ಮೀರಾಳಿಗೆ ಸತ್ಯದ ದರ್ಶನ ಮಾಡಿಸಲು ಸಜ್ಜಾದ ಅನು?? ಜೊತೆ ಜೊತೆಯಲಿ ಸೀರಿಯಲ್ ನ ರೋಚಕ ತಿರುವು

Entertainment Featured-Articles News

ಕನ್ನಡ ಕಿರುತೆರೆ ಹೆಸರು ಬಂದ ಕೂಡಲೇ ಅಲ್ಲಿ ತಟ್ಟನೆ ನೆನಪಾಗುವುದು ಧಾರಾವಾಹಿಗಳು. ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳದ್ದೇ ದರ್ಬಾರು, ಮನರಂಜನೆಯ ವಿಚಾರದಲ್ಲಿ ಅವುಗಳದ್ದೇ ಸಿಂಹಪಾಲು. ಕಿರುತೆರೆಯಲ್ಲಿ ಹತ್ತು ಹಲವು ಸೀರಿಯಲ್ ಗಳು ಪ್ರಸಾರ ಆಗುತ್ತಿರಬಹುದು. ಆದರೆ ಅವುಗಳಲ್ಲಿ ಕೆಲವು ಮಾತ್ರವೇ ಜನ ಮನ್ನಣೆ ಪಡೆದು ಅಪಾರವಾದ ಯಶಸ್ಸನ್ನು ಪಡೆದು, ಟಾಪ್ ಧಾರಾವಾಹಿಗಳು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ. ಅಂತಹುದೇ ಒಂದು ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ. ಆರಂಭದಿಂದ ಇಂದಿನವರೆಗೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ ಸಾಗಿರುವ ಸೀರಿಯಲ್ ಆಗಿದೆ ಜೊತೆ ಜೊತೆಯಲಿ.

ಜೊತೆ ಜೊತೆಯಲಿ ಸೀರಿಯಲ್ ಇದೀಗ ಬಹಳ ರೋಚಕ ಘಟ್ಟವನ್ನು ತಲುಪಿದೆ. ಕಥೆಯ ಮುಖ್ಯ ಭಾಗದ ಅನಾವರಣವಾಗಿದೆ. ತಾನೇ ರಾಜನಂದಿನಿ ಎಂದು ಅರ್ಥ ಮಾಡಿಕೊಂಡ ನಾಯಕಿ ಅನು ಸಿರಿಮನೆ, ಆರ್ಯವರ್ಧನ್ ಮತ್ತು ಕೇಶವ್ ಜೇಂಡೆ ಆಡಿದ ಆಟಗಳಿಗೆ ಒಂದು ಅಂತ್ಯವನ್ನು ಹಾಡಲೇಬೇಕೆಂದು ನಿರ್ಧರಿಸಿಯಾಗಿದೆ. ಅದಕ್ಕಾಗಿ ಒಂದೊಂದೇ ಹೆಜ್ಜೆಯನ್ನು ಬಹಳ ಎಚ್ಚರಿಕೆಯಿಂದ ಇಡುತ್ತಿರುವ ಅನು ಮುಂದೆ ಈಗ ಇರುವ ತೊಡಕುಗಳಲ್ಲಿ ಒಂದು ಆರ್ಯನ ಸೆಕ್ರೆಟರಿ ಮೀರಾ ಹೆಗ್ಡೆ.

ಮೀರಾಳ ಮನಸ್ಸಿನಲ್ಲಿ ಆರ್ಯ ಎಂದರೆ ಪ್ರೀತಿ ಇರುವ ವಿಚಾರ ಈಗಾಗಲೇ ಅನೇಕ ಬಾರಿ ಹೊರ ಬಂದಿದೆ. ಆಕೆಯ ಮುಖ ಭಾವಗಳೇ ಅದನ್ನು ವ್ಯಕ್ತಪಡಿಸಿದ್ದು ಉಂಟು. ತನ್ನ ಆ ಪ್ರೀತಿಯ ಕಾರಣದಿಂದಲೇ ಆರ್ಯನಿಗೆ ಬಹಳ ನಿಷ್ಠೆಯಿಂದ ಕೆಲಸ ಮಾಡುವ ಮೀರಾಗೆ ಅನುವಿನಲ್ಲಿ ಆಗಿರುವ ಬದಲಾವಣೆಗಳು, ಅನು ವರ್ತನೆ ಹಾಗೂ ನಿರ್ಧಾರಗಳು ಕಸಿವಿಸಿ ಉಂಟು ಮಾಡಿದೆ, ಮೀರಾಳಿಗೆ ಅದು ತಲೆನೋವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಅವಳು ಎಲ್ಲಾ ವಿಚಾರಗಳನ್ನು ಆರ್ಯವರ್ಧನ್ ಗೆ ತಿಳಿಸುವ ತವಕದಲ್ಲಿದ್ದು ಆ ಒಂದು ಅವಕಾಶಕ್ಕಾಗಿ ಕಾದಿದ್ದಾಳೆ.

