ಮುಂಬೈನಲ್ಲಿ ಐಶಾರಾಮೀ ಮನೆ ಖರೀದಿ!! ಹೈದ್ರಾಬಾದ್ ಬಿಟ್ಟು ಹೋಗಲು ಸಮಂತಾ ಸಜ್ಜು??

Entertainment Featured-Articles News

ದಕ್ಷಿಣ ಸಿನಿರಂಗ ಮಾತ್ರವೇ ಅಲ್ಲದೆ ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಟಾಕ್ ಅಫ್ ದ ಟೌನ್ ಎನ್ನುವಷ್ಟು ಸದ್ದು ಹಾಗೂ ಸುದ್ದಿಯನ್ನು ಮಾಡುತ್ತಿರುವ ನಟಿಯೆಂದರೆ ಸಮಂತಾ. ಸದಾ ಒಂದಲ್ಲಾ ಒಂದು ವಿಷಯದ ಕುರಿತಾಗಿ ಸಮಂತಾ ಮಾಧ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮೊನ್ನೆ ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾ ಶಾಕುಂತಲಂ ನ ತಮ್ಮ ಪಾತ್ರವಾದ ಶಾಕುಂತಲೆಯ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗಿತ್ತು.

ಸಮಂತ ಅಭಿಮಾನಿಗಳಂತೂ ಆ ಫೋಟೋಗಳಿಗೆ ಫಿದಾ ಆಗಿ ಮೆಚ್ಚುಗೆಗಳ ಮಳೆಯನ್ನೇ ಹರಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಹೊಸ ಹಾಟ್ ಹಾಟ್ ಫೋಟೋ ಶೂಟ್ ಮೂಲಕ ಮತ್ತೊಮ್ಮೆ ಪಡ್ಡೆಗಳ ಹೃದಯಕ್ಕೆ ಲಗ್ಗೆಯಿಟ್ಟಿದ್ದಾರೆ ಸಮಂತಾ. ನಾಗಚೈತನ್ಯ ರಿಂದ ದೂರವಾದ ಮೇಲೆ ಸಮಂತಾ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳುವ ಕಡೆ ಹೆಚ್ಚಿನ ಗಮನ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಿಂದ ಹಿಡಿದು ದಕ್ಷಿಣ ಸಿನಿಮಾರಂಗದ ವರೆಗೂ ಒಂದರ ನಂತರ ಮತ್ತೊಂದು ಅದ್ಭುತ ಅವಕಾಶಗಳು ಅವರಿಗೆ ಸಿಗುತ್ತಿವೆ.

ಇದಲ್ಲದೇ ಜಾಹೀರಾತುಗಳಲ್ಲೂ ನಟಿ ಸಿಕ್ಕಾಪಟ್ಟೆ ಬ್ಯಸಿಯಾಗಿದ್ದಾರೆ. ಇತ್ತೀಚಿಗಷ್ಟೇ ಬ್ಲಾಕ್‌ಬಸ್ಟರ್ ಎನಿಸಿಕೊಂಡ ಪುಷ್ಪಾ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ ನಂತರ ಸಮಂತಾ ಹೊಸ ಕ್ರೇಜ್ ಹುಟ್ಟುಹಾಕಿದ್ದಾರೆ. ಅವರ ಊಂ ಅಂತೀಯ ಮಾವ ಹಾಡು ಚಿತ್ರರಂಗದಲ್ಲಿ ಒಂದು ಹೊಸ ದಾಖಲೆಯನ್ನೇ ಬರೆದಿದೆ. ಈಗ ಇವೆಲ್ಲವುಗಳ ನಡುವೆಯೇ ಸಮಂತಾ ಕುರಿತಾದ ಮತ್ತೊಂದು ಹೊಸ ವಿಷಯವೊಂದು ಸುದ್ದಿಯಾಗಿದೆ. ವರದಿಗಳ ಪ್ರಕಾರ ಸಮಂತಾ ಮುಂಬೈನಲ್ಲಿ ಮನೆ ಮಾಡಲು ನಿರ್ಧಾರ ಮಾಡಿದ್ದಾರೆ.

ಮುಂಬೈ ನಗರದ ಪ್ರತಿಷ್ಠಿತ ಏರಿಯಾಗಳಾದ ಜುಹು ಮತ್ತು ಬಾಂದ್ರಾದಲ್ಲಿ ಸಮುದ್ರದ ವ್ಯೂ ಇರುವ ಎರಡು ಮನೆಗಳನ್ನು ಸಮಂತಾ ಫೈನಲ್ ಮಾಡಿದ್ದಾರೆ ಎನ್ನಲಾಗಿದ್ದು, ಇದರಲ್ಲಿ ಒಂದು ಫ್ಲಾಟ್ ಅನ್ನು ಅವರು ಖಚಿತವಾಗಿ ಖರೀದಿ ಮಾಡಲಿದ್ದಾರೆ ಎನ್ನಲಾಗಿದೆ. ಒಂದು ಫ್ಲಾಟ್ ಐದು ಬೆಡ್ ರೂಂ ಆಗಿದ್ದರೆ ಮತ್ತೊಂದು 4 ಬೆಡ್ರೂಮ್ ಗಳ ಫ್ಲಾಟ್ ಎಂದು ಹೇಳಲಾಗಿದೆ. ಇನ್ನು ಈ ಸಕಲ ಸೌಲಭ್ಯಗಳನ್ನು ಉಳ್ಳ ಮನೆಯ ಬೆಲೆ ಬರೋಬ್ಬರಿ ಮೂರು ಕೋಟಿ ರೂಪಾಯಿಗಳು ಎನ್ನಲಾಗಿದೆ.

ಸಮಂತ ವಿಚ್ಛೇದನದ ನಂತರ ಕೆಲವು ವೈಯಕ್ತಿಕ ಕಾರಣಗಳಿಂದ ಅಷ್ಟಾಗಿ ಹೈದರಾಬಾದಿನಲ್ಲಿ ಇರುವುದಕ್ಕೆ ಬಯಸುತ್ತಿಲ್ಲ ಎನ್ನಲಾಗಿದ್ದು, ಅವರು ಮುಂಬೈನಲ್ಲಿ ಸೆಟಲ್ ಆಗಲು ಆಲೋಚನೆಗಳನ್ನು ಮಾಡಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಹರಿದಾಡುತ್ತಿದೆ. ಅದರ ಬೆನ್ನಲ್ಲೇ ಮನೆ ಖರೀದಿಯ ವಿಚಾರ ಹೊರಬಂದಿದ್ದು, ಸಮಂತ ಮುಂಬೈಯಲ್ಲೇ ನೆಲೆಯೂರಲು ಸಜ್ಜಾಗಲು ಮಾಡಿರುವ ಯೋಜನೆಗೆ ಇದು ಪೂರಕ ಎನಿಸುವಂತಿದೆ.

Leave a Reply

Your email address will not be published.