ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ದು:5ನೇ ವಯಸ್ಸಿಗೆ ವಿಶ್ವ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹ
ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಎನ್ನುವ ಖ್ಯಾತಿಯನ್ನು ಪಡೆದಿರುವ ನಟ ಅಲ್ಲು ಅರ್ಜುನ್ ತೆಲುಗು ಚಿತ್ರ ಸೀಮೆಯಲ್ಲಿ ದೊಡ್ಡ ಅಭಿಮಾನಿಗಳನ್ನು ಪಡೆದುಕೊಂಡ, ಸ್ಟಾರ್ ಕುಟುಂಬದ ಕುಡಿಯಾಗಿ, ಸ್ಟಾರ್ ವ್ಯಾಲ್ಯೂ ಪಡೆದಿರುವಂತಹ ಜನಪ್ರಿಯ ನಟ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಪ್ರಸ್ತುತ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ ಪುಷ್ಪ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಅಲ್ಲು ಅರ್ಜುನ್ ಕುಟುಂಬದಿಂದ ಒಂದು ಸಂಭ್ರಮದ, ಸಾಧನೆಯ ವಿಷಯವೊಂದು ಹೊರ ಬಂದು, ಸದ್ದು ಮಾಡುತ್ತಿದೆ.
ನಟ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ದಂಪತಿಯ ಮಗಳು ಅಲ್ಲು ಅರ್ಹ. ಅಲ್ಲು ಅರ್ಜುನ್ ಮಗಳಿಗೆ ಈಗ ಐದು ವರ್ಷ. ಈ ಪುಟ್ಟ ಪೋರಿಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಲ್ಲದೇ ಅಲ್ಲು ಅರ್ಹ ಕೂಡಾ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಮೂಲಕ ಸಿನಿ ರಂಗಕ್ಕೆ ಅಡಿಯಿಡುತ್ತಿರುವುದು ವಿಶೇಷ. ಆದರೆ ಈಗ ಸಿನಿಮಾ ಅಲ್ಲದೇ ಅಲ್ಲು ಅರ್ಹ ಹೊಸದೊಂದು ದಾಖಲೆಯನ್ನು ಮಾಡಿದ್ದು, ಅಲ್ಲು ಅರ್ಜುನ್ ಹಾಗೂ ಅವರ ಪತ್ನಿ ಸ್ನೇಹ ರೆಡ್ಡಿ ಸಂಭ್ರಮದಲ್ಲಿದ್ದಾರೆ.
ಅಲ್ಲು ಅರ್ಹ ಜನ್ಮದಿನದ ಹಿನ್ನೆಲೆಯಲ್ಲಿ ಸ್ನೇಹ ರೆಡ್ಡಿ ಅವರು ಮಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಜನ್ಮದಿನದ ಶುಭಾಶಯವನ್ನು ಕೋರುವುದರ ಜೊತೆಗೆ ಒಂದು ವೀಡಿಯೋ ಶೇರ್ ಮಾಡಿಕೊಂಡಿದ್ದು, ಮಗಳು ಮಾಡಿರುವ ಸಾಧನೆಯನ್ನು ಎಲ್ಲರ ಜೊತೆಗೆ ಹಂಚಿಕೊಂಡು ಖುಷಿ ಪಟ್ಟಿದ್ದಾರೆ. ಹಾಗಾದರೆ ಅಲ್ಲು ಅರ್ಹ ಮಾಡಿದ ಆ ಸಾಧನೆ ಏನು?? ಐದನೇ ವಯಸ್ಸಿಗೆ ಅರ್ಹ ಯಾವ ದಾಖಲೆಯನ್ನು ಬರೆದಿದ್ದಾಳೆ?? ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ನಟ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಅತಿ ಕಿರಿಯ ವಯಸ್ಸಿನ ಚೆಸ್ ತರಬೇತುದಾರ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡು, ನೊಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಪ್ರವೇಶವನ್ನು ಪಡೆದುಕೊಂಡು, ಹೊಸ ದಾಖಲೆಯನ್ನು ಮಾಡಿದ್ದು, ಕಿರಿಯ ವಯಸ್ಸಿಗೆ ಇಂತಹುದೊಂದು ದಾಖಲೆಯನ್ನು ಮಾಡಿರುವುದು ಅಲ್ಲು ಅರ್ಜುನ್, ಸ್ನೇಹ ರೆಡ್ಡಿ ದಂಪತಿಗೆ ಮಾತ್ರವೇ ಅಲ್ಲದೇ ಅವರ ಅಭಿಮಾನಿಗಳಿಗೂ ಸಹಾ ಖುಷಿಯನ್ನು ನೀಡಿದೆ.