HomeEntertainmentಮೆಗಾಸ್ಟಾರ್ ಸೊಸೆ ಮೇಲೆ ನೆಟ್ಟಿಗರ ಆಕ್ರೋಶ: ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ ಆರೋಪ!

ಮೆಗಾಸ್ಟಾರ್ ಸೊಸೆ ಮೇಲೆ ನೆಟ್ಟಿಗರ ಆಕ್ರೋಶ: ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ ಆರೋಪ!

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಯಾವುದೇ ಒಂದು ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಸಾವಿರ ಸಲ ಯೋಚಿಸಬೇಕಾಗಿದೆ. ಏಕೆಂದರೆ ಅವರು ಹಂಚಿಕೊಂಡ ವಿಚಾರಗಳಲ್ಲಿ ಏನಾದರು ಒಂದು ಸಣ್ಣ ತಪ್ಪು ಕಂಡರೂ ಸಹಾ ದೊಡ್ಡ ವಿ ವಾ ದಗಳಿಗೆ ಅದು ಕಾರಣವಾಗಿ ಬಿಡುತ್ತದೆ. ಪ್ರಸ್ತುತ ಮೆಗಾ ಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೋನಿಡೇಲಾ ಅವರು ಶೇರ್ ಮಾಡಿಕೊಂಡ ಫೋಟೋ ಒಂದರ ವಿ ರು ದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಗಣರಾಜ್ಯೋತ್ಸವದ ದಿನದಂದು ಉಪಾಸನಾ ದೇವಾಲಯದ ಗೋಪುರವೊಂದರ ಚಿತ್ರವನ್ನು ಹಂಚಿಕೊಂಡಿದ್ದರು. ಇನ್ನು ಫೋಟೋ ದಲ್ಲಿ ಗಮನಿಸಿದಾಗ ದೇವಾಲಯದ ಗೋಪುರದ ಮೇಲೆ ದೇವರುಗಳ ಬದಲಾಗಿ ಸಾಮಾನ್ಯ ಮನುಷ್ಯರು ಇರುವುದು ಕಂಡು ಬಂದಿತ್ತು. ಇದನ್ನು ನೋಡಿದ ನೆಟ್ಟಿಗರು ಸಿಟ್ಟಾಗಿದ್ದಾರೆ. ಉಪಾಸನಾ ಅವರು ಒಂದು ಒಳ್ಳೆಯ ಉದ್ದೇಶದಿಂದಲೇ ಫೋಟೋ ವನ್ನು ಹಂಚಿಕೊಂಡಿದ್ದರೂ ಸಹಾ ಅನೇಕರು ಆ ಕ್ರೋ ಶ ವನ್ನು ಹೊರಹಾಕುತ್ತಾ ಟೀಕೆಯನ್ನು ಮಾಡುತ್ತಿದ್ದಾರೆ.

ಫೇಸ್ ಬುಕ್ ನಲ್ಲಿ ಫೋಟೋ ವನ್ನು ಹಂಚಿಕೊಂಡಿದ್ದರು ಉಪಾಸನಾ. ಅವರು ಫೋಟೋದ ಶೀರ್ಷಿಕೆಯಲ್ಲಿ , “ಈ ಅದ್ಬುತ ಚಿತ್ರಕ್ಕೊಂದು ಕ್ಯಾಪ್ಷನ್ ನೀಡಿ. ಒಂದು ಪ್ರಗತಿ ಶೀಲ ಹಾಗೂ ಸಹಿಷ್ಣು ರಾಷ್ಟ್ರವನ್ನು ನಿರ್ಮಾಣ ಮಾಡಲು ಯಾವುದೇ ಗಡಿಗಳು ಇಲ್ಲದೇ ಎಲ್ಲರೂ ತೊಡಗಿಕೊಳ್ಳೋಣ” ಎಂದು ಬರೆದುಕೊಂಡಿದ್ದರು. ಅಲ್ಲದೇ ಈ ಫೋಟೋದಲ್ಲಿ ನಾನು ಮತ್ತು ರಾಮ್ ಚರಣ್ ಎಲ್ಲಿದ್ದೇವೆ ಗುರುತಿಸಿ ಎನ್ನುವ ಸವಾಲನ್ನು ಸಹಾ ನೆಟ್ಟಿಗರಿಗೆ ಉಪಾಸನ ನೀಡಿದ್ದರು.

ಈ ಫೋಟೋ ವನ್ನು ತಮ್ಮ ತಾಯಿ ಕಳುಹಿಸಿದ್ದು, ತನಗೆ ಬಹಳ ಇಷ್ಟವಾಗಿದೆ. ಈ ಚಿತ್ರ ಬಿಡಿಸಿದ ಕಲೆಗಾರ ದಯವಿಟ್ಟು ನನಗೊಂದು ಸಂದೇಶವನ್ನು ಕಳುಹಿಸಿ, ನಾನು ಅವರನ್ನು ಅಭಿನಂದಿಸಲೇ ಬೇಕು ಎಂದಿದ್ದರು. ಉಪಾಸನ ಅವರು ಹಂಚಿಕೊಂಡ ಈ ಫೋಟೋ ವೈರಲ್ ಆದೊಡನೆ ಕೆಲವರು ಖ್ಯಾ ತೆ ತೆಗೆದಿದ್ದಾರೆ. ಇದು ಹಿಂದೂ ಧರ್ಮಕ್ಕೆ ಮಾಡಿರುವ ಅ ಪ ಮಾ ನ. ಹಿಂದೂ ದೇವಾಲಯದ ಚಿತ್ರವನ್ನು ವಿರೂಪಗೊಳಿಸಿದ್ದೀರಿ ಎಂದು ಸಿಟ್ಟನ್ನು ಹೊರ ಹಾಕಿದ್ದಾರೆ.

ಅಲ್ಲದೇ ನೆಟ್ಟಿಗರು ಮುಸ್ಲಿಂ ಧಾರ್ಮಿಕ ಸ್ಥಳಗಳ ಇಂತಹ ತಿರುಚಿದ ಫೋಟೋಗಳನ್ನು ಹಂಚಿಕೊಳ್ಳುವ ಧೈರ್ಯ ನಿಮಗಿದೆಯೇನು? ಎಂದು ಸಹಾ ಪ್ರಶ್ನೆ ಮಾಡಿದ್ದಾರೆ. ಉಪಾಸನಾ ಅವರ ಈ ಫೋಟೋ ಒಂದು ಚರ್ಚೆಯನ್ನು ಹುಟ್ಟುಹಾಕಲು ಹಾಕಿದೆ. ಇನ್ನು ಕೆಲವರು ಉಪಾಸನಾ ಅವರ ಪರವಾಗಿ ಮಾತನಾಡಿದ್ದು, ಪ್ರತಿಯೊಂದು ವಿಚಾರದಲ್ಲೂ ಧರ್ಮವನ್ನು ಎಳೆದು ತರಬೇಡಿ ಎಂದಿದ್ದಾರೆ.

- Advertisment -