ಮುಂಬೈಯಲ್ಲಿ ಇದೆಲ್ಲಾ ಕಾಮನ್ ಎಂದು ಬಾಲಿವುಡ್ ನಲ್ಲಿ ಪ್ರಚಾರಕ್ಕೆ ರಶ್ಮಿಕಾ ಮಂದಣ್ಣ ಮಾಡಿದ ಹೊಸ ನಿರ್ಧಾರ
ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ರಶ್ಮಿಕಾ ಬಹುಭಾಷಾ ನಟಿಯಾದ ಮೇಲೆ ಅವರ ಫೇಮ್ ದುಪ್ಪಟ್ಟಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಾಯಕಿಯಾಗುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಹಾ ರಶ್ಮಿಕಾ ಸದ್ದು ಮಾಡುತ್ತಲೇ ಇರುತ್ತಾರೆ. ಇಷ್ಟೊಂದು ದೊಡ್ಡಮಟ್ಟದ ಜನಪ್ರಿಯತೆ ತಮ್ಮದಾಗಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಗೆ ಈಗ ದೊರೆಯುತ್ತಿರುವ ಜನಪ್ರಿಯತೆಯ ಅಥವಾ ಪ್ರಚಾರ ಸಾಲುತ್ತಿಲ್ಲವಂತೆ. ಈ ವಿಚಾರವಾಗಿ ಅವರು ಬಹಳ ತಲೆಕೆಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ದಕ್ಷಿಣದ ಸಿನಿಮಾಗಳಲ್ಲಿ ತನ್ನದೇ ಆದ ಸ್ಟಾರ್ ವರ್ಚಸ್ಸನ್ನು ಪಡೆದ ನಂತರ ಏಕಕಾಲದಲ್ಲಿ ಎರಡು ಹಿಂದಿ ಸಿನಿಮಾಗಳಲ್ಲಿ ಅವಕಾಶವನ್ನು ಪಡೆದುಕೊಂಡು ಬಾಲಿವುಡ್ ಗೆ ಪ್ರವೇಶ ನೀಡಿದ ರಶ್ಮಿಕಾ ಮಂದಣ್ಣ, ಬಾಲಿವುಡ್ ಎಂಟ್ರಿ ನಂತರ ತನ್ನ ಪ್ರಚಾರದ ಬಗ್ಗೆ ಇನ್ನಷ್ಟು ಗಮನ ನೀಡಬೇಕಾಗಿದ್ದು ಅನಿವಾರ್ಯ ಆಗಿ ಹೋಗಿದೆ. ಇಂತಹ ಅನಿವಾರ್ಯತೆಯನ್ನು ಅರಿತುಕೊಂಡೇ ನಟಿ ರಶ್ಮಿಕಾ ಮಂದಣ್ಣ ಒಂದು ಹೊಸ ಹೆಜ್ಜೆಯನ್ನು ಇಡುವ ಮೂಲಕ ಬಾಲಿವುಡ್ ಸಂಪ್ರದಾಯ ಪಾಲಿಸಲು ಸಜ್ಜಾಗಿದ್ದಾರೆ.
ರಶ್ಮಿಕಾ ಮಂದಣ್ಣ ಹೋದಲ್ಲಿ-ಬಂದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಈ ಜನಪ್ರಿಯತೆ ಹಾಗೂ ಪ್ರಚಾರ ಅವರಿಗೆ ಸಾಲುತ್ತಿಲ್ಲ, ಅದರಲ್ಲೂ ವಿಶೇಷವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಗಮನ ಸೆಳೆಯಬೇಕು ಎಂದರೆ ಸದಾ ಕಾಲ ಒಂದಲ್ಲಾ ಒಂದು ಸುದ್ದಿಯಲ್ಲಿರಬೇಕು. ಹಾಗೆ ಸುದ್ದಿಯಲ್ಲಿದ್ದರೆ ಮಾತ್ರವೇ ನಟಿಯರ ಫೇಮ್ ಮತ್ತು ಚಾರ್ಮ್ ಹೆಚ್ಚುತ್ತದೆ, ಅನ್ಯರ ಗಮನ ಸೆಳೆಯುತ್ತದೆಂದು ಹೇಳಲಾಗುತ್ತದೆ. ಆದ್ದರಿಂದಲೇ ರಶ್ಮಿಕಾ ಈಗ ಅತ್ತ ಕಡೆ ಗಮನ ಹರಿಸಿದ್ದಾರೆ.
