ಮೇಲೇರಲು ನಿರ್ಧರಿಸಿದ ಮಹಿಳೆಗಿಂತ ಶಕ್ತಿಶಾಲಿ ಬಲ ಇನ್ನೊಂದಿಲ್ಲ: ಶಿಲ್ಪಾ ಶೆಟ್ಟಿ ಬರೆದ ಸ್ಪೂರ್ತಿಯ ಸಾಲು

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾದ ವಿಷಯ ಸ್ಟಾರ್ ನಟಿಯಾಗಿರುವ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಬಂಧನ. ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆಯ ವಿಚಾರದಲ್ಲಿ ಈಗಾಗಲೇ ರಾಜ್ ಕುಂದ್ರಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರೆದಿದೆ ಅಲ್ಲದೇ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.‌ ಇವೆಲ್ಲವುಗಳಿಂದ ನಟಿ ಶಿಲ್ಪಾ ಶೆಟ್ಟಿ ಕೂಡಾ ಸಮಸ್ಯೆಗಳಿಗೆ ಸಿಲುಕಿದ್ದುಂಟು, ಅವರನ್ನು ಸಹಾ ವಿಚಾರಣೆ ನಡೆಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಸಹಾ ಮಾಡಲಾಯಿತು. ಇವೆಲ್ಲವುಗಳಿಗಿಂದ ಬೇಸರಗೊಂಡ ನಟಿ ಶಿಲ್ಪಾ ಶೆಟ್ಟಿ ಅವದು ಒಂದಷ್ಟು ದಿನ ಮಾಧ್ಯಮಗಳಿಂದ ದೂರವೇ ಉಳಿದು ಬಿಟ್ಟಿದ್ದರು.

ಆದರೆ ಕೆಲವೇ ದಿನಗಳ ಹಿಂದೆ ಶಿಲ್ಪಾ ಶೆಟ್ಟಿ ಅವರು ಮತ್ತೆ ತಮ್ಮ ಕೆಲಸಕ್ಕೆ ಹಿಂತಿರುಗಿದ್ದಾರೆ. ಅವರು ಕಿರುತೆರೆಯಲ್ಲಿ ಜಡ್ಜ್ ಆಗಿರುವ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡಾನ್ಸರ್ ಗೆ ಕಂಬ್ಯಾಕ್ ಮಾಡಿದ್ದಾರೆ. ಕಳೆದ ವಾರ ಪ್ರಸಾರವಾದ ಎಪಿಸೋಡ್ ನಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನೃತ್ಯರೂಪಕವನ್ನು ನೋಡಿದ ಮೇಲೆ ಆವೇಶ ಹಾಗೂ ಭಾವುಕತೆಯಿಂದ ಮಾತನಾಡಿದ, ಶಿಲ್ಪಾ ಅವರು ಹೇಗೆ ಸ್ತ್ರೀಯರು ಪತಿಯ ನಂತರ ತಮ್ಮ ಜೀವನವನ್ನು ನಡೆಸಲು ಹೋರಾಟ ಮಾಡಬೇಕಾಗುತ್ತದೆ ಎನ್ನುವ ವಿಚಾರವನ್ನು ಮಾತನಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು.

ಈಗ ಇವೆಲ್ಲವುಗಳ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಅವರು ಅದರ ಜೊತೆಗೆ ಒಂದು ಸ್ಫೂರ್ತಿಯ ಸಾಲನ್ನು ಕೂಡಾ ಬರೆದುಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಅವರು ತಮ್ಮ ಪೋಸ್ಟ್ ನಲ್ಲಿ “ಮೇಲೇರಲು ದೃಢ ನಿರ್ಧಾರವನ್ನು ಮಾಡಿದ ಮಹಿಳೆಗಿಂತ ಶಕ್ತಿಶಾಲಿಯಾದ ಬಲ ಇನ್ಯಾವುದೂ ಇಲ್ಲ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾನು ತನ್ನ ಎಲ್ಲಾ ಸಮಸ್ಯೆಗಳಿಂದ ಮೇಲೆ ಬರಲು ಅವುಗಳನ್ನು ಎದುರಿಸಲು ಸಜ್ಜಾಗಿದ್ದೇನೆ ಎನ್ನುದ ದೃಢ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

Leave a Comment