ಮೆಹೆಂದಿ ರಂಗಿನಲ್ಲಿ ರಂಗಾದ ಕಿರುತೆರೆಯ ಜನಪ್ರಿಯ ನಟಿ: ಹಸೆ ಮಣೆ ಏರಲು ಸಜ್ಜಾದ ಕನ್ನಡದ ಅಂದಗಾತಿ

Entertainment Featured-Articles News
79 Views

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾಂಕ ಚಿಂಚೋಳಿ ಡಿಸೆಂಬರ್ 10 ರಂದು ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಪ್ರಿಯಾಂಕ ಚಿಂಚೋಳಿ ಅವರ ಮೆಹೆಂದಿ ಫಂಕ್ಷನ್ ಬಹಳ ಸಡಗರ ಮತ್ತು ಸಂಭ್ರಮದಿಂದ ನಡೆದಿದೆ. ಪ್ರಿಯಾಂಕ ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದೆ. ರಾಕೇಶ್ ಕುಮಾರ್ ಅವರ ಜೊತೆಗೆ ಪ್ರಿಯಾಂಕ ಹಸೆ ಮಣೆ ಏರಲಿದ್ದಾರೆ. ರಾಕೇಶ್ ಕುಮಾರ್ ಅವರು ಅಮೆರಿಕಾದ ಬ್ಯಾಂಕ್ ವೊಂದರಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಹೊಟೇಲ್ ಒಂದರಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಇನ್ನು‌ ಮದುವೆ ನಂತರ ಪ್ರಿಯಾಂಕ ಅವರು ಅಮೆರಿಕಾದಲ್ಲಿ ನೆಲೆಸುವರೋ ಅಥವಾ ಭಾರತದಲ್ಲೇ ಇರುವರೋ ಎನ್ನುವುದು ಮಾತ್ರ ಖಚಿತವಾಗಿಲ್ಲ. ಕಳೆದ ಪ್ರೇಮಿಗಳ ದಿನದಂದು ಪ್ರಿಯಾಂಕ ಹಾಗೂ ರಾಕೇಶ್ ಅವರ ನಿಶ್ಚಿತಾರ್ಥ ನಡೆದಿತ್ತು. ಅಲ್ಲದೇ ಇವರು ಸರಳವಾಗಿ ಈಗಾಗಲೇ ರಿಜಿಸ್ಟರ್ ಮ್ಯಾರೇಜ್ ಕೂಡಾ ಆಗಿದ್ದಾರೆ. ಮದುವೆ ನಂತರ ಕೂಡಾ ಪ್ರಿಯಾಂಕ ನಟನೆಯನ್ನು ಮುಂದುವರೆಸುತ್ತಾರೆ ಎನ್ನಲಾಗಿದೆ.

ಪ್ರಸ್ತುತ ಪ್ರಿಯಾಂಕ ಅವರು ಕಿರುತೆರೆಯ ಜನಪ್ರಿಯ ಸೀರಿಯಲ್ ಮನಸೆಲ್ಲಾ ನೀನೆಯಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಅವರು ಮನಸಾರೆ ಮತ್ತು ಹರ ಹರ ಮಹಾದೇವ ಸೀರಿಯಲ್ ಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಮೆಹಂದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿರುವ ನಟಿಗೆ ಅವರ ಅಭಿಮಾನಿಗಳು ಕಾಮೆಂಟ್ ಗಳನ್ನು ಮಾಡುವ ಹೊಸ ಜೀವನದ ಹಾದಿ ಸಂತೋಷವಾಗಿರಲಿ ಎಂದು ಶುಭವನ್ನು ಹಾರೈಸುತ್ತಿದ್ದಾರೆ.

Leave a Reply

Your email address will not be published. Required fields are marked *