ಮುತ್ತಿನಂತ ಮೂರೇ ಪದಗಳು: ವೈರಲ್ ಆಗ್ತಿದೆ ಅತ್ಯಂತ ಚಿಕ್ಕ ರಾಜೀನಾಮೆ ಪತ್ರದ ಫೋಟೋ!!
ಉದ್ಯೋಗಕ್ಕೆ ಸೇರುವಾಗ ಅರ್ಜಿ ನೀಡುವುದು, ಹಾಗೂ ಉದ್ಯೋಗವನ್ನು ಬಿಡುವಾಗ ರಾಜೀನಾಮೆ ಪತ್ರವನ್ನು ಸಲ್ಲಿಸುವುದು ಸಾಮಾನ್ಯವಾಗಿ ಎಲ್ಲಾ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ನಡೆಯುವಂತಹ ಸಾಮಾನ್ಯವಾದ ಪ್ರಕ್ರಿಯೆ ಆಗಿರುತ್ತದೆ. ಯಾವುದೇ ಸಂಸ್ಥೆ ಅಥವಾ ಕಚೇರಿಗಳಲ್ಲಿ ಇಲ್ಲವೇ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕೆಲಸಗಾರರು ತಾವು ಕೆಲಸವನ್ನು ಬಿಡಬೇಕಾಗಿ ಬಂದಾಗ ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಬರೆದೋ, ಬರೆಯಲು ಬರದೇ ಹೋದಲ್ಲಿ ಯಾರಿಂದಲಾದರೂ ಬರೆಸಿಯೋ ಕಚೇರಿಯಲ್ಲಿ ಸಲ್ಲಿಸುವ ಮೂಲಕ ಉದ್ಯೋಗಕ್ಕೆ ತಮ್ಮ ರಾಜೀನಾಮೆಯನ್ನು ನೀಡುತ್ತಾರೆ.
ಸಾಮಾನ್ಯವಾಗಿ ಇಂತಹ ರಾಜೀನಾಮೆ ಪತ್ರಗಳು ಒಂದಷ್ಟು ವಿಚಾರಗಳನ್ನು ಒಳಗೊಂಡಿರುತ್ತದೆ. ಉದ್ಯೋಗಿಯು ತಾನು ರಾಜೀನಾಮೆ ನೀಡುತ್ತಿರುವ ಕಾರಣವೇನು ಎನ್ನುವುದರ ಕುರಿತಾಗಿ ಒಂದು ಸಂಕ್ಷಿಪ್ತವಾದ ವಿವರಣೆಯನ್ನು ನೀಡಿರುತ್ತಾನೆ. ಕೆಲವರು ಉದ್ದುದ್ದ ಸಾಲುಗಳನ್ನು ಬರೆಯುವ ಮೂಲಕ ರಾಜೀನಾಮೆ ಪತ್ರವನ್ನು ನೀಡುವುದುಂಟು. ಆದರೆ ಪ್ರಸ್ತುತ ಇವೆಲ್ಲಕ್ಕಿಂತ ಭಿನ್ನವಾಗಿ ಕೇವಲ ಮೂರು ಪದಗಳಲ್ಲಿ ರಾಜೀನಾಮೆ ಪತ್ರ ನೀಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಕಂಪನಿಯ ಕೆಲಸಗಾರರೊಬ್ಬರು ತಮ್ಮ ಮಾಲೀಕನಿಗೆ ಕೇವಲ ಮೂರು ಪದಗಳನ್ನು ಬರೆದು ರಾಜೀನಾಮೆ ಸಲ್ಲಿಸಿದ್ದಾರೆ. ಈ ಘಟನೆಯ ಆಶ್ಚರ್ಯವೆನಿಸಿದರೂ ಕೂಡಾ ಇದು ಸತ್ಯವಾಗಿದೆ. ಪ್ರಸ್ತುತ ಈ ವಿಲಕ್ಷಣ ಎನಿಸುವ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರ ಗಮನವನ್ನು ಸೆಳೆದಿದೆ. ವೈರಲ್ ಆದಂತಹ ಫೋಟೋ ನೋಡಿ ಈ ರಾಜೀನಾಮೆ ಪತ್ರಕ್ಕೆ ನೆಟ್ಟಿಗರು ಸಹಾ ವೈವಿದ್ಯಮಯವಾಗಿ ಮತ್ತು ವಿನೋದ ಭರಿತವಾಗಿ ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಈ ವಿಲಕ್ಷಣವಾದ ರಾಜೀನಾಮೆ ಪತ್ರದ ಫೋಟೋವನ್ನು ಕಾವೇರಿ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಫೋಟೋವನ್ನು ಶೇರ್ ಮಾಡಿಕೊಂಡು ಶೀರ್ಷಿಕೆಯಲ್ಲಿ, “ಶಾರ್ಟ್ ಅಂಡ್ ಸ್ವೀಟ್” ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ರಾಜೀನಾಮೆ ಪತ್ರದ ಫೋಟೋದಲ್ಲಿ ಗಮನಿಸಿದಾಗ ರಾಜೀನಾಮೆ ಸಲ್ಲಿಸಿರುವ ವ್ಯಕ್ತಿಯು, ಮಾನ್ಯರೇ, ರಾಜೀನಾಮೆ ಪತ್ರ, ಬೈ ಬೈ ಸರ್ ಎಂದಷ್ಟೇ ಬರೆದಿರುವ ಕಾರಣ ಇದು ವಿನೋದ ಎನಿಸಿದೆ.