“ಮುಂದಿನ ಆರಾಧನೆಗೆ ಬರ್ತೀನಿ”- ಎಂದ ಪುನೀತ್ ಗೆ ರಾಯರೇ ಆಗಲೇ ನೀಡಿದ್ರಾ ಅಪಾಯದ ಸೂಚನೆ

0 0

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿಧನದ ನಂತರ ಎಲ್ಲೆಡೆ ಒಂದು ಮೌನ ಆವರಿಸಿದೆ. ಕನ್ನಡ ನಾಡು ಒಬ್ಬ ಸಹೃದಯವಂತನನ್ನು ಕಳೆದುಕೊಂಡಿದೆ. ಅಸಂಖ್ಯಾತ ಅಭಿಮಾನಿಗಳು, ಸ್ಯಾಂಡಲ್ವುಡ್, ಟಾಲಿವುಡ್ ಹಾಗೂ ಬಾಲಿವುಡ್ ನ ಪುನೀತ್ ಅವರ ಸ್ನೇಹಿತರು ಅವರ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಪುನೀತ್ ಅವರ ನಿಧನಕ್ಕೆ ಮುಂಚೆಯೇ ಅವರಿಗೆ ಅ ಪಾ ಯ ಎದುರಾಗಲಿದೆ ಎನ್ನುವ ಸೂಚನೆಯೊಂದು ಸಿಕ್ಕಿತ್ತಾ?? ಎನ್ನುವ ಪ್ರಶ್ನೆಯೊಂದನ್ನು ಹುಟ್ಟುಹಾಕುವ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು ಇಂತಹುದೊಂದು ಪವಾಡ ರಾಯರ ಸನ್ನಿಧಾನದಲ್ಲಿ ನಡೆದಿದೆ ಎನ್ನಲಾಗಿದೆ. ಕಳೆದ ಬಾರಿ ಮಂತ್ರಾಲಯಕ್ಕೆ ಪುನೀತ್ ಅವರು ಭೇಟಿ ನೀಡಿದ ವೇಳೆಯಲ್ಲಿ, ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲೇ ಇಂತಹುದೊಂದು ಘಟನೆ ನಡೆದಿದೆ. ಕಳೆದ ತಿಂಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರು ಮಂತ್ರಾಲಯ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಆ ವೇಳೆಯಲ್ಲಿ ಅವರು ಡಾ.ರಾಜ್‍ಕುಮಾರ್ ಅವರ ಮಂತ್ರಾಲಯ ಮಹಾತ್ಮೆ ಸಿನಿಮಾದ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದರು. ಹೀಗೆ ಮಾತನಾಡುತ್ತಾ ಮುಂದಿನ ಬಾರಿ ರಾಯರ ಆರಾಧನೆಗೆ ಬರುತ್ತೇನೆ ಎಂದಿದ್ದರು.

ಪುನೀತ್ ಅವರು ಹೀಗೆ ಹೇಳುವಾಗಲೇ ರಾಯರ ಮುಖವಾಡ ಅಲುಗಾಡಿತ್ತು. ವೀಣೆ ಕೂಡಾ ಕೆಳಗೆ ಬೀಳುವ ಸಾಧ್ಯತೆ ಇದ್ದು, ಅದನ್ನು ಅಲ್ಲಿದ್ದವರು ಕೂಡಲೇ ಹಿಡಿದು ಸರಿ ಪಡಿಸಿ ಇಟ್ಟಿದ್ದರು. ಈಗ ಈ ವೀಡಿಯೋ ನೋಡಿದ ಅಭಿಮಾನಿಗಳು ಇದೊಂದು ಕೆಟ್ಟ ಸೂಚನೆ ಸಿಕ್ಕಿತ್ತಾ ?? ಎಂದು ಮಾತನಾಡಿಕೊಳ್ಳುತ್ತಿದ್ದರು. ಏನೇ ಆದರೂ ಪುನೀತ್ ಅವರ ಅಗಲಿಕೆಯ ನೋವನ್ನು ಯಾರಿಂದಲೂ ದೂರ ಮಾಡುವುದು ಸಾಧ್ಯವೇ ಇಲ್ಲ. ಇಂದು ಅವರ ಅಂತಿಮ ಸಂಸ್ಕಾರ ನಡೆಯಲಿದ್ದು, ಅಪ್ಪ ಅಮ್ಮನ ಪಕ್ಕದಲ್ಲೇ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

Leave A Reply

Your email address will not be published.