇರಿಸುತ್ತಾರೆ. ನಂತರ ಕಂಬಿಯ ಮೇಲಿರುವ ಗೋಲಿಯ ಆಕಾರದ ಚಲನೆಯುಳ್ಳ ಬಾಲ್ ಅನ್ನು ಯಂತ್ರದ ತಳಭಾಗದ ಮೇಲೆ ಜೋರಾಗಿ ಪ್ರೆಸ್ ಮಾಡುತ್ತಾರೆ.

https://www.instagram.com/reel/CYUcjWdo43V/?utm_source=ig_web_copy_link

ಆನಂತರ ಅವರ ಆ ಸ್ಟೀಲ್ ಕಡ್ಡಿಯನ್ನು ಪಕ್ಕಕ್ಕೆ ಸರಿಸಿ ಮೊಟ್ಟೆಯ ಮೇಲ್ಭಾಗವನ್ನು ಮುಚ್ಚಳದಂತೆ ಪಕ್ಕಕ್ಕೆ ತೆಗೆದು ಹಾಕಿ, ಮೊಟ್ಟೆಯೊಳಗಿರುವ ದ್ರವ ಪದಾರ್ಥವನ್ನು ಪಾತ್ರೆಗೆ ಬಗ್ಗಿಸಿ, ಮೊಟ್ಟೆಯ ಮೇಲ್ಬಾಗವನ್ನು ಪಕ್ಕದಲ್ಲಿರುವ ಟ್ರೇಯಲ್ಲಿ ಸುರಕ್ಷಿತವಾಗಿ ಇಡುತ್ತಾರೆ.‌ ಈ ವೀಡಿಯೋ ನೋಡಿದ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.‌ ದೊಡ್ಡ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೊಟ್ಟೆಗಳನ್ನು ಒಡೆಯ ಬೇಕಾಗಿರುವುದರಿಂದ ಕೈಯಲ್ಲಿ ಒಡೆಯುವುದು ಕಷ್ಟವಾಗುತ್ತದೆ ಆದ್ದರಿಂದ ಇಂತಹ ತಂತ್ರಗಳನ್ನು ಬಳಸುವುದು ಬಹಳ ಉಪಯುಕ್ತ ಎನ್ನುವ ಮಾತನ್ನು ಹೇಳಿದ್ದಾರೆ.

Leave a Comment