ಮೆಹೆಂದಿಯ ಫ್ಯಾಷನ್ ಹೀಗೆಲ್ಲಾ ಉಂಟಾ?? ವೈರಲ್ ವೀಡಿಯೋ ನೋಡಿ ಬ್ಲೌಸ್ ದುಡ್ಡು ಉಳೀತು ಬಿಡಿ ಎಂದ್ರು ನೆಟ್ಟಿಗರು !!

Entertainment Featured-Articles News Viral Video

ಫ್ಯಾಷನ್ ಎನ್ನುವುದು ದಿನದಿನಕ್ಕೂ ಬದಲಾಗುತ್ತಲೇ ಇರುತ್ತದೆ. ಹೆಣ್ಮಕ್ಕಳು ಹೊಸ ಹೊಸ ಫ್ಯಾಷನ್ ಕಡೆಗೆ ಗಮನ ನೀಡುತ್ತಾ, ಹೊಸ ಹೊಸ ವಸ್ತ್ರ ವಿನ್ಯಾಸಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಇನ್ನು ಕೆಲವೊಮ್ಮೆ ಫ್ಯಾಷನ್ ಎಂದು ಧರಿಸುವ ವಿಶೇಷ ವಿನ್ಯಾಸ ವಸ್ತ್ರಗಳಂತೂ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗುತ್ತದೆ. ಅದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತವೆ. ಕೆಲವೊಮ್ಮೆ ನೆಟ್ಟಿಗರು ಕೆಲವೊಂದು ಫ್ಯಾಷನ್ ಅನ್ನು ವ್ಯಂಗ್ಯ ಮಾಡುವುದು ಉಂಟು ಹಾಗೂ ಕೆಲವೊಂದು ಟ್ರೋಲ್ ಆಗುವುದು ಸಹಾ ವಾಸ್ತವವಾಗಿದೆ.

ಸದ್ಯಕ್ಕೆ ಅಂತದ್ದೇ ಒಂದು ಹೊಸ ಫ್ಯಾಷನ್ ನ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ಇಷ್ಟೊಂದು ವೈರಲ್ ಆಗಲು ಕಾರಣವಾದರೂ ಏನು? ಎನ್ನುವಿರಾ. ಖಂಡಿತ ಇದಕ್ಕೊಂದು ಕಾರಣವಿದೆ. ಈ ವೀಡಿಯೋದಲ್ಲಿ ಮಹಿಳೆಯೊಬ್ಬರು ಅಂದವಾದ ಸೀರೆಯನ್ನು ಧರಿಸಿದ್ದಾರೆ. ಆದರೆ ಆ ಸೀರೆಗೆ ಬ್ಲೌಸ್ ಇಲ್ಲ. ಏನಿದು? ಅಂತ ಆಶ್ಚರ್ಯ ಪಡಬೇಡಿ. ಆ ಮಹಿಳೆ ಬ್ಲೌಸ್ ಬದಲಾಗಿ ಏನನ್ನು ಧರಿಸಿದ್ದಾರೆ ಎನ್ನುವುದೇ ಈಗ ಇಷ್ಟೊಂದು ಸುದ್ದಿಯಾಗಲು ಕಾರಣವಾಗಿದೆ.

ಮೆಹೆಂದಿ ಎನ್ನುವುದು ಅನೇಕ ಕಡೆಗಳಲ್ಲಿ ಸಂಭ್ರಮದ ಆಚರಣೆಗಳಲ್ಲಿ ಹೆಣ್ಣು ಮಕ್ಕಳ ಅಂದವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಮದುವೆಯ ಸಂದರ್ಭಗಳಲ್ಲಿ ಮೆಹೆಂದಿ ಶಾಸ್ತ್ರ ಕೂಡಾ ಇರುತ್ತದೆ. ಮೆಹೆಂದಿ ಎನ್ನುವುದು ಹೆಣ್ಣು ಮಕ್ಕಳು ಹಾಗೂ ಯುವತಿಯರು ಮತ್ತು ಮಹಿಳೆಯರ ಕೈ, ಕಾಲುಗಳ ಮೇಲೆ ಅಂದವಾಗಿ ಬಿಡಿಸಲ್ಪಟ್ಟು, ಒಂದು ಹೊಸ ಮೆರುಗನ್ನು ಅವರಿಗೆ ನೀಡುತ್ತದೆ.

ಆದರೆ ಇಲ್ಲೊಬ್ಬ ಮಹಿಳೆ ಮೆಹೆಂದಿ ವಿಚಾರದಲ್ಲಿ ಬೇರೆ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ Thomas_jatt ಎನ್ನುವ ಬಳಕೆದಾರರೊಬ್ಬರು ಒಂದು ವೀಡಿಯೋ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಮಹಿಳೆಯು ಅಂದವಾದ ಸೀರೆಯನ್ನು ಉಟ್ಟಿದ್ದಾರೆ. ಆದರೆ ಬ್ಲೌಸ್ ಬದಲಿಗೆ ಆಕೆ ಮೆಹೆಂದಿ ವಿನ್ಯಾಸವನ್ನು ಹಾಕಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಕುಪ್ಪಸ ಬೇಡ ಎಂದು, ಮೆಹೆಂದಿ ಧರಿಸಿ ಮಿಂಚಿದ್ದಾರೆ. ಇನ್ನು ಈ ಮೆಹೆಂದಿ ಬ್ಲೌಸ್ ಫೇಮಸ್ ಆದ್ರೂ ಅಚ್ಚರಿಯೇನಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವೀಡಿಯೋವನ್ನು ನೋಡಿದ ನೆಟ್ಟಿಗರಲ್ಲಿ ಕೆಲವರು ಮಹಿಳೆಯ ಬೋಲ್ಡ್ ಆಯ್ಕೆಯನ್ನು ಮೆಚ್ಚಿದ್ದರೆ ಇನ್ನೂ ಕೆಲವರು ಟೀಕೆ ಮಾಡಿದ್ದಾರೆ. ಫ್ಯಾಷನ್ ಹೆಸರಲ್ಲಿ ಏನಾದ್ರೂ ಮಾಡೋದು ಸರಿಯಲ್ಲ, ಸ್ವಲ್ಪ ಆದ್ರೂ ನಾಚಿಕೆ ಅನ್ನೋದು ಇರಬೇಕು ಎಂದು ಕೆಲವರು ಟೀಕಿಸಿದರೆ, ಇನ್ನೂ ಕೆಲವರು ಕುಪ್ಪಸ ಹೊಲೆಸುವ ಹಣ ಉಳಿಯಿತು ಬಿಡಿ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಾರೆ ವೀಡಿಯೋ ಮಾತ್ರ ಭರ್ಜರಿ ವೈರಲ್ ಆಗ್ತಿದೆ.

Leave a Reply

Your email address will not be published.