ಮುದ್ದು ಮಗುವಿನ ತಾಯಿಯಾದ ನಟಿ ಸಂಜನಾ ಗಲ್ರಾನಿ: ಹರಿದು ಬಂತು ಅಭಿಮಾನಿಗಳ ಶುಭ ಹಾರೈಕೆ

Entertainment Featured-Articles Movies News

ಸದಾ ಒಂದಲ್ಲಾ ಒಂದು ವಿಷಯದಿಂದ ಸದ್ದು, ಸುದ್ದಿ ಮಾಡುವ ಸ್ಯಾಂಡಲ್‍ವುಡ್ ನ ಜನಪ್ರಿಯ ನಟಿ ಎಂದರೆ ಅವರೇ ನಟಿ ಸಂಜನಾ ಗಲ್ರಾನಿ. ನಟಿ ಸಂಜನಾ ಗಲ್ರಾನಿ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು ಅವರ ಅಭಿಮಾನಿಗಳು ನಟಿ ಶುಭ ಹಾರೈಸುತ್ತಿದ್ದಾರೆ. ತಾಯಿ ಮಗುವಿಗೆ ದೇವರ ಆಶೀರ್ವಾದ ಸಿಗಲಿ ಎಂದಿದ್ದಾರೆ.

ಇನ್ನು ಇದೇ ದಿನ ಮತ್ತೊಂದು ವಿಶೇಷ ಎನ್ನುವಂತೆ ಸಂಜನಾ ಅವರ ತಂಗಿ ನಿಕ್ಕಿ ಅವರು ಇಂದೇ ತೆಲುಗಿನ ಜನಪ್ರಿಯ ನಟನಾಗಿರುವ ಆದಿ ಪಿನಿಶೆಟ್ಟಿ ಜೊತೆಗೆ ಸಪ್ತಪದಿ ತುಳಿದು ನವ ಜೀವನದ ಶುಭಾರಂಭವನ್ನು ಮಾಡಿದ್ದಾರೆ. ಸಂಜನಾ ಅವರು ಗಂಡು ಮಗುವಿಗೆ ಜನ್ಮ ನೀಡಿರುವುದು, ಇನ್ನೊಂದು ಕಡೆ ಅವರ ತಂಗಿಯ ವಿವಾಹ ಹೀಗೆ ಅವರ ಕುಟುಂಬದಲ್ಲಿ ಎರಡೆರಡು ಸಿಹಿ ಸುದ್ದಿಗಳ ಸಂಭ್ರಮ ತುಂಬಿದ್ದು, ಅವರ ಸಂತೋಷವನ್ನು ಹೆಚ್ಚಿಸಿದೆ. ನಟಿ ಸಂಜನಾ ಅವರು ಗಂಡ ಹೆಂಡತಿ ಸಿನಿಮಾದ ಮೂಲಕ ತಮ್ಮ ಸಿನಿ ಯಾತ್ರೆಯನ್ನು ಪ್ರಾರಂಭಿಸಿದರು.

ಅನಂತರ ಅವರು ಅನ್ಯ ಭಾಷೆಗಳಲ್ಲಿಯೂ ನಟಿಸಿ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡರು. ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿಯೂ ಕಾಣಿಸಿಕೊಂಡು ಸದ್ದು ಮಾಡಿದರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ಅವರು ಡಾ.ಅಜೀಜ್ ಪಾಷಾ ಜತೆ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದರು. ಮದುವೆ ನಂತರ ಅವರು ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ನಟಿ ಸಂಜನಾ ತಮ್ಮ ವೈಯಕ್ತಿಕ ಬದುಕಿಗೆ ಹೆಚ್ಚಿನ ಮಹತ್ವ ನೀಡಿದರು.

ಸ್ವಲ್ಪ ದಿನಗಳ ಮುನ್ನ ನಟಿಯ ಬೇಬಿ ಬಂಪ್ ಫೋಟೋಶೂಟ್, ಸೀಮಂತ ಶಾಸ್ತ್ರದ ಫೋಟೋಗಳು ವೈರಲ್ ಆಗಿದ್ದವು. ಇದೀಗ ಸಂಜನಾ ಗಲ್ರಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಸಂಜನಾ ಅವರ ಸೀಮಂತ ಶಾಸ್ತ್ರವು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ನಡೆದಿತ್ತು.

Leave a Reply

Your email address will not be published. Required fields are marked *