ಮೈಮರೆತು ನೀರಿನಲ್ಲಿ ಆಡುತ್ತಿದ್ದ ಯುವತಿ, ಅಷ್ಟ್ರಲ್ಲೇ ಎದುರಾಯ್ತು ಊಹಿಸಿರದ ಟ್ವಿಸ್ಟ್: ವೀಡಿಯೋ ನೀಡಿ!!

Entertainment Featured-Articles News
60 Views

ಮಳೆ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ. ಅತಿವೃಷ್ಟಿ ಅಥವಾ ಕುಂಭ ದ್ರೋಣ ಮಳೆ ಎಂದರೆ ಬೇಸರವೇ ಹೊರತು, ಬೇರೆ ಸಮಯದಲ್ಲಿ ಮಳೆಯಲ್ಲಿ ಆಡುವುದು ಎಂದರೆ ಅನೇಕರಿಗೆ ಬಹಳ ಇಷ್ಟ. ಕೆಲವರಿಗೆ ಮಳೆ ಹನಿಗಳು ಬೀಳುವಾಗ ಅದರಲ್ಲಿ ನೆನೆಯುತ್ತಾ ಆಡುವುದು ಇಷ್ಟ, ಇನ್ನೂ ಕೆಲವರು ಮಳೆಯಲ್ಲಿ ಕುಣಿದು ಕುಪ್ಪಳಿಸುವುದು ಕೂಡಾ ಉಂಟು. ಇನ್ನು ಇತ್ತೀಚಿನ ದಿನಗಳಲ್ಲಿ ಮಳೆಯು ಹೆಚ್ಚಿದ ಕಾರಣ ನಗರಗಳಲ್ಲಿ ಕೂಡಾ ರಸ್ತೆಗಳೆಲ್ಲಾ ಜಲಮಯವಾಗುವ ವೀಡಿಯೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ಈಗ ಇಂತಹ ಮಳೆಯ ವಾತಾವರಣದಲ್ಲಿ ನಡೆದ ಒಂದು ಫನ್ನಿ ದೃಶ್ಯದ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ, ಟ್ರೆಂಡಿಂಗ್ ಆಗುತ್ತಿದೆ. ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವತಿಯೊಬ್ಬಳು ಮಳೆಯ ನೀರಿನಲ್ಲಿ ಎಂಜಾಯ್ ಮಾಡುತ್ತಿರುವುದನ್ನು ನಾವು ನೋಡಬಹುದು, ಆದರೆ ಆ ವೀಡಿಯೋ ಕೊನೆಯಲ್ಲಿ ಇರುವ ಟ್ವಿಸ್ಟ್ ನೋಡಿದರೆ ನಿಮಗೂ ಕೂಡಾ ಖಂಡಿತ ಆಶ್ಚರ್ಯವಾಗುವುದು ಖಚಿತ. ಹಾಗಾದ್ರೆ ಈ ವೀಡಿಯೋದಲ್ಲಿ ಅಂತದ್ದೇನಿದೇ?? ತಿಳಿಯೋಣ ಬನ್ನಿ.

ಒಬ್ಬ ಯುವತಿ ಬಹಳ ಖುಷಿಯಿಂದ, ಸುರಿದ ಮಳೆಯಿಂದ ಎಲ್ಲೆಡೆ ನೀರು ತುಂಬಿರುವುದನ್ನು ಕಂಡು ಮೈಮರೆತು ಆ ನಿಂತ ನೀರಿನಲ್ಲಿ ಬಹಳ ಉಲ್ಲಾಸ ಹಾಗೂ ಉತ್ಸಾಹದಿಂದ ನೀರಿನಲ್ಲಿ ಆಡುತ್ತಾ ಬಹಳ ಸಂತೋಷದಿಂದ ಮುಂದೆ ಹೆಜ್ಜೆ ಇಡುತ್ತಾ, ತಾನು ನಿಂತಿದ್ದ ಜಾಗದಿಂದ ಮುಂದೆ ಹೋಗಲು ಪ್ರಯತ್ನಿಸುತ್ತಾಳೆ, ಆದರೆ ಆಗಲೇ ಆಕೆ ಅಲ್ಲಿ ಹಳ್ಳದಂತೆ ಇರುವುದು ತಿಳಿಯದ ಕಾರಣ, ನೀರಿನೊಳಗೆ ಬೀಳುತ್ತಾಳೆ. ಅದು ಯಾರೂ ಕೂಡಾ ಊಹೆ ಮಾಡಿರದ ಸನ್ನಿವೇಶವಾಗಿದೆ.

ಈ ವೀಡಿಯೋ ನೋಡಿ ನೆಟ್ಟಿಗರು ನಗುತ್ತಿದ್ದಾರೆ. ವೈರಲ್ ವೀಡಿಯೋವನ್ನು ಈಗಾಗಲೇ 74 ಸಾವಿರಕ್ಕಿಂತಲೂ ಅಧಿನ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಅಲ್ಲದೇ ವೈವಿದ್ಯಮಯ ಕಾಮೆಂಟ್ ಮಾಡಿರುವ ನೆಟ್ಟಿಗರು, ಅಯ್ಯೋ ಪಾಪ ಹುಡುಗಿ ಎಂದರೆ, ಇನ್ನೂ ಕೆಲವರು ಇಂತಹ ಎಲ್ಲಾ ವೀಡಿಯೋಗಳು ಬಹಳ ಮಧುರ, ಇವೆಲ್ಲಾ ಮಧುರ ಸ್ಮೃತಿಗಳಾಗಿ ಉಳಿಯುತ್ತವೆ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

Leave a Reply

Your email address will not be published. Required fields are marked *