ಮೆಗಾಸ್ಟಾರ್ ಜೊತೆ ನಾಯಕಿಯಾಗಿದ್ದ ನಟಿಗೆ ಗೆಳೆಯನಿಂದಲೇ ವಂಚನೆ, ಕೋಟಿ ಕೋಟಿ ಹಣಕ್ಕೆ ನಾಮ!!

Entertainment Featured-Articles News

ಜೀವನದಲ್ಲಿ ಕೆಲವರು ಬಹಳ ಮುಗ್ಧರಾಗಿದ್ದು, ಅವರನ್ನು ವಂ ಚ ಕರು ಸುಲಭವಾಗಿ ನಂಬಿಸಿ ಮೋಸ ಮಾಡುತ್ತಾರೆ. ಇಂತಹ ಸುದ್ದಿಗಳು ಹೊರ ಬಂದಾಗ ಮೋಸ ಹೋದವರ ಬಗ್ಗೆ ಕೇಳಿದಾಗ ಮರುಕ ಉಂಟಾಗುತ್ತದೆ. ಹೀಗೆ ಮೋ ಸ ಹೋಗುವವರಲ್ಲಿ ಕೇವಲ ಮುಗ್ಧರು ಮತ್ತು ಸಾಮಾನ್ಯ ಜನರು ಮಾತ್ತವೇ ಅಲ್ಲ ಸಿನಿಮಾ ಸೆಲೆಬ್ರಿಟಿಗಳು ಸಹಾ ಸೇರಿದ್ದಾರೆ. ಸಿನಿಮಾ ನಟ ನಟಿಯರು ವಂಚಕರ ಮೋಸದ ಜಾಲಕ್ಕೆ ಸಿಲುಕಿ ಮೋಸ ಹೋದ ವಿಚಾರಗಳು ಸುದ್ದಿಯಾದಾಗ ಅವು ಅಚ್ಚರಿಯನ್ನು ಮೂಡಿಸುತ್ತದೆ. ಈಗಾಗಲೇ ಹಲವು ನಟ ನಟಿಯರು ಇಂತಹ ಮೋಸದ ಜಾಲಕ್ಕೆ ಸಿಲುಕಿರುವುದುಂಟು.

ಈಗ ಇಂತಹುದೇ ಒಂದು ವಂಚನೆಗೆ ಒಳಗಾದ ಬಾಲಿವುಡ್ ನಟಿಯೊಬ್ಬರು ಪೋಲಿಸ್ ಠಾಣೆಯ ಮೆಟ್ಟಿಲನ್ನು ಏರಿದ್ದಾರೆ. ಹೌದು ಬಾಲಿವುಡ್ ನ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದ ನಟಿ ರಿಮ್ಮಿ ಸೇನ್ ಕಳೆದ ಕೆಲವು ವರ್ಷಗಳಿಂದ ಸಿನಿಮಾಗಳಲ್ಲಿ ಸಕ್ರಿಯವಾಗಿಲ್ಲ. ಆದರೆ ಕಳೆದೆರಡು ದಿನಗಳಿಂದ ರಿಮ್ಮಿ ಮತ್ತೆ ಸುದ್ದಿಯಾಗಿದ್ದಾರೆ. ನಟಿ ರಿಮ್ಮಿ ಬಾಲಿವುಡ್ ನಲ್ಲಿ ಹಂಗಾಮ, ಹೇರಾ ಪೇರಿ, ಬಾಗ್ಬಾನ್ ನಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸೂಪರ್ ಸಕ್ಸಸ್ ಪಡೆದಿದ್ದ ಧೂಮ್ ಸರಣಿಗಳಲ್ಲಿ ಅಭಿಷೇಕ್ ಬಚ್ಚನ್ ಪತ್ನಿಯಾಗಿ ಕಾಣಿಸಿಕೊಂಡಿದ್ದರು.

