ಮುಗಿದೇ ಹೋಯ್ತು ಮತ್ತೊಂದು ಯಶಸ್ವಿ ಬಿಗ್ ಬಾಸ್ ಸೀಸನ್: ವಿನ್ನರ್ ಆದವರು ಇವರೇ ನೋಡಿ

0 5

ಬಿಗ್ ಬಾಸ್ ಸೀಸನ್ ಎಂಟು ಮುಗಿಯಿತು. ಅಲ್ಲಿಗೆ ಬಿಗ್ ಬಾಸ್ ನ‌ ಮತ್ತೊಂದು ಯಶಸ್ವಿ ಸೀಸನ್ ಮುಗಿದಾಯ್ತು ಎಂದೇ ಹೇಳಬಹುದು. ಅದರಲ್ಲೂ ವಿಶೇಷ ಸೀಸನ್ ಇದು ಎನ್ನಬಹುದಾಗಿದೆ. ಬಿಗ್ ಬಾಸ್ ನ ಈ ಸೀಸನ್ ನ ವಿನ್ನರ್ ಯಾರು ಎನ್ನುವುದನ್ನು ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿಯಾಗಿದೆ. ಈ ಘೋಷಣೆಯ ನಂತರ ಕೆಲವರು ಖುಷಿ ಪಟ್ಟರೆ, ಇನ್ನೂ ಕೆಲವರು ಬೇಸರವನ್ನು ಪಟ್ಟುಕೊಂಡಿದ್ದಾರೆ. ಇದು ಸಹಜವೂ ಹೌದಲ್ಲವೇ? ತಾವು ಇಷ್ಟಪಟ್ಟ ಸ್ಪರ್ಧಿಗೆ ಟ್ರೋಪಿ ಸಿಗಲಿಲ್ಲ ಎಂದಾಗ ಸಹಜವಾಗಿಯೇ ಒಂದು ಬೇಸರ ಮನಸ್ಸಿನಲ್ಲಿ ಮೂಡುವುದು ಸಹಜ. ಟಾಪ್ ಫೈವ್ ಆದವರಲ್ಲಿ ನಿನ್ನೆಯಿಂದ ಮೂವರು ಮನೆಯಿಂದ ಒಬ್ಬೊಬ್ಬರಾಗಿ ಹೊರಗೆ ಬಂದ ಮೇಲೆ ಮನೆಯಲ್ಲಿ ಉಳಿದ ಇಬ್ಬರು ಟಾಪ್ ಟು ಸದಸ್ಯರು ಮಂಜು ಪಾವಗಡ ಹಾಗೂ ಅರವಿಂದ್ ಕೆಪಿ.

ಹೌದು ಟಾಪ್ ಐದರಲ್ಲಿ ಪ್ರಶಾಂತ್ ಸಂಬರ್ಗಿ,‌ ವೈಷ್ಣವಿ ಗೌಡ ಹಾಗೂ ಅವರ ನಂತರ ದಿವ್ಯ ಉರುಡಗ ಅವರು ಮನೆಯಿಂದ ಹೊರಗಡೆ ಬಂದರು. ಟಾಪ್ ಟು ಫೈನಲಿಸ್ಟ್ ಗಳಾಗಿ ಉಳಿದು ವೇದಿಕೆಗೆ ಆಗಮಿಸಿದವರು ಅರವಿಂದ್ ಹಾಗೂ ಮಂಜು ಪಾವಗಡ. ಹಾಗಾದರೆ ಈ ಇಬ್ಬರಲ್ಲಿ ವಿನ್ನರ್ ಆದವರು ಯಾರು ಎಂದರೆ ಅದು ಮತ್ತಾರೂ ಅಲ್ಲ ಮಂಜು ಪಾವಗಡ. ಹೌದು ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ‌ ಮಂಜು ಪಾವಗಡ. ಈ ಮೂಲಕ ಮಂಜು ಟ್ರೋಫಿ ಹಾಗೂ 53 ಲಕ್ಷ ರೂಪಾಯಿಗಳ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಮಜಾಭಾರತ ಶೋ ಮೂಲಕ ಜನಪ್ರಿಯತೆ ಪಡೆದು ಬಿಗ್ ಬಾಸ್ ವರೆಗೂ ನಡೆದು ಬಂದ ಮಂಜು ಇದೀಗ ದೊಡ್ಡ ಗೆಲುವಿನ ಯಶಸ್ಸನ್ನು ತನ್ನದಾಗಿಸಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಬಿಗ್ ಬಾಸ್ ವಿನ್ನರ್ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಅದರಲ್ಲಿ ಅರವಿಂದ್, ಮಂಜು ಮತ್ತು ವೈಷ್ಣವಿ ಅವರ ಹೆಸರುಗಳು ಹರಿದಾಡಿತ್ತು. ಮೂವರಿಗೂ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿತ್ತು. ಅನೇಕ ಮಂದಿ ವೈಷ್ಣವಿ ಟಾಪ್ ತ್ರಿ ಯಲ್ಲಿ ಇರುತ್ತಾರೆ ಎಂದು ಊಹೆ ಮಾಡಿದ್ದು ಉಂಟು. ಆದರೆ ಅದು ನಿಜವಾಗಲಿಲ್ಲ. ಏಕೆಂದರೆ ಅವರು ನಾಲ್ಕನೆಯವರಾಗಿ ಮನೆಯಿಂದ ಹೊರ ಬಂದರು. ದಿವ್ಯ ಉರುಡಗ ಟಾಪ್ ತ್ರಿ ಕಂಟೆಂಸ್ಟಂಟ್ ಆಗಿ ಉಳಿದರು. ಕೊನೆಗೆ ಅವರು ಸಹಾ ಹೊರಗೆ ಬರಲೇಬೇಕಾಯಿತು ಎನ್ನುವುದು ಸಹಾ ನಿಜ.

ಅರವಿಂದ್ ಗೆಲ್ಲುವರು ಎಂದು ಬಹಳಷ್ಟು ಜನರು ಊಹೆ ಮಾಡಿದ್ದರು. ಆದರೆ ಹಾಗೆ ಆಗಿಲ್ಲ. ಕ್ರೀಡಾ ಜಗತ್ತಿನಿಂದ ಬಂದು ರನ್ನರ್ ಅಪ್ ಆದರೂ ಅರವಿಂದ್ ಅವರು ಬಿಗ್ ಬಾಸ್ ಮೂಲಕ ಕರ್ನಾಟಕದ ಅಪಾರ ಜನರ ಅಭಿಮಾನ ತಮ್ಮದಾಗಿಸಿಕೊಂಡಿದ್ದಾರೆ. ರನ್ನರ್ ಅಪ್ ಆದ ಅರವಿಂದ್ ಅವರಿಗೆ ಹತ್ತು ಲಕ್ಷ ರೂ ಬಹುಮಾನ ನೀಡಲಾಗಿದೆ. ಅದಲ್ಲದೇ ಟಾಸ್ಕ್ ನಲ್ಲಿ ಗೆದ್ದ ಎರಡು ಲಕ್ಷ ಅದಕ್ಕೆ ಸೇರಿದೆ. ಇನ್ನು ಅವರ ಸಂಭಾವನೆಯೂ ಇದರ ಜೊತೆಗೆ ಸೇರಲಿದೆ. ಒಟ್ಟಾರೆ ಸೀಸನ್ ಎಂಟು ಎಲ್ಲಾ ಅಡೆ ತಡೆಗಳ ನಡುವೆ ಯಶಸ್ವಿ ಜರ್ನಿ ಮುಗಿಸಿದೆ.

Leave A Reply

Your email address will not be published.