ಮುಸ್ಲಿಂ ರಾಷ್ಟ್ರಗಳಲ್ಲೇ ಲೌಡ್ ಸ್ಪೀಕರ್ ನಲ್ಲಿ ಅಜಾನ್ ಬ್ಯಾನ್ ಇರುವಾಗ ನಮ್ಮಲ್ಲೇಕೆ? ಜನಪ್ರಿಯ ಗಾಯಕಿಯ ಪ್ರಶ್ನೆ
ಗಾಯಕಿ ಅನುರಾಧ ಪೌಡ್ವಾಲ್ ತಮ್ಮ ಅಂದ ಹಾಗೂ ಮಧುರವಾದ ಕಂಠದಿಂದ ಇಡೀ ದೇಶದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಇಂಪಾದ ಹಾಡುಗಳನ್ನು ಹಾಡಿರುವ ಅನುರಾಧಾ ಪೌಡ್ವಾಲ್ ಅವರು ಸಿನಿಮಾ ಗಾಯನಕ್ಕಿಂತ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವುದು ಮಾತ್ರ ಅವರು ಹಾಡಿರುವ ಅಂತಹ ಭಜನೆಗಳ ಮೂಲಕ. ಅನುರಾಧ ಅವರು ಹಾಡಿರುವ ಭಜನಾ ಗೀತೆಗಳು ಇಂದಿಗೂ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಜನರ ಅವರ ಕಂಠಸಿರಿಯಲ್ಲಿ ಭಕ್ತಿ ಗೀತೆಗಳನ್ನು ಕೇಳಿ ಆನಂದಿಸುತ್ತಾರೆ.
ಅನುರಾಧ ಅವರು ತಮ್ಮ ಸುಶ್ರಾವ್ಯ ದನಿಯಲ್ಲಿ ಅದೆಷ್ಟೋ ಭಕ್ತಿ ಗೀತೆಗಳನ್ನು, ಭಜನೆಗಳನ್ನು ಹಾಡಿದ್ದಾರೆ. ಉತ್ತರ ಭಾರತದಲ್ಲಿ ಅನೇಕ ಮಂದಿರಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅವರು ಹಾಡಿರುವ ಹಾಡುಗಳಿಗೆ ಮೊದಲ ಪ್ರಾಧಾನ್ಯತೆಯನ್ನು ನೀಡಿದ್ದಾರೆ. ಗಾಯಕಿ ಅನುರಾಧಾ ಪೌಡ್ವಾಲ್ ಅವರಿಗೆ ಒಂದು ಮಾತನಾಡುತ್ತಾ, ನಾನು ಜಗತ್ತಿನ ವಿವಿಧ ದೇಶಗಳಿಗೆ ಭೇಟಿ ನೀಡಿದ್ದೇನೆ. ಆದರೆ ನಮ್ಮ ದೇಶದಲ್ಲಿ ನಡೆಯುವ ಹಾಗೆ ಬೇರೆ ಎಲ್ಲೂ ಸಹಾ ನಡೆಯುವುದಿಲ್ಲ ಎನ್ನುವ ಮಾತನ್ನು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅನುರಾಧ ಅವರು, ನಾನು ಯಾವುದೇ ಧರ್ಮದ ವಿರೋಧಿಯಲ್ಲ. ಆದರೆ ನಮ್ಮ ದೇಶದಲ್ಲಿ ಕೆಲವು ವಿಷಯಗಳಿಗೆ ಅನಾವಶ್ಯಕವಾಗಿ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ದೊಡ್ಡ ದೊಡ್ಡ ಲೌಡ್ ಸ್ಪೀಕರ್ ಗಳ ಮೂಲಕ ಅಜಾನ್ ನಡೆಯುತ್ತದೆ. ಇದನ್ನು ಕೇಳಿದಾಗ ಬೇರೆಯವರಿಗೆ ಸಹಾ ತಾವು ಏಕೆ ಲೌಡ್ ಸ್ಪೀಕರ್ ಬಳಸಬಾರದು ಎನ್ನುವ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು, ನಾನು ಮಧ್ಯಪ್ರಾಚ್ಯ ದೇಶಗಳಿಗೂ ಸಹ ಭೇಟಿ ನೀಡಿದ್ದೇನೆ. ಅಲ್ಲಿ ಲೌಡ್ ಸ್ಪೀಕರ್ ಗಳ ಮೂಲಕ ಅಜಾನ್ ನಿಷೇಧ ಮಾಡಲಾಗಿದೆ.
ಹೀಗೆ ಮುಸ್ಲಿಂ ದೇಶಗಳಲ್ಲೇ ಅಜಾನ್ ಗೆ ಲೌಡ್ ಸ್ಪೀಕರ್ ಗಳಲ್ಲಿ ಇಂತಹುದೊಂಷು ನಿಷೇಧ ಹೇರಿರುವಾಗ, ನಮ್ಮ ದೇಶದಲ್ಲಿ ಮಾತ್ರ ಅವುಗಳಿಗೆ ಅನುಮತಿ ನೀಡುವ ಅಗತ್ಯವಾದರೂ ಏನಿದೆ ?? ಎಂದಿರುವ ಅವರು, ಅಜಾನ್ ಸದ್ದು ಮಾಡುವಾಗ ಹನುಮಾನ್ ಚಾಲೀಸಾ ಹಾಕುತ್ತೇವೆ ಎಂದರೆ ಅದರಿಂದ ವಿ ವಾ ದ ಹುಟ್ಟಿಕೊಳ್ಳುತ್ತದೆ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ. ಶಂಕರಾಚಾರ್ಯ ಅವರ ಸೌಂದರ್ಯ ಲಹರಿ ಧಾರ್ಮಿಕ ವಿಚಾರಗಳಲ್ಲಿ ಜನರಲ್ಲಿ ಆಲೋಚನೆ ಮೂಡಿಸುವ ಹಾಗೂ ಮಾನಸಿಕವಾಗಿ ದೃಢತೆಯನ್ನು ತರುವ ಶಕ್ತಿ ಇದೆ ಎಂದಿದ್ದಾರೆ.