ಮೇಕಪ್ ನಿಂದ ಮೋಸ ಹೋದ ಯುವಕ: 52 ರ ಆಂಟಿ ಯುವಕನಿಗೆ ಮಾಡಿದ ಮೋಸ ತಿಳಿದು ಶಾಕ್ ಆದ ಜನ!!

Entertainment Featured-Articles News

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಬೇಕು ಎನ್ನುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಮೇಕಪ್ ನ ಅಡಿಯಲ್ಲಿ ಯುವಕನೊಬ್ಬನಿಗೆ ಸುಳ್ಳನ್ನೇ ನಿಜ ಎಂದು ನಂಬಿಸಿ ಮದುವೆಯಾಗಿರುವ ಘಟನೆಯೊಂದು ನಡೆದಿದ್ದು, ಈ ವಿಷಯ ಇದೀಗ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದೆ. ಹೌದು ಇಲ್ಲೊಬ್ಬ ಹಿರಿಯ ವಯಸ್ಸಿನ ಮಹಿಳೆ ತಾನೊಬ್ಬ ಯುವತಿ ಎಂದು ಭರ್ಜರಿ ಮೇಕಪ್ ನಿಂದ ಯುವಕನನ್ನು ಏಮಾರಿಸಿ ಆತನೊಂದಿಗೆ ಸಪ್ತಪದಿಯನ್ನು ತುಳಿದಿದ್ದಳು. ಆಕೆಯ ಮೇಕಪ್ ನಲ್ಲಿನ ಅಂದವನ್ನು ನೋಡಿ, ಮೆಚ್ಚಿ ಮದುವೆಯಾಗಿದ್ದ ಯುವಕ, ಆಕೆಯ ಮೂರನೇ ಗಂಡನಿಗೆ ಅನಂತರ ದೊಡ್ಡ ಶಾ ಕ್ ತಗುಲಿದೆ.

ಹೌದು, ನೆರೆಯ ಆಂಧ್ರಪ್ರದೇಶದ ತಿರುಪತಿಯಲ್ಲಿ ಮಹಿಳೆಯೊಬ್ಬರು ಭರ್ಜರಿ ಮೇಕಪ್ ಮಾಡಿಕೊಂಡು ತಾನೊಬ್ಬ ಯುವತಿ ಎಂದು ನಂಬಿಸಿ ಯಾಮಾರಿಸಿರುವ ಘಟನೆ ನಡೆದಿದೆ. ಶರಣ್ಯ ಎನ್ನುವ ಹೆಸರಿನ 52 ವರ್ಷ ವಯಸ್ಸಿನ ಮಹಿಳೆ 30 ವರ್ಷದ ಯುವಕನ ಜೀವನದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದಾನೆ. ವಿವರಗಳಿಗೆ ಹೋದರೆ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ಪುದುಪ್ಪೇಟ್ ನಲ್ಲಿ ವಾಸವಿರುವ 65 ವರ್ಷ ವಯಸ್ಸಿನ ಇಂದ್ರಾಣಿಯವರು ಮಗನಿಗೆ 30 ವರ್ಷ ವಯಸ್ಸು, ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್.

ಇಂದ್ರಾಣಿ ಅವರ ಮಗನಿಗೆ ಈಗಾಗಲೇ ಮದುವೆ ಆಗಿ ವಿಚ್ಚೇದನ ಪಡೆದಿದ್ದು, ಮಗನಿಗೆ ಎರಡನೇ ಮದುವೆ ಮಾಡಲು ಇಂದ್ರಾಣಿ ವಧುವಿನ ಅನ್ವೇಷಣೆಯಲ್ಲಿ ಇರುವಾಗಲೇ ಮದುವೆ ಬ್ರೋ ಕ ರ್ ಗಳ ಮೂಲಕ ಶರಣ್ಯ ಅವರಿಗೆ ಈ ಮದುವೆ ಪ್ರಸ್ತಾವ ಬಂದಿದೆ. ವರನ ಕಡೆಯವರು ವಧು ವನ್ನು ನೋಡಲು ಬರುತ್ತಿರುವ ವಿಚಾರ ತಿಳಿದ ಶರಣ್ಯ ಕೂಡಲೇ ಬ್ಯೂಟಿ ಪಾರ್ಲರ್ ಗೆ ತೆರಳಿ ಮೇಕಪ್ ಮಾಡಿಸಿಕೊಂಡು ಬಂದಿದ್ದಾರೆ. 52 ವಯಸ್ಸಿನ ಶರಣ್ಯ ವರನ ಕುಟುಂಬದ ಮುಂದೆ ತಾನು 30 ವರ್ಷದ ಯುವತಿ ಎಂದು ನಂಬಿಸಿದ್ದು, ವರನ ಕಡೆಯವರು ಮದುವೆಗೆ ಒಪ್ಪಿದ್ದಾರೆ.

