ನಟಿ ಮೇಘನಾ ರಾಜ್ ತಮ್ಮ ಜೀವನದಲ್ಲಿ ಒಂದು ಹೊಸ ಆರಂಭಕ್ಕೆ ಸಜ್ಜಾಗಿದ್ದಾರೆ. ಜೀವನದಲ್ಲಿ ಘಟಿಸಿದ ಹಳೆಯ ನೋ ವಿನ ನೆನಪುಗಳಿಂದ ಹೊರ ಬರುತ್ತಿರುವ ಅವರು ಇನ್ನೂ ಸಿನಿಮಾಗಳ ಕಡೆಗೆ ಹೆಚ್ಚು ಸಕ್ರಿಯವಾಗಿಲ್ಲವಾದರೂ ಸಹಾ, ಕನ್ನಡ ಕಿರುತೆರೆಯ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ ಮೇಘನಾ ರಾಜ್. ಚಿರು ಅಗಲಿಕೆಯ ನಂತರ ವಿಶೇಷ ಸಂದರ್ಭಗಳ ಹೊರತಾಗಿ ಮೇಘನಾ ಹೆಚ್ಚಾಗಿ ಎಲ್ಲೂ ಸಹಾ ಕಾಣಿಸಿಕೊಂಡಿರಲಿಲ್ಲ. ಏಕೆಂದರೆ ಮುದ್ದು ಮಗನ ಕಡೆ ಗಮನ ನೀಡಿ, ಆತನ ಲಾಲನೆ ಪಾಲನೆಗೆ ಮೇಘನಾ ಪ್ರಾಮುಖ್ಯತೆಯನ್ನು ನೀಡಿದ್ದರು.
ಇತ್ತೀಚಿಗೆ ಮೇಘನಾ ಅವರು ಮತ್ತೆ ಸಿನಿಮಾಗಳಿಗೆ ಎಂಟ್ರಿ ನೀಡುತ್ತಿದ್ದಾರೆ ಎನ್ನುವ ವಿಷಯಗಳು ಸುದ್ದಿಯಾಗಿತ್ತು. ಆದರೆ ಯಾವ ಸಿನಿಮಾ? ಯಾರು ನಿರ್ದೇಶನ ಮಾಡಲಿದ್ದಾರೆ?? ಎನ್ನುವ ವಿಷಯಗಳು ಹೊರಗೆ ಬಂದಿಲ್ಲವಾದರೂ, ಇವೆಲ್ಲವುಗಳ ನಡುವೆಯೇ ಮೇಘನಾ ಅವರು ಕನ್ನಡ ಕಿರುತೆರೆಯಲ್ಲಿ ಆರಂಭವಾದ ಡಾನ್ಸ್ ರಿಯಾಲಿಟಿ ಶೋ ಡಾನ್ಸಿಂಗ್ ಚಾಂಪಿಯನ್ ನ ಮೊದಲ ಎಪಿಸೋಡ್ ನಲ್ಲಿ ಅತಿಥಿ ಜಡ್ಜ್ ಆಗಿ ಆಗಮಿಸಿ ಎಲ್ಲರ ಗಮನ ಸೆಳೆದರು.
ಮೇಘನಾ ಅವರು ಡಾನ್ಸಿಂಗ್ ಚಾಂಪಿಯನ್ ಶೋ ಗೆ ಬಂದಾಗ ಅವರು ಈ ಶೋ ಗೆ ಜಡ್ಜ್ ಅಗಲಿದ್ದಾರೆ, ಅವರ ಸಂಭಾವನೆ ಅಷ್ಟು, ಇಷ್ಟು ಎಂದೆಲ್ಲಾ ಸುದ್ದಿಗಳಾಗಿ ಹೋದವು. ಆದರೆ ಮೇಘನಾ ಅವರು ಬಂದಿದ್ದು ಆಗ ಕೇವಲ ಅತಿಥಿ ಜಡ್ಜ್ ಆಗಿ ಎನ್ನುವುದು ಮಾತ್ರ ವಾಸ್ತವ ವಿಷಯವಾಗಿತ್ತು. ಅಲ್ಲದೇ ಮೇಘನಾ ಅವರನ್ನು ಶೋ ನಲ್ಲಿ ನೋಡಿ ಅವರ ಅಭಿಮಾನಿಗಳು ಬಹಳ ಖುಷಿ ಪಟ್ಟರು, ಉತ್ತಮ ಪ್ರತಿಕ್ರಿಯೆಗಳು ಹರಿದು ಬಂದವು, ಆದರೆ ಮೇಘನಾ ಅವರು ಕೇವಲ ಅತಿಥಿಯಾಗಿ ಬಂದಿದ್ದಾರೆ ಎಂದಾಗ ಅನೇಕರು ಬೇಸರ ಪಟ್ಟಿದ್ದರು.
ಆದರೆ ಈಗ ಆ ಬೇಸರವನ್ನು ದೂರ ಮಾಡುವ ಸಮಯ ಬಂದಾಗಿದೆ. ಮೇಘನ ಅವರು ಇನ್ನುಮುಂದೆ ಡಾನ್ಸಿಂಗ್ ಚಾಂಪಿಯನ್ ಶೋ ನ ಖಾಯಂ ಜಡ್ಜ್ ಆಗಿ ಪ್ರತಿವಾರ ತಮ್ಮ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಮೇಘನಾ ಬಹು ದಿನಗಳ ನಂತರ ಮತ್ತೆ ತಮ್ಮ ವೃತ್ತಿ ಜೀವನದ ಸೆಕೆಂಡ್ ಇನ್ನಿಂಗ್ಸ್ ಅನ್ನು ಭರ್ಜರಿ ಡಾನ್ಸ್ ಶೋ ಮೂಲಕ ಮಾಡುತ್ತಿದ್ದಾರೆ ಹಾಗೂ ಇದು ಸಂತೋಷದ ವಿಚಾರವೂ ಆಗಿದೆ. ಮೇಘನಾ ಅವರು ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೇಘನಾ ಅವರು, ನೀವೆಲ್ಲರೂ ನಾನು ಮರಳಿ ಬರಬೇಕು ಎಂದು ಬಯಸಿದ್ರಿ, ಆದ್ದರಿಂದಲೇ ನಾನಿಲಿದ್ದೇನೆ, ನಾನು ಡಾನ್ಸಿಂಗ್ ಚಾಂಪಿಯನ್ ನ ಖಾಯಂ ಜಡ್ಜ್ ಆಗಿದ್ದೇನೆ, ಇದು ಖಂಡಿತವಾಗಿ ಅನಿರೀಕ್ಷಿತ, ಈ ಹೊಸ ಅನುಭವಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದ ಜನಪ್ರಿಯ ನತ್ಯಪಟು, ಕೊರಿಗೊಗ್ರಫರ್ ಮಯೂರಿ ಅವರು ಕಾರಣಾಂತರಗಳಿಂದ ಶೋ ನಿಂದ ಹೊರ ಬಂದ ಕಾರಣಕ್ಕೆ ಮೇಘನಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.