ಟಾಲಿವುಡ್ ಹೀರೋ, ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಸಲಾರ್, ಆದಿಪುರುಷ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅವರ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಓಂ ರಾವತ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆದಿಪುರುಷ್ ಸಿನಿಮಾದ ಚಿತ್ರೀಕರಣ ಮುಂಬೈ ಮಹಾನಗರಿಯಲ್ಲಿ ನಡೆಯುತ್ತಿದೆ. ಇತ್ತೀಚಿಗಷ್ಟೇ ನಟ ಪ್ರಭಾಸ್ ಅವರು ತಮ್ಮ ಸಿನಿಮಾ ಚಿತ್ರೀಕರಣವನ್ನು ಮುಗಿಸಿಕೊಂಡು ಹೊರ ಬರುವಾಗ, ಮಾದ್ಯಮಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ನಟ ಪ್ರಭಾಸ್, ಆದಿ ಪುರುಷ್ ಸಿನಿಮಾ ನಾಯಕಿ ಕೃತಿ ಸನೂನ್ ಇತರರು ಡಾನ್ಸ್ ರಿಹರ್ಸಲ್ ಮುಗಿಸಿ ಹೊರಗೆ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅವರು ಮೇಕಪ್ ಇಲ್ಲದೇ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದಾರೆ.
ಪ್ರಭಾಸ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಯಾವಾಗ ನಟ ಪ್ರಭಾಸ್ ಅವರ ಮೇಕಪ್ ಇಲ್ಲದೇ ಕಂಡ ಫೋಟೋಗಳು ವೈರಲ್ ಆದವೋ ಆಗಿನಿಂದ ಬಾಲಿವುಡ್ ನ ಸಿನಿ ಪ್ರೇಕ್ಷಕರು ಪ್ರಭಾಸ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಪ್ರಭಾಸ್ ಅವರ ರಿಯಲ್ ಲುಕ್ ನೋಡಿ ಬಹಳಷ್ಟು ಜನರು ವ್ಯಂಗ್ಯ ಮಾಡುತ್ತಿದ್ದಾರೆ. ಹಿಗ್ಗಾ ಮುಗ್ಗಾ ಟ್ರೋಲ್ ಮಾಡುತ್ತಿರುವ ಮಂದಿ ಮನಸ್ಸಿಗೆ ಬಂದಂತೆಲ್ಲಾ ಟೀಕೆ ಗಳನ್ನು ಮಾಡುತ್ತಾ ಸಾಗಿದ್ದು, ಪ್ರಭಾಸ್ ಅವರನ್ನು ಟ್ರೋಲ್ ಮಾಡಿರುವ ಫೋಟೋಗಳು, ವೀಡಿಯೋಗಳು ಸಹಾ ವೈರಲ್ ಆಗುತ್ತಾ ಸಾಗಿದೆ.
ಪ್ರಭಾಸ್ ಅವರ ವಿತೌಟ್ ಮೇಕಪ್ ಫೋಟೋ ನೋಡಿ ಅನೇಕರು ಪ್ರಭಾಸ್ ಅವರನ್ನು ನೋಡಿದ್ರೆ 50 ವರ್ಷದ ಅಂಕಲ್ ತರ ಕಾಣುತ್ತಿದ್ದಾರೆ ಎನ್ನುತ್ತಿದ್ದಾರೆ. ಒಬ್ಬ ನೆಟ್ಟಿಗರು, “ಪ್ರಭಾಸ್ ಮೇಕಪ್ ಇಲ್ಲದೇ 50 ರ ಅಂಕಲ್ ತರ ಇದ್ದು, ನೋಡಲು ಬಹಳ ಪೇಚು ಎನಿಸುತ್ತಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು , “ಪ್ರಭಾಸ್ ಏಕೆ ಅಂಕಲ್ ತರ ಕಾಣ್ತಾ ಇದ್ದಾರೆ, ಇವರೇನು ಹಾಲು ಮಾರೋನ ತರ ಇದ್ದಾರೆ, ಈತ ತಾತ ಆಗೋಗಿದ್ದಾನೆ” ಎಂದು ವ್ಯಂಗ್ಯ ಮಾಡಿದ್ದಾರೆ. ಉತ್ತರದಲ್ಲಿ ದಕ್ಷಿಣದ ಸಿನಿಮಾ ಸ್ಟಾರ್ ಗಳನ್ನು ಟ್ರೋಲ್ ಮಾಡಿರುವುದು ಇದೇ ಮೊದಲಲ್ಲ ಎನ್ನುವುದು ಸಹಾ ವಾಸ್ತವವಾಗಿದೆ.