ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ದೇಶದ ನಂ.01 ಶ್ರೀಮಂತನಾದ ಉದ್ಯಮಿ! ಇದು ಆಗಿದ್ದಾದ್ರು ಹೇಗೆ??
ದೇಶದಲ್ಲಿ ಶ್ರೀಮಂತಿಕೆಯ ಬಗ್ಗೆ ಮಾತು ಬಂದಾಗ ಅಲ್ಲಿ ಮೊದಲು ಕೇಳಿ ಬರುವ ಹೆಸರು ಮುಖೇಶ್ ಅಂಬಾನಿ ಹೆಸರು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದು, ಏಷ್ಯಾದಲ್ಲಿ ಅತಿ ದೊಡ್ಡ ಶ್ರೀಮಂತ , ಭಾರತದಲ್ಲೂ ನಂಬರ್ ಒನ್ ಶ್ರೀಮಂತ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ವ್ಯಕ್ತಿಯಾಗಿದ್ದಾರೆ ರಿಲಯನ್ಸ್ ನ ಮುಖ್ಯಸ್ಥರಾಗಿರುವ ಮುಖೇಶ್ ಅಂಬಾನಿ. ಮುಖೇಶ್ ಅಂಬಾನಿ ವ ಹಾಗೂ ಅವರ ಪತ್ನಿ ನೀತಾ ಅಂಬಾನಿಯ ಐಶಾರಾಮೀ ಜೀವನ ಹಾಗೂ ಅವರ ಐಶಾರಾಮೀ ಹವ್ಯಾಸಗಳ ಬಗ್ಗೆ ಸುದ್ದಿಗಳು ಆಗುತ್ತಲೇ ಇರುತ್ತದೆ.
ಆದರೆ ಈಗ ಅವರ ಶ್ರೀಮಂತಿಕೆಯಿಂದಾಗಿ ಮುಖೇಶ್ ಅಂದಾನಿ ಪಡೆದಿದ್ದ ಸ್ಥಾನದಲ್ಲಿ ಬದಲಾವಣೆ ಒಂದು ಆಗಿದೆ. ಹೌದು, ಇತ್ತೀಚಿಗೆ ಶೇರು ಮಾರುಕಟ್ಟೆಯಲ್ಲಿ ಕಂಡು ಬಂದಿರುವ ಕೆಲವು ಬದಲಾವಣೆಗಳಿಂದ ಭಾರತದ ಮತ್ತೋರ್ವ ಉದ್ಯಮಿ ಗೌತಮ್ ಅದಾನಿ ಅವರಿಗೆ ಲಾಭ ಉಂಟಾಗಿದೆ. ರಿಲಯನ್ಸ್ ನ ಶೇರುಗಳಲ್ಲಿ ಕಂಡು ಬಂದಿರುವ ಕುಸಿತದ ಕಾರಣದಿಂದಾಗಿ ಮಂಗಳವಾರ ಗೌತಮ್ ಅದಾನಿ ಗಳಿಕೆಯ ವಿಚಾರದಲ್ಲಿ ಮುಖೇಶ್ ಅಂಬಾನಿ ಯನ್ನು ಹಿಂದೆ ಹಾಕಿ ಮುಂದೆ ಹೋಗಿದ್ದಾರೆ.
ಗೌತಮ್ ಅದಾನಿ ತಮ್ಮ ಈ ಆದಾಯದ ಕಾರಣದಿಂದಾಗಿ ದೇಶದ ನಂಬರ್ ಒನ್ ಶ್ರೀಮಂತನ ಸ್ಥಾನಕ್ಕೆ ಏರಿದ್ದಾರೆ. ಫೋರ್ಬ್ಸ್ ನ ರಿಯಲ್ ಟೈಮ್ ನೆಟ್ ವರ್ತ್ ಡೇಟಾ ಪ್ರಕಾರ ಅದಾನಿ ಅವರ ಆಸ್ತಿಯ ಮೌಲ್ಯ ಈಗ 6.72 ಲಕ್ಷ ಕೋಟಿ ರೂಪಾಯಿಗಳಾಗಿದೆ.
ಇದೇ ವೇಳೆ ಮುಖೇಶ್ ಅಂಬಾನಿ ಅವರ ಆಸ್ತಿಯ ಮೌಲ್ಯ 6.71 ಲಕ್ಷ ಕೋಟಿ ರೂಪಾಯಿಗಳಾಗಿದೆ. ಇದು ಮಾತ್ರವೇ ಅಲ್ಲದೇ ಗೌತಮ್ ಅದಾನಿ ಅವರು ಇದೀಗ ವಿಶ್ವದ 11 ನೇ ಶ್ರೀಮಂತ ಎನ್ನುವ ಹೆಗ್ಗಳಿಕೆಯನ್ನು ಕೂಡಾ ಪಡೆದುಕೊಂಡಿದ್ದಾರೆ.
ಮಾಹಿತಿಗಳ ಪ್ರಕಾರ ಡಿಸೆಂಬರ್ 31, 2021 ಕ್ಕೆ ಅದಾನಿ ಅವರ ಆಸ್ತಿಯ ಮೌಲ್ಯ 5.82 ಲಕ್ಷ ಕೋಟಿ ರೂಪಾಯಿಗಳಾಗಿದೆ. ಜನವರಿ 18 ಕ್ಕೆ ಅದು 6.95 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು. 2022 ರಲ್ಲಿ ಅದಾನಿ ಅವರ ಗಳಿಕೆ ದಿನಕ್ಕೆ 6000 ಕೋಟಿ ರೂ.ಗಳಿಗಿಂತ ಹೆಚ್ಚುತ್ತಿದೆ. ಈ ಮೂಲಕ ಅದಾನಿ ಅವರು ಆಸ್ತಿ ಹಾಗೂ ಗಳಿಕೆಯ ವಿಚಾರದಲ್ಲಿ ಮುಖೇಶ್ ಅಂಬಾನಿ ಅವರಿಗೆ ಪೈಪೋಟಿಯನ್ನು ನೀಡುತ್ತಿದ್ದಾರೆ.