ಮುಗಿಯಿತು ಮತ್ತೊಂದು ಎಲಿಮಿನೇಷನ್: ಶುಭಾ ಪೂಂಜಾ ನಂತರ ಮನೆಯಿಂದ ಹೊರ ಬಂದ ಸದಸ್ಯ ಇವರೇ

0 0

ಇನ್ನು ಒಂಬತ್ತು ದಿನಗಳು ಕಳೆದರೆ ಕನ್ನಡ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಯಾರು ಎನ್ನುವುದು ಹೊರ ಬೀಳಲಿದೆ. ಅಲ್ಲಿಗೆ ಈ ಬಾರಿ ಬಹಳ ಕ್ಲಿಷ್ಟ ಪರಿಸ್ಥಿತಿಗಳ ನಡುವೆಯೂ ಆರಂಭವಾಗಿ ಯಶಸ್ಸನ್ನು ಪಡೆದ ಮತ್ತೊಂದು ಬಿಗ್ ಬಾಸ್ ನ ಸೀಸನ್ ಕೊನೆಯಾಗಲಿದೆ. ಫಿನಾಲೆ ಹತ್ತಿರವಾಗುತ್ತಿರುವಾಗಲೇ ಬಿಗ್ ಬಾಸ್ ಮನೆಯಲ್ಲಿ ರಂಗೇರುತ್ತಿದೆ. ಮನೆಯಲ್ಲಿ ಇರುವ ಎಂಟು ಜನರಲ್ಲಿ ಈ ವಾರ ಮೂವರು ನಾಮಿನೇಟ್ ಆಗಿ ಹೊರಗೆ ಬರಲಿದ್ದಾರೆ. ಅನಂತರ ಉಳಿಯುವವರು ಐದು ಜನ, ಹೌದು ಅವರೇ ಬಿಗ್ ಬಾಸ್ ಸೀಸನ್ ಎಂಟರ ಟಾಪ್ ಐದು ಸ್ಪರ್ಧಿಗಳು ಎನಿಸಿಕೊಳ್ಳುವವರು.

ಎಲಿಮಿನೇಷನ್ ಪ್ರಕ್ರಿಯೆ ನಿನ್ನೆಯೇ ಆರಂಭವಾಗಿ ಹೋಗಿದೆ. ಎಂಟು ಜನರಲ್ಲಿ ಒಬ್ಬರು ನಿನ್ನೆ ಮನೆಯಿಂದ ಹೊರಗೆ ಬಂದಾಗಿದೆ. ಹೌದು ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ನಿನ್ನೆ ಎಲಿಮಿನೇಷನ್ ಎದುರಿಸಿ ಬಿಗ್ ಬಾಸ್ ಮನೆಯ ತಮ್ಮ ಆಟವನ್ನು ಮುಗಿಸಿ ಮನೆಯಿಂದ ಹೊರ ಬಂದಿದ್ದಾರೆ. ಈಗ ಇನ್ನೊಂದು ಹೊಸ ಸುದ್ದಿ ಸಹಾ ಹೊರಗೆ ಬಂದಿದೆ. ನಿನ್ನೆ ವಾರಾಂತ್ಯದಲ್ಲಿ ಶನಿವಾರದ ವಿಶೇಷ ಎಪಿಸೋಡ್ ನಲ್ಲಿ ನಟಿ ಶುಭಾ ಪೂಂಜಾ ಹೊರಗೆ ಬಂದರೆ, ಭಾನುವಾರದ ಎಪಿಸೋಡ್ ನಲ್ಲಿ ಮನೆಯಿಂದ ಮತ್ತೊಬ್ಬ ಪ್ರಮುಖ ಸ್ಪರ್ಧಿ ಎಲಿಮಿನೇಷನ್ ಎದುರಿಸಿ ಹೊರಗೆ ಬಂದಿದ್ದಾರೆ.

