ಮೇಡಂ ಹೊಡೀತಾರೆ ತಕ್ಷಣ ಅರೆಸ್ಟ್ ಮಾಡಿ: ಪೋಲಿಸ್ ಅಧಿಕಾರಿ ಬಳಿ ಹಠ ಹಿಡಿದ 2ನೇ ತರಗತಿ ಬಾಲಕ!

Entertainment Featured-Articles News Viral Video

ಶಾಲೆಗಳಲ್ಲಿ ಶಿಕ್ಷಕರು ಎಂದರೆ ಮಕ್ಕಳಿಗೆ ಒಂದು ಭ ಯ ಸಹಜವಾಗಿಯೇ ಇರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಭ ಯವನ್ನು ಹೋಗಲಾಡಿಸುವ ಸಲುವಾಗಿಯೇ ಶಾಲೆಗಳಲ್ಲಿ ಬೈ ಗುಳ ಮತ್ತು ದೈ ಹಿ ಕ ದಂ ಡ ನೆ ಎನ್ನುವುದನ್ನು ನಿಷೇಧ ಮಾಡಲಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಾಲೆಗಳಲ್ಲಿ ಶಿಕ್ಷಕರ ಮುಂದೆ ದಿಟ್ಟತನದಿಂದ ಮಾತನಾಡುವ, ಶಿಕ್ಷಕರನ್ನು ಪ್ರಶ್ನೆ ಮಾಡುವ, ಕೆಲವು ತುಂಟಾಟದ ಇನ್ನೂ ಕೆಲವು ಉದ್ದಟತನದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರಿಗೆ ಅಚ್ಚರಿ ಉಂಟು ಮಾಡುತ್ತಿವೆ.

ಈಗ ಅಂತಹುದೇ ಒಂದು ಘಟನೆಯಲ್ಲಿ ಎರಡನೆಯ ತರಗತಿಯ ಬಾಲಕನೊಬ್ಬನು ತನ್ನ ಶಿಕ್ಷಕಿಯ ವಿ ರು ದ್ಧ ದೂರನ್ನು ನೀಡಲು ನೇರವಾಗಿ ಪೋಲಿಸ್ ಠಾಣೆಗೆ ಹೋಗಿದ್ದಾನೆ. ಬಾಲಕ ಠಾಣೆಗೆ ಹೋದ ಎಂದ ಕೂಡಲೇ ಇದೊಂದು ಬಹಳ ಗಂಭೀರವಾದ ವಿಚಾರ ಎಂದು ಪರಿಗಣಿಸಬೇಡಿ. ಶಾಲೆಯಲ್ಲಿ ಶಿಕ್ಷಕಿಯು ತನಗೆ ದೈ ಹಿ ಕ ದಂ‌ ಡ ನೆ ನೀಡಿದರೆಂದು ಬೇಸತ್ತ ಬಾಲಕನು ಆಕೆಯ ಮೇಲೆ ದೂರನ್ನು ನೀಡಲು ಠಾಣೆಗೆ ಬಂದಿದ್ದು, ಘಟನೆಯ ವೀಡಿಯೋ ಸದ್ಯ ವೈರಲ್ ಆಗಿದೆ.

ತೆಲಂಗಾಣಾದ ಮೆಹಬೂಬಾಬಾದ್ ನ ಬಯ್ಯಾರಾಮ್ ಎಂಬಲ್ಲಿನ ಶಾಲೆಯೊಂದರಲ್ಲಿ ಓದುತ್ತಿರುವ ಎರಡನೆಯ ತರಗತಿಯ ವಿದ್ಯಾರ್ಥಿ ಅನಿಲ್ ಶಿ ಕ್ಷ ಕಿಯನ್ನು ಬಂಧಿಸುವಂತೆ ಕೋರುತ್ತಾ ಠಾಣೆಗೆ ಹೋಗಿದ್ದಾನೆ. ಪೋಲಿಸ್ ಠಾಣೆಯಲ್ಲಿ ರಮಾದೇವಿ ಎನ್ನುವ ಹೆಸರಿನ ಪೋಲಿಸ್ ಅಧಿಕಾರಿ ಇದ್ದು, ಅವರ ಬಳಿಗೆ ಬಂದ ಬಾಲಕ ಅನಿಲ್ ನನ್ನು ಆಕೆ ಠಾಣೆಗೆ ಏಕೆ ಬಂದೆ ಎಂದು ಕೇಳಿದ್ದಾರೆ. ಅದಕ್ಕೆ ಬಾಲಕ ಕೊಟ್ಟ ಉತ್ತರವು ಒಂದು ಕ್ಷಣ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಇದೆ.

ಬಾಲಕನು ಶಿಕ್ಷಕಿ ತನಗೆ ಹೊ ಡೆ ದಿದ್ದಾರೆ ಆದ್ದರಿಂದ ಅವರನ್ನು ಬಂಧಿಸಿ ಎಂದು ಕೇಳಿದ್ದಾನೆ. ಆಗ ಆ ಮಹಿಳಾ ಪೋಲಿಸ್ ಅಧಿಕಾರಿಯು ಬಾಲಕನನ್ನು ಶಿಕ್ಷಕಿ ಯು ಅವನಿಗೆ ಹೊ ಡೆಯಲು ಕಾರಣ ಏನು ಎಂದು ಕೇಳಿದಾಗ ತಾನು ಸರಿಯಾಗಿ ಓದುತ್ತಿಲ್ಲ ಅದಕ್ಕೆ ಎಂದಿದ್ದಾನೆ. ಅಧಿಕಾರಿಯು ಬಾಲಕನನ್ನು ಶಿಕ್ಷಕಿ ಬೇರೆಯವರನ್ನು ಹೊ ಡೆ ಯುವರಾ? ಎಂದು ಪ್ರಶ್ನೆ ಮಾಡಿದ್ದಾರೆ. ಬಾಲಕ ಇಲ್ಲ ತನ್ನನ್ನು ಮಾತ್ರವೇ ಹೊ ಡೆ ಯುತ್ತಾರೆ ಎಂದು ಹೇಳಿದ್ದಾನೆ.

ನಂತರ ಪೋಲಿಸ್ ಅಧಿಕಾರಿ ರಮಾದೇವಿ ತಾವೇ ಬಾಲಕನನ್ನು ಶಾಲೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ ಬಾಲಕ ಮಾತ್ರ ತಾನು ಶಾಲೆಗೆ ಬರುವುದಿಲ್ಲ ಎಂದು ಹಠ ಮಾಡಿದ್ದಾನೆ. ಇದಾದ ನಂತರ ಬಾಲಕನಿಗೆ ಕೌನ್ಸಿಲಿಂಗ್ ನಡೆಸಲಾಗಿದ್ದು, ಬಾಲಕನನ್ನು ಒಪ್ಪಿಸಿ ಶಾಲೆಗೆ ಕರೆದುಕೊಂಡು ಹೋಗಲಾಗಿದೆ ಎನ್ನುವ ಮಾಹಿತಿಯನ್ನು ಪೋಲಿಸ್ ಅಧಿಕಾರಿ ನೀಡಿದ್ದಾರೆ.

Leave a Reply

Your email address will not be published.