ರಿಮ್ಮಿ ತೆಲುಗಿನಲ್ಲಿ ಸಹಾ ನಟ ಚಿರಂಜೀವಿಗೆ ನಾಯಕಿಯಾಗಿ ಅಂದರಿವಾಡು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲೂ ಭಾಗವಹಿಸಿದ್ದುಂಟು. ಹೀಗೆ ಜನಪ್ರಿಯತೆ ಹಾಗೂ ಹಣ ಎರಡೂ ಇದ್ದ ನಟಿಗೆ 2019 ರಲ್ಲಿ ಜಿಮ್ ನಲ್ಲಿ ರೌನಕ್ ವ್ಯಾಸ್ ಹೆಸರಿನ ವ್ಯಕ್ತಿಯ ಪರಿಚಯವಾಗಿದ್ದು, ಅವರ ಪರಿಚಯ ಸ್ನೇಹವಾಯಿತು ಎನ್ನಲಾಗಿದೆ. ರೌನಕ್ ರಿಮ್ಮಿಗೆ ತಾನೊಬ್ಬ ಉದ್ಯಮಿ ಎಂದು ತನ್ನ ಪರಿಚಯ ನೀಡಿದ್ದನು‌.

ರೌನಕ್ ವ್ಯಾಸ್ ತನ್ನ ಹೊಸ ಉದ್ದಿಮೆಯಲ್ಲಿ ನಟಿಗೆ ಬಂಡವಾಳ ಹೂಡಲು ಪ್ರೇರೇಪಿಸಿದ್ದು, ಸುಮಾರು 25% ರಿಂದ 30% ಬಡ್ಡಿ ಕೊಡುವುದಾಗಿ ನಂಬಿಸಿದ್ದಾನೆ. ನಟಿಯೂ ಕೂಡಾ ಆತನ ಮಾತುಗಳಿಗೆ ಮರುಳಾಗಿ ಬರೋಬ್ಬರಿ 4.14 ಕೋಟಿ ರೂಪಾಯಿಗಳನ್ನು ಆತನಿಗೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಅನಂತರ ರೌನಕ್ ಯಾವುದೇ ಹೊಸ ಉದ್ಯಮ ತೆರೆಯದೇ ನಟಿಯ ಹಣದೊಂದಿಗೆ ಪರಾರಿಯಾಗಿದ್ದಾನೆ. ತಾನು ಮೋಸ ಹೋದುದರ ಅರಿವಾದ ನಟಿ ರಿಮ್ಮಿ ಮುಂಬೈನ ಖಾರ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ನಟಿಯ ದೂರಿನ ಆಧಾರದ ಮೇಲೆ ತನಿಖೆ ನಡೆಸಿರುವ ಪೋಲಿಸರಿಗೆ ರೌನಕ್ ಯಾವುದೇ ಉದ್ಯಮಿಯಾಗಿರಲಿಲ್ಲ ಎಂದು ತಿಳಿದು ಬಂದಿದ್ದು, ಆತ ರಿಮ್ಮಿ ಸೇನ್ ಅವರಿಗೆ ಹೇಳಿರುವುದೆಲ್ಲಾ ಸುಳ್ಳು ಎನ್ನಲಾಗಿದೆ. ಇನ್ನು ರಿಮ್ಮಿ ಸೇನ್ ಅವರಿಗೆ ಚಳ್ಳೆ ಹಣ್ಣು ತಿನಿಸಿದ ಆ ಚತುರ ವಂ ಚ ಕನ ಪತ್ತೆಗೆ ಪೋಲಿಸರು ಬಲೆಯನ್ನು ಬೀಸಿದ್ದಾರೆ. ಮೂಲತಃ ಬಂಗಾಳದವರಾದ ನಟಿ ರಿಮ್ಮಿ ಅವರ ನಿಜವಾದ ಹೆಸರು ಶುಭಮಿತ್ರ ಸೇನ್. ಸಿನಿಮಾ ರಂಗಕ್ಕೆ ಬಂದ ಮೇಲೆ ಅವರ ಹೆಸರು ರಿಮ್ಮಿ ಸೇನ್ ಆಗಿದೆ.

Leave a Reply

Your email address will not be published.