ಬಾಲಿವುಡ್ ನಲ್ಲಿ ಹೀಗೆ ಸದಾ ಸುದ್ದಿಯಲ್ಲಿರುವ ಉದ್ದೇಶದಿಂದ ಸ್ಟಾರ್ ನಟರು ತಮ್ಮದೇ ಆದಂತಹ ಪಿಆರ್ ತಂಡವನ್ನು ನೇಮಕ ಮಾಡಿಕೊಂಡಿರುತ್ತಾರೆ. ಬಾಲಿವುಡ್ ನಲ್ಲಿ ಇದೊಂದು ತೀರಾ ಸಾಮಾನ್ಯವಾದ ವಿಷಯವೂ ಹೌದು. ಈಗ ಅದೇ ಹಿನ್ನೆಲೆಯಲ್ಲಿ ರಶ್ಮಿಕಾ ಕೂಡಾ ತಮ್ಮದೇ ಆದಂತಹ ಒಂದು ಪಿಆರ್ ಟೀಮ್ ಅನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ತಂಡವು ಇನ್ನು ಮುಂದೆ ರಶ್ಮಿಕಾ ಅವರನ್ನು ಸದಾ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಪಿಆರ್ ತಂಡವು ರಶ್ಮಿಕಾ ಕುರಿತಾಗಿ ಎಂತಹ ಸುದ್ದಿಗಳು ಪ್ರಕಟವಾಗಿವೆ ?? ಅವರ ವ್ಯಕ್ತಿತ್ವಕ್ಕೆ ಘಾಸಿ ಉಂಟು ಮಾಡುವಂತಹ ವದಂತಿಗಳೇನಾದರೂ ಹಬ್ಬುತ್ತಿವೆಯೇ?? ಅವರು ಮಾಡಿರುವ ಉತ್ತಮ ಕೆಲಸಗಳು ಹೈಲೈಟ್ ಆಗುತ್ತಿದೆಯೋ?? ಇಲ್ಲವೋ?? ಎಂಬೆಲ್ಲಾ ವಿಚಾರಗಳ ಕಡೆಗೆ ಗಮನ ಹರಿಸುವ ಮೂಲಕ ರಶ್ಮಿಕಾ ಅವರ ಕುರಿತಾಗಿ ಇನ್ನಷ್ಟು ವಿಚಾರಗಳನ್ನು ಮಾಧ್ಯಮಗಳ ಮುಂದೆ ತರುವ ಪ್ರಯತ್ನವನ್ನು ಮಾಡುತ್ತದೆ.
ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರು ಎನಸಿಕೊಂಡಿರುವ ಅಲ್ಲು ಅರ್ಜುನ್, ರಾಮ್ ಚರಣ್ ತೇಜ, ನಟ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಅಂತಹವರು ಈಗಾಗಲೇ ತಮ್ಮದೇ ಆದಂತಹ ಪಿಆರ್ ಟೀಂ ಅನ್ನು ಹೊಂದಿದ್ದಾರೆ. ದಕ್ಷಿಣದಲ್ಲಿ ಈ ಸಂಪ್ರದಾಯ ವಿರಳ ಎನಿಸಿದರೂ, ಬಾಲಿವುಡ್ ನಲ್ಲಿ ಬಹುತೇಕ ಎಲ್ಲ ಸ್ಟಾರ್ ನಟ ನಟಿಯರು ಇಂತಹ ಒಂದು ಟೀಮ್ ಅನ್ನು ನೇಮಕ ಮಾಡಿಕೊಂಡಿದ್ದಾರೆ.