ತೆಲುಗು ಚಿತ್ರರಂಗದ ಕಲಾವಿದರ ಸಂಘ ಮಾ ( ಮೂವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ) ನ ಚುನಾವಣೆ ಈ ಬಾರಿ ಪ್ರತಿಷ್ಠೆಯ ವಿಷಯವಾಗಿ ಬಿಂಬಿತವಾಗಿತ್ತು. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾತ್ರವೇ ಅಲ್ಲದೇ ಸ್ಪರ್ಧಿಗಳ ನಡುವೆ ಆರೋಪ, ಪ್ರತ್ಯಾರೋಪ, ವೈಯಕ್ತಿಕ ನಿಂದನೆಗಳ ಜೊತೆಗೆ ಬಹಳ ಪ್ರಮುಖವಾಗಿ ಪ್ರಾದೇಶಿಕತೆ ವಿಚಾರಗಳನ್ನು ಸಹಾ ಮುನ್ನೆಲೆಗೆ ತರಲಾಗಿತ್ತು. ಹೀಗೆ ಒಂದು ರೀತಿಯಲ್ಲಿ ಅ ಶಾಂತ ಪರಿಸ್ಥಿತಿಯಲ್ಲಿ ಮಾ ಚುನಾವಣೆ ಮುಗಿದು ಮಂಚು ವಿಷ್ಣು ಗೆದ್ದು, ನಟ ಪ್ರಕಾಶ್ ರಾಜ್ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು.
ಚುನಾವಣೆ ನಂತರ ಪರಿಸ್ಥಿತಿಗಳು ಸುಧಾರಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಸದ್ಯಕ್ಕಂತೂ ಅದು ಮುಗಿಯುವ ಹಾಗೆ ಕಾಣುತ್ತಿಲ್ಲ. ಚುನಾವಣೆ ನಂತರ ಹಿರಿಯ ನಟ ಮೋಹನ್ ಬಾಬು ಅವರ ಮೇಲೆ ಕೆಲವರು ಆ ರೋ ಪಗಳನ್ನು ಮಾಡಿದರೆ, ಮೋಹನ್ ಬಾಬು ಸಹಾ ಖಾರವಾಗಿ ಮಾತ ಮಾಡಿದ್ದಾರೆ. ಇನ್ನು ಮಂಚು ವಿಷ್ಣು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಹಾ ಹಿರಿಯ ನಟ ಚಿರಂಜೀವಿ ಅವರಿಗೆ ನೇರ ಆಹ್ವಾನ ನೀಡದೇ, ಒಂದು ಸಂದೇಶ ನೀಡಿದ ವಿಚಾರ ಸಹಾ ದೊಡ್ಡ ಸುದ್ದಿಯಾಗಿತ್ತು. ಈಗ ಇವೆಲ್ಲವುಗಳ ನಡುವೆ ಪ್ರಮಾಣ ವಚನ ಸ್ವೀಕಾರ ಸಮಯದಲ್ಲಿ ಸಹಾ ದೊಡ್ಡ ಗಲಾಟೆಯೇ ನಡೆದಿದೆ.
ನಟಿ ಶ್ರೀ ನಿಜ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ವೇಳೆ ವೇದಿಕೆ ಹತ್ತಿರಕ್ಕೆ ಹೋಗಿ ನಟ ಮೋಹನ್ ಬಾಬು ಅವರ ಬಗ್ಗೆ ಏಕ ವಚನದಲ್ಲಿ ಮಾತಾನಾಡುತ್ತಾ, ನನ್ನನ್ನು ಎದುರಿಸೆಂದು ಚಾಲೆಂಜ್ ಹಾಕಿದ್ದು, ನಿನಗೆ ಮಹಿಳೆಯರೆಂದರೆ ಗೌರವ ಇಲ್ಲವೇನು?? ಎಂದೆಲ್ಲಾ ಕೇಳಿದ್ದು, ನಿನ್ನ ಪ್ರಶ್ನೆ ಮಾಡಿದವರ ಬಗ್ಗೆ ಕೆಟ್ಟ ಭಾಷೆಯಲ್ಲಿ ಬೈದು, ಹೊಡೆಯಲು ಬರುತ್ತೀಯಾ, ನಿನ್ನ ಆಟಗಳು ನನ್ನ ಬಳಿ ನಡೆಯೋದಿಲ್ಲ, ಪವನ್ ಕಲ್ಯಾಣ್ ರನ್ನು ರಾಜಕೀಯವಾಗಿ ಎದುರಿಸುವ ಸಾಮರ್ಥ್ಯ ಇಲ್ಲದೇ ಮಾ ರಾಜಕೀಯ ಮಾಡ್ತಾ ಇದ್ದೀಯಾ ಎಂದು ಕೂಗಾಡಿದ್ದಾರೆ.