ವರನ ಮನೆ ಕಡೆಯಿಂದ ಒಪ್ಪಿಗೆ ಸಿಕ್ಕ‌ ನಂತರ ತಿರುವಳ್ಳೂರ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ. ಮದುವೆಯಲ್ಲಿ ಇಂದ್ರಾಣಿಯವರು ವಧು ಶರಣ್ಯಗೆ 25 ಸವರನ್ ಚಿನ್ನ ನೀಡಿದ್ದಾರೆ. ಹೀಗೆ ಶರಣ್ಯ ಮೇಕಪ್ ನ ಮ್ಯಾಜಿಕ್ ನಿಂದ ಇಂದ್ರಾಣಿ ಅವರ ಮನೆಗೆ ಸೊಸೆಯಾಗಿದ್ದಾಗಿದೆ. ಮದುವೆ ನಂತರ ಶರಣ್ಯ ತನ್ನ ವರಸೆ ಬದಲಿಸಿದ್ದಾರೆ. ಅತ್ತೆ ಮತ್ತು ಗಂಡನ ಮೇಲೆ ಅಧಿಕಾರ ಚಲಾಯಿಸಲು ಆರಂಭಿಸಿದ ಶರಣ್ಯ ತನ್ನ ಅತ್ತೆಯನ್ನು ಮನೆಯಿಂದ ಹೊರಹಾಕಿದ್ದಾರೆ.

ನಂತರ ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಟಾ ರ್ಚ ರ್ ನೀಡಿದ್ದಾರೆ. ಕಡೆಗೆ ಆಕೆಯ ಕಾಟವನ್ನು ತಾಳಲಾರದೆ ಪತಿ ಆಸ್ತಿಯನ್ನು ಆಕೆಯ ಹೆಸರಿಗೆ ಮಾಡಲು ನಿರ್ಧಾರ ಮಾಡಿ, ಅದಕ್ಕಾಗಿ ಯಾವುದೇ ಕಾರ್ಯದ ನಿಮಿತ್ತ ಆಕೆಯ ಆಧಾರ್ ಕಾರ್ಡ್ ಪಡೆದಾಗ, ಅದರಲ್ಲಿ ಕೇರಾಫ್ ನಲ್ಲಿ ರವಿ ಹೆಸರನ್ನು ನೋಡಿ ಇಂದ್ರಾಣಿ ಮತ್ತು ಅವರ ಮಗನಿಗೆ ಅನುಮಾನ ಮೂಡಿ, ಪೋಲಿಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದಾಗ ಸಿಕ್ಕ ಮಾಹಿತಿಯಿಂದ ಎಲ್ಲರೂ ಶಾ ಕ್ ಆಗುವಂತಹ ವಿಷಯಗಳು ಹೊರ ಬಂದಿವೆ.

ತನಿಖೆಯಲ್ಲಿ ಶರಣ್ಯ ವಯಸ್ಸು 30 ಅಲ್ಲ ಬದಲಾಗಿ 52 ಎಂದು ತಿಳಿದು ಬಂದಿದೆ. ಅಲ್ಲದೇ ಆಕೆ ಈ ಮೊದಲೇ ಎರಡು ಮದುವೆ ಗಳನ್ನು ಮಾಡಿಕೊಂಡಿದ್ದಾರೆ ಎನ್ನುವ ಸಂಗತಿ ಸಹಾ ಹೊರ ಬಂದಿದೆ. ಆಕೆ ಮೇಕಪ್ ನ ಮಾಯಾ ಜಾಲ ಹರಡಿ ಮೂರನೇ ಮದುವೆ ಆಗಿದ್ದಾರೆ‌. ಆಕೆಗೆ ವಯಸ್ಸು ಮೂವತ್ತಲ್ಲ ಎನ್ನುವುದು ತಿಳಿದಾಗ ಖಂಡಿತ ಎಲ್ಲರಿಗೂ ಶಾ ಕ್ ಆಗಿದೆ. ಈ ವಿಷಯವು ಈಗ ಸುದ್ದಿಯಾಗಿದ್ದು, ಈ ವಿಚಾರವನ್ನು ತಿಳಿದು ಜನರು ಸಹಾ ಶಾ ಕ್ ಆಗಿದ್ದಾರೆ.

Leave a Reply

Your email address will not be published.