ಅನು ( ರಾಜನಂದಿನಿ ) ಇದೆಲ್ಲವನ್ನು ತಿಳಿದಿದ್ದಾಳೆ. ಅದಕ್ಕೆ ಮೀರಾ ಓಟಕ್ಕೆ ಒಂದು ಬ್ರೇಕ್ ಹಾಕಲು ನಿರ್ಧರಿಸಿರುವಂತೆ ಮನೆಯಲ್ಲಿ ತಾನು ಒಬ್ಬಳೇ ಇರುವಾಗ ಮೀರಾ ಜೊತೆ ಏನೋ ಮಾತನಾಡಬೇಕೆಂದು ಹೇಳಿ, ಆರ್ಯನಿಂದ ಅನುಮತಿ ಪಡೆದು ಮೀರಾಳನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದಾಳೆ. ಹೊರಗೆ ಡಿನ್ನರ್ ಎಂದು ಹೇಳಿ ಮನೆಗೆ ಕರೆಸಿಕೊಂಡ ಅನು ವರ್ತನೆ ಮತ್ತೊಮ್ಮೆ ಮೀರಾಳ ಸಹನೆಯನ್ನು ಪರೀಕ್ಷಿಸಿದೆ. ಮೀರಾ ಮತ್ತೆ ಸಿಟ್ಟು ಹೊರಹಾಕಿದ್ದಾಳೆ.

ಆದರೆ ಇಲ್ಲೇ ಇದೆ ಟ್ವಿಸ್ಟ್, ಅನು ಯಾವುದೋ ಒಂದು ಆಲೋಚನೆ ಮಾಡಿಯೇ ಮೀರಾಳನ್ನು ಮನೆಗೆ ಕರೆಸಿಕೊಂಡಂತೆ ಇದೆ. ತಾನೇ ರಾಜನಂದಿನಿ ಎನ್ನುವ ಸತ್ಯವನ್ನು ಮೀರಾಳ ಮುಂದೆ ಅನಾವರಣ ಮಾಡಲು ಹೊರಟಿದ್ದಾಳಾ ಅನು ಎನ್ನುವ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ. ಇನ್ನು ಅನು ಮಾಡಿಸಲಿರುವ ಯಾವ ಸತ್ಯ ದರ್ಶನದಿಂದ ಮೀರಾ ಎಂತಹ ರಿಯಾಕ್ಷನ್ ನೀಡಲಿದ್ದಾಳೆ ಎನ್ನುವುದನ್ನು ನೋಡುವ ತವಕ ಸೀರಿಯಲ್ ಅಭಿಮಾನಿಗಳಲ್ಲಿ ದುಪ್ಪಟ್ಟು ಕುತೂಹಲ ಕೆರಳಿಸಿದೆ.

ಒಟ್ಟಾರೆ ಇಂದಿನ ಎಪಿಸೋಡ್ ಸೀರಿಯಲ್ ವೀಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡಲು ಸಜ್ಜಾಗಿದೆ. ಅನು ಮತ್ತು ಮೀರಾ ನಡುವೆ ಏನು ನಡೆಯಲಿದೆ ಎನ್ನುವುದನ್ನು ನೋಡುವ ಕುತೂಹಲ, ಕಾತರತೆ ಪ್ರೇಕ್ಷಕರಲ್ಲಿ ಬಹಳವಾಗಿದೆ. ಸತ್ಯದ ದರ್ಶನವಾದರೆ ಮೀರಾ ಹೆಗ್ಡೆ ಮನಸ್ಸು ಬದಲಾಗುವುದೋ? ಅಥವಾ ಆರ್ಯವರ್ಧನ್ ಮೇಲಿನ ಪ್ರೇಮ ಅವಳನ್ನು ಕುರುಡಾಗಿ ಮಾಡುವುದೋ ಈಗಂತೂ ಕೇವಲ ಪ್ರಶ್ನೆ ಮಾತ್ರ.

Leave a Reply

Your email address will not be published.