ಮೇಘಾ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಟೈಟಲ್ ಬಿಡುಗಡೆ ಯಾವಾಗ?? ಕುತೂಹಲ ಹುಟ್ಟಿಸಿದ ಸಿನಿಮಾ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಲೋಕದಲ್ಲಿ ದೊಡ್ಡ ಹೆಸರನ್ನು ಮಾಡಿರುವ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಮನೆ ಮನೆ ಮಾತಾಗಿದ್ದಾರೆ ನಟಿ ಮೇಘಾ ಶೆಟ್ಟಿ. ಈ ಸೀರಿಯಲ್ ನ ಪಾತ್ರದ ಮೂಲಕವೇ ಮೇಘಾ ಶೆಟ್ಟಿಯವರು ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದು ಅವರ ಮನೆ ಮಗಳಂತ ಸ್ಥಾನ ಪಡೆದಿದ್ದಾರೆ‌. ಸೀರಿಯಲ್ ಮಾಡುತ್ತಲೇ ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡಿದ್ದಾರೆ. ಅದರ ಬೆನ್ನಲ್ಲೇ ನಟಿ ಮೇಘಾ ಶೆಟ್ಟಿ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ಸಿನಿಮಾದಲ್ಲಿ ಸಹಾ ಬಣ್ಣ ಹಚ್ಚಿದ್ದಾರೆ.

ದಿಲ್ ಪಸಂದ್ ಸಿನಿಮಾದ ಜೊತೆಯಲ್ಲೇ ಮೇಘಾ ಶೆಟ್ಟಿಯವರು ಪ್ಯಾನ್ ಇಂಡಿಯಾ ಸಿನಿಮಾವೊಂದರ ನಾಯಕಿ ಕೂಡಾ ಆಗಿದ್ದಾರೆ. ನಟಿ ಮೇಘಾ ಶೆಟ್ಟಿ ಅವರು ಕವೀಶ್ ಶೆಟ್ಟಿ ನಾಯಕ ನಟನಾಗಿರುವ ಸಿನಿಮಾದಲ್ಲಿ ನಾಯಕಿಯಾಗಿದ್ದು, ಸಿನಿಮಾದ ಒಂದು ಹಂತದ ಚಿತ್ರೀಕರಣ ಸಹಾ ಈಗಾಗಲೇ ಮುಗಿದಿದೆ ಎನ್ನಲಾಗಿದೆ. ಆದರೆ ಇನ್ನೂ ಸಿನಿಮಾ ಟೈಟಲ್ ಮಾತ್ರ ಇನ್ನೂ ರಿವೀಲ್ ಮಾಡಿಲ್ಲ. ಮೇಘಾ ಶೆಟ್ಟಿ ನಾಯಕಿ ಆಗಿರುವ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ.

ಸಡಗರ ರಾಘವೇಂದ್ರ ಅವರು ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಇದು ಅವರ ನಿರ್ದೇಶನದ ಮೊದಲ ಸಿನಿಮಾ ಆಗಿದೆ. ಇನ್ನು ಚಿತ್ರ ತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆಯನ್ನು ನಡೆಸುತ್ತಿದೆ ಎನ್ನಲಾಗಿದೆ ಆದರೆ ಇಷ್ಟಾದರೂ ಸಹಾ ಸಿನಿಮಾ ಟೈಟಲ್ ಅನ್ನು ಮಾತ್ರ ಬಹಿರಂಗ ಪಡಿಸದೇ ಇರುವುದು ಸಹಜವಾಗಿಯೇ ಎಲ್ಲರಲ್ಲೂ ಕುತೂಹಲವನ್ನು ಕೆರಳಿಸಿದೆ. ಅಲ್ಲದೇ ಚಿತ್ರ ತಂಡ ಟೈಟಲ್ ಅನ್ನು ವಿಶೇಷವಾಗಿ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ ಎನ್ನಲಾಗಿದೆ.

Leave a Comment