ಸಿಎಂ ಆಗೋರು ನೀವು, ಈ ತರ ಬಟ್ಟೆ ಹಾಕ್ಬೇಡಿ: ಕಂಗನಾ ಬೋಲ್ಡ್ ಅವತಾರ ಕಂಡು ಹೀಗೆ ಅಂದಿದ್ದು ಯಾರು??
ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲಾ ಒಂದು ವಿಷಯವಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಒಮ್ಮೆ ಸೂಕ್ಷ್ಮ ವಿಚಾರಗಳ ಬಗ್ಗೆ ನೀಡುವ ಬೋಲ್ಡ್ ಹೇಳಿಕೆಗಳು, ಮತ್ತೊಮ್ಮೆ ಬಾಲಿವುಡ್ ಮಂದಿಯ ಬಗ್ಗೆ ನೆಗೆಟಿವ್ ಆಗಿ ಮಾತನಾಡುವ ಮೂಲಕ, ಮಗದೊಮ್ಮೆ ತಾವು ನಿರೂಪಕಿಯಾಗಿ ಸಂಚಲನ ಸೃಷ್ಟಿಸಿರುವ ರಿಯಾಲಿಟಿ ಶೋ ಲಾಕ್ ಅಪ್ ನ ವಿಚಾರವಾಗಿ ನಟಿ ಕಂಗನಾ ಸುದ್ದಿಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ಎನಿಸಿದೆ. ಈಗ ಮತ್ತೊಮ್ಮೆ ನಟಿ ಕಂಗನಾ ಸದ್ದು ಸುದ್ದಿ ಮಾಡುತ್ತಿದ್ದಾರೆ. ಆದರೆ ಈ ಬಾರಿ ನಟಿ ಸದ್ದು ಮಾಡಿರುವುದು ತಮ್ಮ ಹೊಸ ಫೋಟೋ ಶೂಟ್ ವಿಚಾರದಲ್ಲಿ.
ಕಂಗನಾ ತಮ್ಮ ಹೊಸ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿದ್ದಾರೆ. ಕಂಗನಾ ಹಂಚಿಕೊಂಡ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾರೆವ್ಹಾ ಎಂದರೆ, ವಿ ರೋ ಧಿಗಳು ಸಹಜವಾಗಿಯೇ ನೆಗೆಟಿವ್ ಕಾಮೆಂಟ್ ಗಳನ್ನು ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಂತೂ ಕಂಗನಾ ಫೋಟೋಗಳು ಒಂದು ಗ್ಲಾಮರ್ ನ ಅಲೆಯನ್ನು ಎಬ್ಬಿಸಿದೆ.
ಹೊಸ ಫೋಟೋಗಳಲ್ಲಿ ಕಪ್ಪು ಬಟ್ಟೆ ಧರಿಸಿ ಮಿಂಚಿರುವ ಕಂಗನಾ ಡೀಪ್ ನೆಕ್ ಇರುವಂತಹ ಸ್ಕರ್ಟ್ ಧರಿಸಿ, ಬಹಳ ಬೋಲ್ಡ್ ಪೋಸ್ ಗಳ ಮೂಲಕ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ನಟಿ ಕಂಗನಾ. ಇನ್ನು ಕಂಗನಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಈ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡ ಕೆಲವೇ ಸಮಯದಲ್ಲಿ ಇವು ವೈರಲ್ ಆಗಿವೆ. ಅಭಿಮಾನಿಗಳು ಸೂಪರ್ ಹಾಟ್, ವಾವ್, ತುಂಬಾ ಚೆನ್ನಾಗಿದೆ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಆದರೆ ಆಸಕ್ತಿಕರ ವಿಷಯ ಏನೆಂದರೆ ಕೆಲವರು ನಟಿಯು ಧರಿಸಿರುವ ಬಟ್ಟೆಗಳ ಬಗ್ಗೆ ಕಾಮೆಂಟ್ ಮಾಡುತ್ತಾ, ನೀವು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗುವವರು. ಆದ್ದರಿಂದ ನೀವು ಇಂತಹ ಬಟ್ಟೆಗಳನ್ನು ಧರಿಸಬೇಡಿ ಎನ್ನುವ ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ. ಇದು ನಿಮಗೆ ಸೂಟ್ ಆಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಬ್ಬರು ಹೌದು ನಿಮ್ಮ ಮಾತು ನಿಜ ಎಂದರೆ, ಮತ್ತೊಬ್ಬರು ಕಂಗನಾ ಸಿಎಂ ಹಾ!! ಜೋಕ್ ಮಾಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.