ವಿದೇಶಿ ಹುಡುಗಿಯನ್ನು ವಿವಾಹವಾದ ಮುಂಬೈ ಯುವಕ: ಆ ದೇಶ ಕೊಡ್ತಿದೆ ಆತನಿಗೆ ಪ್ರತಿ ತಿಂಗಳು ಹಣ!

Written by Soma Shekar

Published on:

---Join Our Channel---

Travel Blogger Mithilesh: ಪ್ರೇಮಕ್ಕೆ(love) ಗಡಿಗಳೆನ್ನುವುದು ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಪ್ರೇಮಕ್ಕೆ ಜಾತಿ, ಕುಲ, ಧರ್ಮ ಇವುಗಳ ಯಾವುದೇ ತಡೆ ಗೋಡೆ ಎನ್ನುವುದು ಇರುವುದಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಯುವಕರು(Indian guys) ವಿದೇಶಿ ಯುವತಿಯರನ್ನು(Foreign girls) ಪ್ರೇಮಿಸಿ ಮದುವೆಯಾಗಿದ್ದಾರೆ. ಇವರಲ್ಲಿ ಕೆಲವರು ತಮ್ಮ ವಿದೇಶಿ ಪತ್ನಿಯರೊಡನೆ ಭಾರತದಲ್ಲೇ ನೆಲೆಸಿದರೆ, ಇನ್ನೂ ಕೆಲವರು ಪತ್ನಿಯೊಡನೆ ವಿದೇಶಕ್ಕೆ ಹಾಕಿ ಅಲ್ಲೇ ನೆಲೆಸಿದ್ದಾರೆ. ಹೀಗೆ ವಿದೇಶದಲ್ಲಿ ನೆಲೆಸಿದ ವ್ಯಕ್ತಿ ಭಾರತದ ಮಿಥಿಲೇಶ್. ಇವರು ಮುಂಬೈ ಮೂಲದ ಒಬ್ಬ ಟ್ರಾವೆಲ್ ಬ್ಲಾಗರ್(Travel blogger ) ಆಗಿದ್ದಾರೆ.

ಮಿಧಿಲೇಶ್(Mithilesh) ಒಬ್ಬ ವಿದೇಶಿ ಹುಡುಗಿಯನ್ನು ಪ್ರೇಮಿಸಿ ಮದುವೆಯಾಗಿದ್ದಾರೆ. ಮಿಥಿಲೇಶ್ ಬೆಲಾರಸ್(Belarus) ದೇಶದ ಲೀಸಾ ಹೆಸರಿನ ಯುವತಿಯನ್ನು ಮದುವೆಯಾಗಿದ್ದಾರೆ. ಮದುವೆ ನಂತರ ಮಿಥಿಲೇಶ್ ಬೆಲಾರಸ್ ಗೆ ಶಿಫ್ಟ್ ಆಗಿದ್ದಾರೆ. ಈಗ ಲೀಸಾ ಮತ್ತು ಮಿಥಿಲೇಶ್ ತಂದೆ ತಾಯಿಯಾಗಿದ್ದು, ಲೀಸಾ ಒಂದು ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ಈ ವಿಷಯವನ್ನು ಮಿಥಿಲೇಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಬಹಳಷ್ಟು ಜನರು ಅವರಿಗೆ ಕಾಮೆಂಟ್ ಗಳನ್ನು ಮಾಡುವ ಮೂಲಕ ಶುಭಾಶಯವನ್ನು ಕೋರುತ್ತಾ ಶುಭ ಹಾರೈಸುತ್ತಿದ್ದಾರೆ.

ಬೆಲಾರಸ್ ನಲ್ಲಿ(Belarus) ದಂಪತಿ ತಂದೆ ತಾಯಿ ಆದಾಗ ಅಲ್ಲಿನ ಸರ್ಕಾರ(govt) ಆ ದಂಪತಿಗೆ ಮಗುವಿನ ಲಾಲನೆ ಪಾಲನೆಗಾಗಿ ಹಣವನ್ನು ನೀಡುತ್ತದೆ. ಈಗ ಅಲ್ಲಿನ ಕಾನೂನಿನ ಪ್ರಕಾರ ಮಿಥಿಲೇಶ್ ಅವರಿಗೆ ಒಂದು ಲಕ್ಷ 20 ಸಾವಿರ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಇದಲ್ಲದೇ ಪ್ರತಿ ತಿಂಗಳು ಅವರ ಖಾತೆಗೆ 18 ಸಾವಿರ ರೂಪಾಯಿಗಳು ಡೆಪಾಸಿಟ್ ಆಗುತ್ತದೆ. ಸರ್ಕಾರ ಮಗುವಿಗೆ ಮೂರು ವರ್ಷ ಆಗುವವರೆಗೆ ಈ ರೀತಿ ಹಣವನ್ನು ನೀಡುತ್ತದೆ ಎನ್ನಲಾಗಿದೆ. ಆದರೆ ಇಲ್ಲಿ ಇರುವ ನಿಯಮ ಏನೆಂದರೆ ಮಗುವಿನ ತಂದೆ ತಾಯಿ ಬೆಲಾರಸ್ ನಲ್ಲೇ ನೆಲೆಸಿರಬೇಕು ಎನ್ನುವುದಾಗಿದೆ.

Leave a Comment