ಮುಂದುವರೆದ ಎಲೆಕ್ಟ್ರಿಕ್ ಬೈಕ್ ಗಳ ಸ್ಫೋಟ: ಮಹತ್ವದ ನಿರ್ಣಯ ಕೈಗೊಂಡ ಓಲಾ!!

Entertainment Featured-Articles News

ಕಳೆದ ಕೆಲವು ದಿನಗಳಿಂದ ಸಹ ಆಗಾಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸ್ಫೋ ಟಗೊಳ್ಳುತ್ತಿರುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇದೆ. ಕಾರಣವೇ ತಿಳಿಯದೇ ಇದ್ದಕ್ಕಿದ್ದಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸ್ಫೋಟ ಗೊಳ್ಳುತ್ತಿರುವ ವಿಚಾರಗಳು ಸಹಜವಾಗಿಯೇ ಜನರಲ್ಲಿ ಆ ತಂ ಕ ವನ್ನು ಉಂಟು ಮಾಡಿದೆ. ಸಾಲು ಸಾಲಾಗಿ ನಡೆಯುತ್ತಿರುವ ಇಂತಹ ದು ರ್ಘ ಟನೆಗಳನ್ನು ಗಮನಿಸಿರುವ ಕೇಂದ್ರ ಸರ್ಕಾರವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಇದರ ಬಗ್ಗೆ ಕಾರಣಗಳನ್ನು ತಿಳಿದುಕೊಳ್ಳಲು ಒಂದು ವಿಶೇಷ ಕಮಿಟಿಯನ್ನು ನೇಮಕ ಮಾಡಿದೆ.

ಕೇಂದ್ರದ ಈ‌ ನಿರ್ಣಯದ ಬೆನ್ನಲ್ಲೇ ಹಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕಂಪನಿಗಳು ತಮ್ಮ ಉತ್ಪನ್ನಗಳನ್ನು ರೀಕಾಲ್ ಮಾಡುತ್ತಿವೆ. ಹೊಸ ಬೆಳವಣಿಗೆಯೊಂದರಲ್ಲಿ ಓಲಾ ಕಂಪನಿಯ ಎಲೆಕ್ಟ್ರಿಕ್ ವಾಹನ ಸ್ಪೋ ಟ ಗೊಂಡ ಬೆನ್ನಲ್ಲೇ ಓಲಾ ಕಂಪನಿಯು ತನ್ನ ಕಂಪನಿಯ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರೀಕಾಲ್ ಮಾಡಲಾಗಿದೆ ಎನ್ನುವ ಪ್ರಕಟಣೆಯನ್ನು ನೀಡಿದೆ. ಅಲ್ಲದೇ ಮಾರ್ಚ್ 26 ರಂದು ಪುಣೆಯಲ್ಲಿ ನಡೆದ ಅಗ್ನಿ ದು ರಂ ತ ದ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಸಹಾ ಹೇಳಿದೆ.

ಮೊದಲನೇ ಹಂತವಾಗಿ ನಿರ್ದಿಷ್ಟ ಬ್ಯಾಚ್ ನ ವಾಹನಗಳನ್ನು ಹಿಂದಕ್ಕೆ ಪಡೆದಿದ್ದು ಅವುಗಳ ಡಯೋಗ್ನೆಸಿಸ್, ವೆಹಿಕಲ್ ಕಂಡೀಷನ್ ಪರೀಕ್ಷಿಸುವುದಾಗಿ ಓಲಾ ಹೇಳಿದೆ. ಇದೇ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 1,441 ವಾಹನಗಳನ್ನು ರೀಕಾಲ್ ಮಾಡಲಾಗಿದೆ ಎನ್ನಲಾಗಿದೆ. ಈ ವಾಹನಗಳನ್ನು ತಮ್ಮ ಕಂಪನಿಯ ಸರ್ವೀಸ್ ಇಂಜಿನಿಯರ್ ಗಳ ಪರೀಕ್ಷೆ ಮಾಡುತ್ತಾರೆ ಎಂದಿರುವ ಓಲಾ, ತಾವು ತಮ್ಮ ವಾಹನಗಳಲ್ಲಿನ ಬ್ಯಾಟರಿಗಳನ್ನು ನಿಯಮಗಳಿಗೆ ಅನುಸಾರವಾಗಿ ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಇದ್ದಕ್ಕಿದ್ದಂತೆ ಸ್ಪೋ ಟ ಗೊಂಡ ಪ್ರಕರಣಗಳು ನಮೂದಾಗುತ್ತಿವೆ. ಈ ಕಾರಣದಿಂದಾಗಿ ಮತ್ತೊಮ್ಮೆ ಇಂತಹ ದು ರ್ಘ ಟ ನೆ ಗಳಾಗಬಾರದು ಎನ್ನುವ ಕಾರಣಕ್ಕೆ ಹಲವು ಕಂಪನಿಗಳು ತಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರೀ ಕಾಲ್ ಮಾಡಿಕೊಂಡಿವೆ‌. ಓಕಿನೋವಾ ಆಟೋಟೆಕ್ 3000 ಯುನಿಟ್ ಗಳನ್ನು ರೀಕಾಲ್ ಮಾಡಿಕೊಂಡಿದೆ. Pure EV ತನ್ನ 2000 ಯೂ‌ನಿಟ್ ಗಳನ್ನು ಹಿಂಪಡೆದಿದೆ. ಒಂದು ವೇಳೆ ಇದು ಕಂಪನಿಯ ನಿರ್ಲಕ್ಷ್ಯ ಎನ್ನುವುದು ತಿಳಿದರೆ ಭಾರೀ ದಂಡ ತೆರೆಬೇಕೆಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

Leave a Reply

Your email address will not be published.