ಮುಖ್ಯಮಂತ್ರಿಗಳ ಕಾರ್ಯದ ಬಗ್ಗೆ ಭವಿಷ್ಯವಾಣಿ ನುಡಿದ ಕೋಡಿ ಶ್ರೀಗಳು: ತನ್ನ ಭವಿಷ್ಯವಾಣಿ ಸತ್ಯವಾಗಿದೆ ಎಂದಿದ್ದು ಯಾವ ವಿಚಾರದಲ್ಲಿ??

0 4

ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿಗಳು, ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಕೃತಿಯಲ್ಲಿ ಸಂಭವಿಸು ವಂತಹ ಅಪಾಯಗಳ ಕುರಿತಾಗಿ ಮಾತ್ರವಲ್ಲದೇ ಕೊರೊನಾ ನಂತರದ ಕಾಲದಲ್ಲಿ ಅದರ ಪರಿಣಾಮಗಳ ಕುರಿತಾಗಿಯೂ ಕೂಡಾ ಕೋಡಿ ಮಠದ ಶ್ರೀಗಳು ಭವಿಷ್ಯವಾಣಿಯನ್ನು ನುಡಿಯುತ್ತಲೇ ಬರುತ್ತಿದ್ದಾರೆ. ಬಹಳಷ್ಟು ಜನರು ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯವಾಣಿ ಯನ್ನು ನಂಬುತ್ತಾರೆ. ಅಲ್ಲದೇ ಅವರು ಹೇಳುವ ಮಾತುಗಳು ಸತ್ಯವಾಗುತ್ತದೆ ಎಂದು ಬಹಳಷ್ಟು ಜನರ ಅಭಿಪ್ರಾಯವಾಗಿದೆ. ಇದೀಗ ಮತ್ತೊಮ್ಮೆ ಕೋಡಿಮಠದ ಶ್ರೀಗಳು ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಗಳ ಕಾರ್ಯವೈಖರಿಯ ಬಗ್ಗೆ ಹೊಸ ಭವಿಷ್ಯವಾಣಿ ಒಂದನ್ನು ನುಡಿದಿದ್ದಾರೆ. ಈ ಮೂಲಕ ಅವರು ಮುಖ್ಯಮಂತ್ರಿ ಅವರು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬದ ಜಡೆ ಸಂಸ್ಥಾನ ಮಠ ಭೇಟಿ ನೀಡಿದ ಕೋಡಿಮಠದ ಶ್ರೀಗಳು ಅಲ್ಲಿ ಶ್ರೀ ಸಿದ್ದವೃಷಭೇಂದ್ರ ಸ್ವಾಮೀಜಿ ಅವರ ಕರ್ತೃ ಗದ್ದುಗೆಯ ದರ್ಶನ ಪಡೆದಿದ್ದಾರೆ. ಅನಂತರ ಅವರು ಮಾಧ್ಯಮ ಮಿತ್ರರ ಜೊತೆಗೆ ಮಾತನಾಡುತ್ತಾ, ರಾಜ್ಯದ ನೂತನ ಮುಖ್ಯಮಂತ್ರಿ ಆಗಿರುವಂತಹ ಬಸವರಾಜ ಬೊಮ್ಮಾಯಿ ಅವರ ಕುರಿತಾಗಿ ಮಾತನಾಡಿದ್ದಾರೆ. ಶ್ರೀಗಳು, ಬೊಮ್ಮಾಯಿ ಅವರು ಸರಳ, ಸಜ್ಜನಿಕೆಯ ಚಾಣಕ್ಷ್ಯ ಬುದ್ದಿಯಿಂದ ಕೂಡಿರುವ ಮುಖ್ಯಮಂತ್ರಿ ಆಗಿ ಅವರ ಜವಾಬ್ದಾರಿ ನಿಭಾಯಿಸಲಿದ್ದಾರೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಇದೇ ವೇಳೆ ಅವರು ತಮ್ಮ ಮತ್ತೊಂದು ಭವಿಷ್ಯವಾಣಿ ಬಗ್ಗೆಯೂ ಮಾತನಾಡಿದ್ದಾರೆ.

ಶ್ರೀ ಗಳು, ಜಗತ್ತಿನ ಭೂಪಟದಲ್ಲಿ ಒಂದು ದೇಶ ಅಸ್ತಿತ್ವವೇ ಇರುವುದಿಲ್ಲ ಎಂದು ನಾನು ಭವಿಷ್ಯವಾಣಿ ಹೇಳಿದ್ದೆ, ಈಗ ನೋಡಿ ಆಫ್ಘಾನಿಸ್ತಾನದ ಪರಿಸ್ಥಿತಿಯ ಅದು ತಾಲಿಬಾನಿಗಳ ಕೈಯಲ್ಲಿ ಸಿಕ್ಕಿ ನಲಗುತ್ತಿದೆ ಎಂದು ಹೇಳಿದ್ದಾರೆ. ಮಾತು ಮುಂದುವರೆಸಿದ ಅವರು, ರಾಜಾಡಳಿತ ಕಾಲದಿಂದಲೂ ಮಠಾಧೀಶರು ಹಾಗೂ ಗುರುಗಳು ರಾಜರಿಗೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದಾರೆ ಕೊರೋನಾ ಮತ್ತು ನೆರೆಯ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಯವರ ಬದಲಾವಣೆ ಬೇಡ ಎನ್ನುವ ಕಾರಣಕ್ಕೆ ಮಠಾಧೀಶರೆಲ್ಲರೂ ಒಗ್ಗೂಡಿ ಅವರ ಬೆಂಬಲಕ್ಕೆ ನಿಂತರೆ ಹೊರತು ಅದರಲ್ಲಿ ಅವರ ಸ್ವಾರ್ಥ ಇರಲಿಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.