ಅನಂತರ ಪೋಲಿಸರು ಶ್ರೀನಿಜ ಅವರನ್ನು ಅಲ್ಲಿಂದ ದೂರ ಕರೆದುಕೊಂಡು ಹೋದ ಮೇಲೆ, ಮಾದ್ಯಮಗಳ ಮುಂದೆ ಮಾತನಾಡಿದ ಆಕೆ ಮೋಹನ್ ಬಾಬು ಕುಟುಂಬ, ತಮ್ಮ ಸಾಲವನ್ನು ತೀರಿಸಿಕೊಳ್ಳಲು ಸಿಎಂ ಜಗನ್ ಮೋಹನ್ ರೆಡ್ಡಿ ಕಾಲು ಹಿಡಿದು ಆತನಿಂದ ಕೋಟಿಗಟ್ಟಲೆ ಹಣವನ್ನು ಪಡೆದು, ಪವನ್ ಕಲ್ಯಾಣ್ ಗೆ ಮಾ ಸಂಘದಲ್ಲಿ ಹಿನ್ನೆಡೆ ಅನುಭವಿಸುವಂತೆ ಮಾಡುವೆ ಎಂದು ಹೇಳಿದ್ದಾನೆ. ಮೋಹನ್ ಬಾಬು ಮಾ ಅಧ್ಯಕ್ಷನಾಗಿದ್ದಾಗಲೂ ಏನೂ ಮಾಡಿಲ್ಲ, ಈಗ ಮಂಚು ವಿಷ್ಣು ಸಹಾ ಏನೂ ಮಾಡುವುದಿಲ್ಲ. ಮಂಚು ಕುಟುಂಬದಿಂದ ಕಲಾವಿದರಿಗೆ ಒಳ್ಳೆಯದಾಗುವುದಿಲ್ಲ.
ಪ್ರಕಾಶ್ ರಾಜ್ ಒಳ್ಳೆಯ ವ್ಯಕ್ತಿ, ಆದರೆ ಚುನಾವಣೆ ವೇಳೆ ಅವರ ಸಾಲ, ಮನೆ ವಿಷಯ, ಹೆಂಡತಿ ವಿಷಯ, ಮಕ್ಕಳ ವಿಷಯಗಳನ್ನೆಲ್ಲಾ ಎಳೆದು ತರಲಾಯಿತು. ಪ್ರಕಾಶ್ ರಾಜ್ ಭಾವುಕರಾದಾದ ಮಾ ಮಾಜಿ ಅಧ್ಯಕ್ಷ ನರೇಶ್ ಗೇಲಿ ಮಾಡಿದ ಎಂದೆಲ್ಲಾ ಶ್ರೀ ನಿಜಾ ಎಗರಾಡಿದ್ದಾರೆ. ಅಲ್ಲದೇ ಈ ವೇಳೆ ಮೋಹನ್ ಬಾಬು ಕಡೆ ವ್ಯಕ್ತಿ ಶೀನಿಜ ರನ್ನು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದಿದ್ದಾರೆ. ಶ್ರೀನಿಜ ಕೂಡಾ ತಾನು ಚಪ್ಪಲಿ ಯಲ್ಲಿ ಹೊಡೆಯುವುದಾಗಿ ಆವಾಜ್ ಹಾಕಿದ್ದಾರೆ.