ಮೆಂತೆ ಸೊಪ್ಪಿನ ಮಹತ್ವ ಅರಿತು, ಸೇವಿಸಿ. ರೋಗ ರುಜಿನಗಳನ್ನು ಮೈಲು ದೂರವಿಡಿ.

Entertainment Featured-Articles Health News
35 Views

ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಕಡೆಗೆ ಹಾಗೂ ಆರೋಗ್ಯ ವೃದ್ಧಿಸುವ ಹಣ್ಣು, ತರಕಾರಿ ಹಾಗೂ ಸೊಪ್ಪುಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಏಕೆಂದರೆ ಪ್ರಸ್ತುತ ರೋಗ ನಿರೋಧಕ ಶಕ್ತಿಯೇ ರೋಗಗಳನ್ನು ದೂರ ಇಡುವ ಪ್ರಮುಖ ಅಸ್ತ್ರ ಎನ್ನುವುದು ಜನರಿಗೆ ಅರಿವಾಗಿದೆ. ಅಲ್ಲದೇ ಹಸಿರು ಸೊಪ್ಪು ಮತ್ತು ತರಕಾರಿಗಳ ಸೇವನೆ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ ಎನ್ನುವುದು ಸಾಬೀತಾಗಿದೆ‌. ಆದರೂ ಅನೇಕರಿಗೆ ಹಸಿರು ಸೊಪ್ಪಿನ ಮಹತ್ವವೇ ತಿಳಿದಿಲ್ಲ ಎನ್ನುವುದು ಸಹಾ ನಿಜವಾಗಿದೆ.

ಹಸಿರು ಸೊಪ್ಪುಗಳು ನಿಜಕ್ಕೂ ಒಂದು ರೀತಿಯಲ್ಲಿ ಅನೇಕ ಸಮಸ್ಯೆಗಳ ನಿವಾರಣೆಗೆ ಸಿದ್ಧೌಷಧಗಳು ಎನಿಸಿದೆ. ಅಂತಹ ಹಸಿರು ಸೊಪ್ಪುಗಳಲ್ಲಿ ನಾವಿಂದು ನಿಮಗೆ ಒಂದು ವಿಶೇಷವಾದ ಸೊಪ್ಪು ಅಂದರೆ ಮೆಂತೆ ಸೊಪ್ಪಿನ ಸೇವನೆಯಿಂದ ಆಗುವ ಉಪಯೋಗಗಳು ಹಾಗೂ ಆರೋಗ್ಯಕ್ಕೆ ಆಗುವ ಲಾಭಗಳು ಏನೇನು ಎಂಬುದನ್ನು ತಿಳಿಯೋಣ. ಇದು ತಿಳಿದ ಮೇಲೆ ಖಂಡಿತ ನೀವು ಸಹಾ ಮೆಂತೆ ಸೊಪ್ಪನ್ನು ಬಳಸಲು ಆರಂಭಿಸುವಿರಿ. ಹಾಗಾದರೆ ಬನ್ನಿ ಮೆಂತೆ ಸೊಪ್ಪಿನ ಮಹತ್ವವನ್ನು ತಿಳಿಯೋಣ.

  • ಮೆಂತೆ ಸೊಪ್ಪಿನ ಸೇವನೆಯಿಂದ ಕೆಮ್ಮು ಮತ್ತು ಚರ್ಮದ ಸಮಸ್ಯೆಗಳನ್ನು ದೂರ ಮಾಡಬಹುದು.
  • ಕಿಡ್ನಿ ಸಮಸ್ಯೆ ಮತ್ತು ಊತ ಹಾಗೂ ದೇಹದಲ್ಲಿ ಉಂಟಾಗುವ ನೋವುಗಳಿಗೆ ಇದು ಪರಿಹಾರವನ್ನು ಒದಗಿಸಬಲ್ಲುದು.
  • ರಕ್ತಹೀನತೆಯಿಂದ ಬಳಲುವವರಿಗೆ ಇದು ಬಹಳ ಉಪಯೋಗಕಾರಿ. ಹಸಿ ಮೆಂತೆ ಸೊಪ್ಪನ್ನು ತರಕಾರಿಗಳ ಸಲಾಡ್ ನ ಜೊತೆಗೆ ಸೇವನೆ ಮಾಡುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.
  • ಮೆಂತೆ ಸೊಪ್ಪಿನಲ್ಲಿ ಇರುವಂತಹ ನಾರಿನ ಅಂಶವು ನಮ್ಮ ದೇಹಕ್ಕೆ ಅಗತ್ಯ ಇರುವ ನಾರಿನಂಶವನ್ನು ನೀಡುತ್ತದೆ. ಇದರಿಂದ ಮಲಬದ್ಧತೆಯಂತಹ ಸಮಸ್ಯೆ ಇದ್ದರೆ ಅದು ದೂರಾಗುತ್ತದೆ.
  • ಮೆಂತೆ ಸೊಪ್ಪು ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟರಾಲ್‌ ಪ್ರಮಾಣವನ್ನು ಹೆಚ್ಚಿಸುತ್ತದೆ. ಒಟ್ಟಾರೆ ಮೆಂತೆ ಸೊಪ್ಪು ನಮ್ಮ ದೇಹಕ್ಕೆ ಪೂರಕವಾದ ಅನೇಕ ಗುಣಗಳನ್ನು ಹೊಂದಿದೆ ಎನ್ನುವುದು ವಾಸ್ತವ.

Leave a Reply

Your email address will not be published. Required fields are marked *