ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಬಿಗ್ ಬಾಸ್ ನ ಪ್ರತಿಯೊಂದು ಸೀಸನ್ ಕೂಡಾ ವಿಶೇಷವಾಗಿರುತ್ತದೆ. ಇನ್ನು ಈ ಬಾರಿ ವಿಶೇಷ ಎನ್ನುವುದಕ್ಕಿಂತ ಒಂದು ಹೆಜ್ಜೆ ಮುಂದೆಯೇ ಹೋಗಿ ವಿಶಿಷ್ಟ ಎನಿಸಿಕೊಂಡಿದೆ ಬಿಗ್ ಬಾಸ್ ಸೀಸನ್ 8. ಹೌದು ಬಿಗ್ ಬಾಸ್ ನ 8 ನೇ ಸೀಸನ್ ತನ್ನ ಮುಕ್ತಾಯ ಹಂತವನ್ನು ತಲುಪುತ್ತಿದೆ. ಈ ಬಾರಿ ಬಿಗ್ ಬಾಸ್ ಅನೇಕ ಅಡ್ಡಿ-ಆತಂಕಗಳನ್ನು ಹಾಗೂ ಸವಾಲುಗಳನ್ನು ಎದುರಿಸುವ ಮೂಲಕ ವಿಶಿಷ್ಠ ಎನಿಸಿಕೊಂಡಿದೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಈ ಹಿಂದೆ ನಡೆಯುವಂತಹ ಅನೇಕ ವಿಷಯಗಳು ಈ ಬಾರಿ ನಡೆದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಈಗ ಎಲ್ಲ ಹಂತಗಳನ್ನು ದಾಟಿ ಬಿಗ್ ಬಾಸ್ ಕನ್ನಡ ಫಿನಾಲೆ ವಾರಕ್ಕೆ ಎಂಟ್ರಿ ನೀಡಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ 8ನೇ ಸೀಸನ್ ತನ್ನ ಯಶಸ್ವಿ ಜರ್ನಿಯನ್ನು ಮುಗಿಸಲಿದೆ. ಇನ್ನು ಫಿನಾಲೆ ವಾರ ಆರಂಭಕ್ಕೂ ಮುನ್ನ ಬಿಗ್ ಬಾಸ್ ಮನೆಯಿಂದ ನಟಿ ಶುಭಾ ಪೂಂಜಾ ಹಾಗೂ ಶಮಂತ್ ಗೌಡ ಎಲಿಮಿನೇಷನ್ ಎದುರಿಸಿ ಹೊರಬಂದಿದ್ದರು.
ಫಿನಾಲೆ ವಾರಕ್ಕೆ ಆರು ಜನ ಸದಸ್ಯರು ಎಂಟ್ರಿ ನೀಡಿದ್ದರು. ಪ್ರಶಾಂತ್ ಸಂಬರ್ಗಿ,ಅರವಿಂದ್, ಮಂಜು ಪಾವಗಡ, ದಿವ್ಯ ಉರುಡುಗ, ದಿವ್ಯ ಸುರೇಶ್ ಮತ್ತು ವೈಷ್ಣವಿ ಗೌಡ ಈ ಆರು ಜನ ಫಿನಾಲೆ ವಾರಕ್ಕೆ ಪ್ರವೇಶವನ್ನು ಮಾಡಿದ್ದರು. ಆದರೆ ಇವರಲ್ಲಿ ಒಬ್ಬರು ವಾರದ ಮಧ್ಯಭಾಗದಲ್ಲಿ ಎಲಿಮಿನೇಟ್ ಆಗಲಿದ್ದಾರೆ ಎನ್ನುವ ವಿಷಯ ಎಲ್ಲರಿಗೂ ಗೊತ್ತಿತ್ತು. ಏಕೆಂದರೆ ಫಿನಾಲೆ ವಾರದಲ್ಲಿ ಟಾಪ್ ಐದು ಜನ ಸದಸ್ಯರನ್ನು ಮಾತ್ರವೇ ಮನೆಯಲ್ಲಿ ಉಳಿಸಿಕೊಳ್ಳಲಾಗುತ್ತದೆ. ಆ ಐದು ಜನರಲ್ಲಿ ಬಿಗ್ ಬಾಸ್ ನ ಗ್ರಾಂಡ್ ಫಿನಾಲೆ ಎಪಿಸೋಡ್ ನಲ್ಲಿ ಒಬ್ಬಬ್ಬರಾಗಿ ಔಟಾಗುತ್ತಾ, ಟಾಪ್ ಟು ನಲ್ಲಿ ಒಬ್ಬರು ಮಾತ್ರ ಗೆಲುವಿನ ನಗೆ ಬೀರುತ್ತಾರೆ.
ಇದೀಗ ಮನೆಯಲ್ಲಿದ್ದ ಆರು ಸದಸ್ಯರಲ್ಲಿ ಒಬ್ಬ ಸದಸ್ಯರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಗಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್ ಬಾಸ್ ಆರಂಭದಿಂದಲೂ ಮನೆಯಲ್ಲಿದ್ದು, ಇಲ್ಲಿಯವರೆಗೆ ಒಂದು ದೀರ್ಘ ಪ್ರಯಾಣವನ್ನು ಮಾಡಿ, ಇನ್ನೇನು ಕೊನೆಯ ಹಂತ ಎನ್ನುವಾಗ ಮನೆಯಿಂದ ಹೊರ ಬಂದಿರುವ ಆ ಸದಸ್ಯರು ಯಾರೆಂದರೆ, ಅವರೇ ದಿವ್ಯ ಸುರೇಶ್. ಹೌದು ದಿವ್ಯ ಸುರೇಶ್ ಅವರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಗಿಸಿಕೊಂಡು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಮೂಲಕ ಈ ಸೀಸನ್ ನ ಕೊನೆಯ ಎಲಿಮಿನೇಷನ್ ಮುಕ್ತಾಯವಾಗಿದೆ.
ದಿವ್ಯ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದಂತಹ ಆಟವನ್ನು ಆಡುತ್ತಾ, ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಅವರ ಜರ್ನಿ ದೀರ್ಘವಾಗಿದ್ದು ಬಿಗ್ ಬಾಸ್ ಫಿನಾಲೆ ಹಂತದಲ್ಲಿ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಜನಪ್ರಿಯತೆ ಹಾಗೂ ಮನೆಯೊಳಗೆ ಸದಸ್ಯರ ಸ್ನೇಹವನ್ನು ಸಂಪಾದಿಸಿಕೊಂಡು ದಿವ್ಯ ಸುರೇಶ್ ಮನೆಯಿಂದ ಹೊರಗೆ ಬಂದಿದ್ದಾರೆ. ಇನ್ನು ದಿವ್ಯ ಸುರೇಶ್ ಅವರು ಹೊರ ಬಂದ ಮೇಲೆ ಸೀಸನ್ ಎಂಟರ ಟಾಪ್ ಫೈವ್ ಸ್ಪರ್ಧಿಗಳಾಗಿ ಅರವಿಂದ್, ಮಂಜು ಪಾವಗಡ, ವೈಷ್ಣವಿ ಗೌಡ,ದಿವ್ಯ ಉರುಡಗ ಮತ್ತು ಪ್ರಶಾಂತ್ ಸಂಬರ್ಗಿ ಹೊರಹೊಮ್ಮಿದ್ದಾರೆ.