3 ವರ್ಷವಾದ್ರೂ, ಸೀರಿಯಲ್ಲೇ ಮುಗಿದ್ರು ನಟಿಯ ಸಂಕಷ್ಟ ಕರಗಲಿಲ್ಲ: ಬಣ್ಣದ ಲೋಕದ ಕಹಿ ಸತ್ಯ ಬಿಚ್ಚಿಟ್ಟ ನಟಿ

Entertainment Featured-Articles News

ಕಿರುತೆರೆಯಾಗಲೀ, ಬೆಳ್ಳಿ ತೆರೆಯಾಗಲೀ ಬಣ್ಣದ ಲೋಕವು ಸದಾ ಮಿರಿ ಮಿರಿ ಮಿಂಚುವುದು ಮಾತ್ರ ಖಚಿತ. ಅಲ್ಲಿನ ಕಲಾವಿದರ ಬದುಕು ಸದಾ ಪ್ರಮುಖ ಆಕರ್ಷಣೆಯಾಗಿರುತ್ತದೆ. ಅವರ ಬದುಕಿನ ಬಗ್ಗೆ ತಿಳಿಯುವ ಆಸಕ್ತಿ, ಕುತೂಹಲ ಪ್ರೇಕ್ಷಕರು ಹಾಗೂ ಅಭಿಮಾನಿಗಳಲ್ಲಿ ಸದಾ ಇರುತ್ತದೆ. ಆದರೆ ಈ ಬಣ್ಣದ ಲೋಕದ ಐಶಾರಾಮೀ ಬದುಕು ಎಲ್ಲಾ ಕಲಾವಿದರಿಗೂ ಒಂದೇ ರೀತಿ ಇರುತ್ತದೆ ಎನ್ನುವುದರಲ್ಲಿ ಮಾತ್ರ ಯಾವುದೇ ಅನುಮಾನವಿಲ್ಲ. ಅವಕಾಶ ಇದ್ದರೆ ರಂಗಿನ ಬದುಕು ರಂಗಾಗಿರುತ್ತದೆ, ಇಲ್ಲವಾದರೆ ಬದುಕಿನ ರಂಗು ದೂರವಾಗಿ ಬಿಡುತ್ತದೆ. ‌

ಅಂತಹುದೇ ಒಂದು ಕಹಿ ಅನುಭವವನ್ನು ಹಿಂದಿ ಕಿರುತೆರೆಯ ಜನಪ್ರಿಯ ನಟಿ, ಇದೀಗ ಬೆಳ್ಳಿ ತೆರೆಗೂ ಅಡಿಯಿಟ್ಟಿರುವ ನಟಿ ಸೋನಾರಿಕಾ ಭಡೋರಿಯಾ ಹಂಚಿಕೊಂಡಿದ್ದಾರೆ. ನಟಿ ಸೋನಾರಿಕಾ ತಮ್ಮ ಅಂದ ಮತ್ತು ಅಭಿನಯಕ್ಕೆ ಹೆಸರಾದ ನಟಿ. ಮಹಾದೇವ್ ಸೀರಿಯಲ್ ನಲ್ಲಿ ದೇವಿ ಪಾರ್ವತಿಯಾಗಿ ಕೆಲವು ಕಾಲ ಮಿಂಚಿದ್ದ ಈ ನಟಿ ಅನಂತರ ಆ ಪಾತ್ರದಿಂದ ಹೊರ ಬಂದಿದ್ದರು. ಕೆಲವು ಜನಪ್ರಿಯ ಸೀರಿಯಲ್ ಗಳಲ್ಲಿ ನಟಿಸಿರುವ ಸೋನಾರಿಕಾ ತೆಲುಗು, ಹಿಂದಿ ಸಿನಿಮಾಗಳಲ್ಲಿ ಸಹಾ ಕಾಣಿಸಿಕೊಂಡಿದ್ದಾರೆ.

ಸೋನಾರಿಕಾ ತುಮ್ ದೇನಾ ಸಾಥ್ ಮೇರಾ ಎನ್ನುವ ಸೀರಿಯಲ್ ಮೂಲಕ 2011-12 ರಲ್ಲಿ ಕಿರುತೆರೆಗೆ ಎಂಟ್ರಿ ನೀಡಿದ್ದರು. ಸೋನಾರಿಕಾ 2018 ರಲ್ಲಿ ದಾಸ್ತಾನ್ ಎ ಮೊಹಬ್ಬತ್ : ಸಲೀಂ ಅನಾರ್ಕಲಿ ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸೀರಿಯಲ್ ನ 69 ಎಪಿಸೋಡ್ ಗಳು ಪ್ರಸಾರ ಆಗಿದ್ದವು. ಈ ಸೀರಿಯಲ್ ಗಾಗಿ ಸೋನಾರಿಕಾ ಅವರಿಗೆ 70 ಲಕ್ಷ ರೂ. ಗಳ ಸಂಭಾವನೆಯನ್ನು ನಿರ್ಮಾಣ ಸಂಸ್ಥೆ ನಿಗಧಿ ಮಾಡಿತ್ತು. ಆದರೆ ಆ ಹಣ ಇನ್ನೂ ಬಾಕಿ ಇದೆ.

ಹೌದು, ಸೀರಿಯಲ್ ಮುಗಿದು ಮೂರು ವರ್ಷವಾದರೂ ಸಹಾ ಸೋನಾರಿಕಾ ಅವರಿಗೆ ಇನ್ನೂ ಅವರ 70 ಲಕ್ಷ ಸಂಭಾವನೆ ನೀಡಿಲ್ಲ ಎನ್ನುವ ವಿಚಾರವನ್ನು ಹೇಳಿರುವ ಸೋನಾರಿಕಾ ಅವರು ತಾನು ಸಂಭಾವನೆ ಕೇಳಿದಾಗಲೆಲ್ಲಾ ಅವರು ಒಂದೊಂದು ಕಥೆಯನ್ನು ಹೇಳುತ್ತಾ ಸಂಭಾವನೆಯನ್ನು ಮುಂದೂಡುತ್ತಾ ಬರುತ್ತಿದ್ದಾರೆ ಎಂದಿದ್ದಾರೆ. ಇನ್ನು ವೃತ್ತಿ ವಿಚಾರವಾಗಿ ಬಂದರೆ ಸೋನಾರಿಕ ಅವರು ಸಿ‌‌ನಿಮಾಗಳಲ್ಲಿ ನಟಿಸಿದ್ದು ಕೊರೊನಾ ಕಾರಣದಿಂದ ಅವರ ಸಿನಿಮಾ ಬಿಡುಗಡೆ ಸಹಾ ತಡವಾಗಿದೆ ಎನ್ನಲಾಗಿದೆ.

Leave a Reply

Your email address will not be published.