ಮೂರಲ್ಲ ನಾಲ್ಕು ಮದುವೆ ಆಗ್ತಾರಂತೆ ಮೆಗಾಸ್ಟಾರ್ ಚಿರಂಜೀವಿ ಮಗಳು ಶ್ರೀಜಾ!!

Entertainment Featured-Articles Movies News

ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರ ಮಗಳು ಶ್ರೀಜಾ ಕೊನಿಡೇಲ. ಶ್ರೀಜಾ ಮದುವೆಯ ವಿಚಾರವು ಟಾಲಿವುಡ್ ಮಾತ್ರವೇ ಅಲ್ಲ, ದಕ್ಷಿಣ ಸಿನಿಮಾ ರಂಗದಲ್ಲಿ ಸಹಾ ಹಾಟ್ ಹಾಟ್ ಟಾಪಿಕ್ ಆಗಿ ಹರಿದಾಡಿದೆ. ಹೌದು, ಶ್ರೀಜಾ ಮೂರನೇ ಮದುವೆಯ ವಿಚಾರವು ಇದೀಗ ಅನೇಕರು ಈ ವಿಚಾರದ ಕುರಿತಾಗಿ ಮಾತನಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಶ್ರೀಜಾ ವಿಚಾರವಾಗಿ ಎಲ್ಲೂ ಯಾವುದೇ ರೀತಿಯ ವಿಚಾರಗಳನ್ನು ಹಂಚಿಕೊಳ್ಳುತ್ತಿಲ್ಲವಾದರೂ ಸೋಶಿಯಲ್ ಮೀಡಿಯಾದಲ್ಲಿ ಶ್ರೀಜಾ ನಡೆ ಅನುಮಾನ ಮೂಡಿಸಿದೆ.

ಶ್ರೀಜಾ ಮೊದಲು ಸಿರೀಶ್ ಎನ್ನುವ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಸಹಾ ಇದೆ. ಆದರೆ ಇವರ ಸಂಸಾರ ಹೆಚ್ಚು ದಿನಗಳ ಕಾಲ ಹಿಡಿಯಲಿಲ್ಲ. ಇಬ್ಭರ ನಡುವೆ ಏರ್ಪಟ್ಟ ಭಿನ್ನಾಭಿಪ್ರಾಯಗಳ ಕಾರಣದಿಂದ ಶ್ರೀಜಾ ಮತ್ತು ಸಿರೀಶ್ ಇಬ್ಬರೂ ಬೇರೆ ಬೇರೆಯಾದರು. ಇದಾದ ನಂತರ ಶ್ರೀಜಾ ಬಾಳಿನಲ್ಲಿ ಬಂದಂತಹ ವ್ಯಕ್ತಿಯೇ ಕಲ್ಯಾಣ್ ದೇವ್. ಮೆಗಾಸ್ಟಾರ್ ಮಗಳಿಗಾಗಿ ಆರಿಸಿದ ಹುಡುಗ ಕಲ್ಯಾಣ್ ದೇವ್ ಜೊತೆಗೆ ಶ್ರೀಜಾ ಎರಡನೇ ಮದುವೆಯಾದರು.

ಆದರೆ ಇತ್ತೀಚಿಗೆ ಶ್ರೀಜಾ ಮತ್ತು ಕಲ್ಯಾಣ್ ದೇವ್ ಸಹಾ ದೂರವಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ. ಶ್ರೀಜಾ ಸೋಶಿಯಲ್ ಮೀಡಿಯಾಗಳಲ್ಲಿ ಕಲ್ಯಾಣ್ ದೇವ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಅಲ್ಲದೇ ತನ್ನ ಸರ್ ನೇಮ್ ನಲ್ಲಿ ಮತ್ತೆ ತಂದೆಯ ಮನೆಯ ಹೆಸರನ್ನು ಹಾಕಿಕೊಂಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು, ಶ್ರೀಜಾ ಮತ್ತು ಕಲ್ಯಾಣ್ ದೇವ್ ಬೇರೆಯಾಗಿದ್ದಾರೆ ಎಂದು ಹೇಳಿದ್ದು, ಇತ್ತೀಚಿಗೆ ಕಲ್ಯಾಣ್ ದೇವ್ ಅವರ ಒಂದು ಪೋಸ್ಟ್ ಸಹಾ ಇದಕ್ಕೆ ಪುಷ್ಟಿ ನೀಡುವಂತೆ ಇತ್ತು.

ಈಗ ಶ್ರೀಜಾ ವಿಚಾರದಲ್ಲಿ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ವೇಣು ಸ್ವಾಮಿ ಅವರು ಶ್ರೀಜಾ ಜಾಕತಕದಲ್ಲಿ ನಾಲ್ಕು ಮದುವೆಗಳಿವೆ ಎಂದು ಹೇಳಿದ್ದಾರೆ. ಆದ್ದರಿಂದ ಶ್ರೀಜಾ ಮೂರನೇ ಮದುವೆ ವಿಚಾರ ಸದ್ದು ಮಾಡುವಾಗಲೇ ವೇಣು ಸ್ವಾಮಿ ಅವರ ಈ ಭವಿಷ್ಯ ವಾಣಿ ಸಖತ್ ಸುದ್ದಿಯಾಗಿದೆ. ಇದೇ ವೇಳೆ ವೇಣು ಸ್ವಾಮಿ ನಟ ಪವನ್ ಕಲ್ಯಾಣ್ ಗೂ ಸಹಾ ನಾಲ್ಕನೇ ಮದುವೆ ಯೋಗ ಇದೆ ಎಂದು ಹೇಳಿದ್ದಾರೆ.

Leave a Reply

Your email address will not be published.