ಕಳೆದ ವಾರ ಮನೆಯಲ್ಲಿ ಉಳಿದವರು ಎಂಟು ಮಂದಿ. ಈ ಎಂಟು ಮಂದಿಯಲ್ಲಿ ಎಂಟು ಮಂದಿ ಸಹಾ ಫಿನಾಲೆ ವಾರಕ್ಕೆ ಎಂಟ್ರಿ ಕೊಡುವ ಕನಸನ್ನು ಕಟ್ಟಿಕೊಂಡವರೇ ಆಗಿದ್ದರು. ಆದರೆ ಅದು ಸಾಧ್ಯವಿಲ್ಲ. ಆದ ಕಾರಣ ಎಲಿಮಿನೇಷನ್ ಎನ್ನುವುದು ನಡೆಯಲೇ ಬೇಕು.‌ ನಿನ್ನೆ ಶುಭಾ ಅವರ ಎಲಿಮಿನೇಷನ್ ನಂತರ ಮನೆಯಲ್ಲಿ ಉಳಿದವರು ಇನ್ನು ಏಳು ಜನ ಸದಸ್ಯರು. ಈ ಏಳು ಜನರಲ್ಲಿ ಯಾರು ಎಲಿಮಿನೇಷನ್ ಎದುರಿಸುವರು ಎನ್ನುವುದು ಮಾತ್ರ ಪ್ರಶ್ನಾರ್ಥಕವಾಗಿತ್ತು. ಆ ಪ್ರಶ್ನೆಗೂ ಉತ್ತರ ಈಗ ಸಿಕ್ಕಾಗಿದೆ. ಹಾಗಾದರೆ ಬಿಗ್ ಹೌಸ್ ನಿಂದ ಹೊರ ಬಂದ ಇನ್ನೊಬ್ಬ ಸ್ಪರ್ಧಿ ಯಾರು? ಎನ್ನುವುದಾದರೆ ಉತ್ತರ ಇಲ್ಲಿದೆ.

ಬಿಗ್ ಬಾಸ್ ಮನೆಯಿಂದ ಫಿನಾಲೆಗೂ ಮುನ್ನ ಹೊರ ಬಂದ ಆ ಮತ್ತೊಬ್ಬ ಸದಸ್ಯ ಶಮಂತ್ ಅವರೇ ಆಗಿದ್ದಾರೆ. ಹೌದು ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಜನಪ್ರಿಯತೆಯನ್ನು ಪಡೆದು, ತನ್ನ ಆ ಜನಪ್ರಿಯತೆಯ ಕಾರಣದಿಂದಲೇ ಬಿಗ್ ಬಾಸ್ ಪ್ರವೇಶ ಮಾಡಿ ಶಮಂತ್ ಗೆ ಬಿಗ್ ಬಾಸ್ ಮನೆಯಲ್ಲಿ ಅದೃಷ್ಟ ಒಂದು ಕಡೆ ಕೈ ಹಿಡಿದರೆ, ಮತ್ತೊಂದು ಕಡೆ ತನ್ನ ಟ್ಯಾಲೆಂಟ್ ತೋರಿಸುತ್ತಾ, ಯಾವುದೇ ವಿ ವಾದ ಉಂಟು ಮಾಡುವಂತಹ ಮಾತುಗಳನ್ನು ಆಡದೇ ತನ್ನದೇ ಆದ ಆಟವನ್ನು ಆಡಿದ ಶಮಂತ್ ಬಿಗ್ ಹೌಸ್ ನಿಂದ ಹೊರಗೆ ಬಂದಿದ್ದಾರೆ. ‌

ಹಾಡುಗಳನ್ನು ಕಂಪೋಸ್ ಮಾಡಿ, ಅದನ್ನು ಹಾಡಿ ಜನರ ಮನಸ್ಸನ್ನು ಗೆದ್ದಿದ್ದ ಶಮಂತ್ ಮನೆಯಿಂದ ಹೊರಗೆ ಬಂದಿದ್ದಾರೆ. ಅನೇಕರು ಶಮಂತ್ ಟಾಪ್ ಫೈವ್ ನಲ್ಲಿ ಇರುತ್ತಾರೆ ಎನ್ನುವ ನಿರೀಕ್ಷೆ ಕೂಡಾ ಹೊಂದಿದ್ದರು. ಈಗ ಶಮಂತ್ ಎಲಿಮಿನೇಟ್ ಆದ ಮೇಲೆ ಮನೆಯಲ್ಲಿ ಇನ್ನು ಆರು ಜನ ಅಂದರೆ ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಅರವಿಂದ್, ದಿವ್ಯ ಉರುಡಗ, ವೈಷ್ಣವಿ ಹಾಗೂ ದಿವ್ಯ ಸುರೇಶ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಇವರಲ್ಲಿ ಒಬ್ಬರು ಸಹಾ ಫಿನಾಲೆ ವಾರದ ಆರಂಭದಲ್ಲಿ ಎಲಿಮಿನೇಟ್ ಎದುರಿಸಿ ಹೊರಗೆ ಬರಲಿದ್ದಾರೆ ಎನ್ನುವುದು ಕೂಡಾ ನಿಜ.

Leave A Reply

Your email address will not be published.