ಮುಸ್ಲಿಂ ವ್ಯಕ್ತಿ ಮಹಾಭಾರತ ಸೀರಿಯಲ್ ನ ಟೈಟಲ್ ಸಾಂಗ್ ಹಾಡಿದ್ದು ನೋಡಿ ಮಂತ್ರ ಮುಗ್ಧರಾದ ನೆಟ್ಟಿಗರು

Entertainment Featured-Articles News Viral Video
84 Views

ದಶಕಗಳ ಹಿಂದೆ ಇಂದಿನ ಹಾಗೆ ಟಿವಿ ಯಲ್ಲಿ ವೀಕ್ಷಣೆ ಮಾಡಲು ಬಹಳಷ್ಟು ವಾಹಿನಿಗಳು ಇರಲಿಲ್ಲ, ಅದೆಷ್ಟೋ ಜನರ ಮನೆಯಲ್ಲಿ ಟಿ ವಿ ಗಳೇ ಇರಲಿಲ್ಲ. ಆಗ ಕೇವಲ ದೂರದರ್ಶನವೊಂದೇ ಜನರ ಮನರಂಜನೆಯ ಪ್ರಮುಖ ಮೂಲವಾಗಿತ್ತು. ಸುಮಾರು ತೊಂಬತ್ತರ ದಶಕದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ-ಮಹಾಭಾರತ ಧಾರಾವಾಹಿಗಳು ಒಂದು ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದವು. ಪ್ರತಿ ಭಾನುವಾರ ಈ ಧಾರಾವಾಹಿಗಳನ್ನು ನೋಡುವ ನಿರೀಕ್ಷೆಯಲ್ಲಿ ಬಹಳಷ್ಟು ಜನ, ಭಾನುವಾರಕ್ಕಾಗಿ ಕಾಯುತ್ತಿದ್ದರು.ಈ ಧಾರಾವಾಹಿಗಳು ಪ್ರಸಾರವಾಗುವ ಸಮಯಕ್ಕೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಜನ ಮನೆಯನ್ನು ಸೇರುತ್ತಿದ್ದರು.

ನಗರ, ಪಟ್ಟಣಗಳಲ್ಲಿ ಆಗ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ರಾಮಾಯಣ ಮಹಾಭಾರತ ಸೀರಿಯಲ್ ಗಳನ್ನು ನೋಡಲು ಜನ ಧರ್ಮ, ಜಾತಿ, ಕೋಮು ಎಲ್ಲವನ್ನು ಮರೆತು ಆನಂದಿಸುತ್ತಿದ್ದರು. ಆ ಕಾಲದಲ್ಲಿ ಎಲ್ಲರ ಮನೆಗಳಲ್ಲಿ ಟಿವಿ ಇರದ ಕಾರಣ, ಯಾರ ಮನೆಯಲ್ಲಿ ಟಿವಿ ಇರುತ್ತಿತ್ತೋ ಅವರ ಮನೆಗಳಲ್ಲಿ ಜನಜಾತ್ರೆಯೇ ಸೇರುತ್ತಿತ್ತು. ರಾಮಾಯಣ-ಮಹಾಭಾರತ ಧಾರಾವಾಹಿಗಳನ್ನು ಜನ ಬಹಳ ಭಕ್ತಿ-ಶ್ರದ್ಧೆಯಿಂದ ನೋಡುತ್ತಿದ್ದರು.

ಆ ಸೀರಿಯಲ್ ಗಳ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ-ನಟಿಯರನ್ನು ಪೂಜನೀಯ ಭಾವದಿಂದ ನೋಡಿ ಗೌರವಿಸುತ್ತಿದ್ದರು. ಅಂದಿನ ಕಾಲದಲ್ಲಿ ರಾಮಾಯಣ ಹಾಗೂ ಮಹಾಭಾರತದ ನೋಡಿದವರ ಮನಸ್ಸಿನ ಮೇಲೆ ಆ ಧಾರಾವಾಹಿಗಳ ಪಾತ್ರಗಳು ಹಾಗೂ ಅವುಗಳ ನಡುವಿನ ಸಂಭಾಷಣೆ ಗಳು ಬಹಳಷ್ಟು ಪ್ರಭಾವ ಬೀರಿದ್ದವು. ಅದನ್ನು ಧರ್ಮ-ಜಾತಿ ಎನ್ನದೇ ಎಲ್ಲರ ಮೇಲೂ ಕೂಡ ತನ್ನ ಪರಿಣಾಮವನ್ನು ಉಂಟುಮಾಡಿತ್ತು.

ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋ ಬಹಳ ಸದ್ದು ಮಾಡುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ನೋಡಿದಾಗ ಇಸ್ಲಾಂ ಧರ್ಮಕ್ಕೆ ಸೇರಿದ ಹಿರಿಯ ವ್ಯಕ್ತಿಯೊಬ್ಬರು ಬಹಳ ಸ್ಪಷ್ಟವಾಗಿ ಹಾಗೂ ಉಚ್ಚಾರಣೆಯಲ್ಲಿ ಯಾವುದೇ ದೋಷ ಇಲ್ಲದೆ ಮಹಾಭಾರತ ಧಾರಾವಾಹಿಯ ಶೀರ್ಷಿಕೆಯ ಹಾಡನ್ನು ಹಾಡಿದ್ದಾರೆಮ ಅವರು ಅಷ್ಟ ಚೆನ್ನಾಗಿ ಹಾಡು ಹಾಡುವುದನ್ನು ಕೇಳಿ ನೆಟ್ಟಿಗರು ಬಹಳ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭಾರತದ ಧರ್ಮ ಸಹಿಷ್ಣು ಎನ್ನುವುದು ಇದಕ್ಕೆ ಎಂದು ಬಹಳಷ್ಟು ಜನ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇಂತಹ ಒಂದು ಸುಂದರ ಹಾಗೂ ಅಪರೂಪವಾದ ವಿಡಿಯೋವನ್ನು ಭಾರತದ ಮಾಜಿ ಚುನಾವಣಾ ಆಯುಕ್ತರಾದ ಎಸ್ ವೈ ಖುರೇಷಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಈ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ವಿಡಿಯೋ ಮಾತ್ರವೇ ಅಲ್ಲದೆ ಅದರ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರ ಗಮನವನ್ನು ಸೆಳೆದು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

Leave a Reply

Your email address will not be published. Required fields are marked *