ಮೀನು ಹಿಡಿಯಲು ಹೋದವರಿಗೆ ನದಿಯಲ್ಲಿ ಸಿಕ್ಕಿತೊಂದು ಬಾಕ್ಸ್: ತೆರೆದು ನೋಡಿದವರಿಗೆ ಆಗಿತ್ತು ಶಾಕ್ !!

Entertainment Featured-Articles News Viral Video

ನದಿಯಲ್ಲಿ ಮೀನುಗಳನ್ನು ಬೇ ಟೆ ಯಾಡಲು ಹೋದ ಯುವಕನೊಬ್ಬನಿಗೆ ನದಿಯಲ್ಲಿ ನಿಧಿಯೊಂದು ದೊರೆತಿದೆ. ಆಶ್ಚರ್ಯ ಎನ್ನುವಂತೆ ಮೀನಿನ ಬದಲಿಗೆ ಸಿಕ್ಕ ನಿಧಿಯನ್ನು ಕಂಡು ಯುವಕ ತಬ್ಬಿಬ್ಬಾಗಿದ್ದಾ‌ನೆ. ಆದರೆ ಆ ಯುವಕ ಅಕಸ್ಮಾತ್ತಾಗಿ ತನಗೆ ನದಿಯಲ್ಲಿ ದೊರೆತ ಆ ಸಂಪತ್ತಿನ ಬಗ್ಗೆ ದುರಾಸೆಯನ್ನು ತೋರದೆ, ಸ್ವಾರ್ಥ ಬುದ್ಧಿಯಿಂದ ಅದನ್ನು ತನ್ನದಾಗಿಸಿಕೊಳ್ಳದೇ ಆ ನಿಧಿಯ ನಿಜವಾದ ವಾರಸುದಾರರು ಯಾರು ಎನ್ನುವುದನ್ನು ಪತ್ತೆ ಹಚ್ಚಿ, ಅವರಿಗೆ ತಲುಪಿಸಿದ್ದು, ಯುವಕನ ಈ ಪ್ರಾಮಾಣಿಕತೆಯನ್ನು ಜನರು ಮೆಚ್ಚಿ ಕೊಂಡಾಡಿದ್ದಾರೆ.

ಈ ನಿಧಿ 22 ವರ್ಷಗಳ ಹಿಂದಿನಿದ್ದು ಎನ್ನಲಾಗಿದ್ದು, ನೀರಿನಲ್ಲಿ ಸಿಕ್ಕ ಈ ನಿಧಿಯ ಬಗ್ಗೆ ಸುದ್ದಿಗಳಾಗಿದ್ದು, ಜನರು ಅಚ್ಚರಿ ಯನ್ನು ವ್ಯಕ್ತಪಡಿಸಿದ್ದಾರೆ. ಇಂತಹುದೊಂದು ಆಸಕ್ತಿಕರ ಘಟನೆಯು ಇಂಗ್ಲೆಂಡ್ ನಲ್ಲಿ ನಡೆದಿದೆ. 15 ವರ್ಷ ವಯಸ್ಸಿನ ಜಾರ್ಜ್ ಟಿಂಡೇಲ್ ತನ್ನ 52 ವಯಸ್ಸಿನ ತಂದೆ ಕೆವಿನ್ ಜೊತೆಗೆ ವಿತಂ ನದಿಯಲ್ಲಿ ಮೀನುಗಳನ್ನು ಹಿಡಿಯುವುದಕ್ಕಾಗಿ ಹೋಗಿದ್ದಾನೆ. ಫಿಶಿಂಗ್ ಮಾಡುವಾಗ ಅವರು ನದಿಯೊಳಗೆ ಅಯಸ್ಕಾಂತವನ್ನು ಇಟ್ಟು, ನದಿಯಿಂದ ಹಲವು ವಸ್ತುಗಳನ್ನು ಹೊರಗೆ ತೆಗೆದಿದ್ದಾರೆ.

ಹಾಗೆ ತೆಗೆದ ವಸ್ತುಗಳಲ್ಲಿ ಒಂದು ಈ ಖಜಾನೆ. ಡೈಲಿ ಸ್ಟಾರ್ ವರದಿಯ ಪ್ರಕಾರ ಜಾರ್ಜ್ ಅಯಸ್ಕಾಂತವನ್ನು ನದಿಯ ಒಳಗೆ ಎಸೆದ ಕೂಡಲೇ ಅದಕ್ಕೆ ಒಂದು ಬಾಕ್ಸ್ ಅಂಟಿಕೊಂಡಿದೆ. ಜಾರ್ಜ್ ಆ ಬಾಕ್ಸ್ ಅನ್ನು ನೀರಿನಿಂದ ಹೊರಗೆ ತೆಗೆದು ನೋಡಿ ಆಶ್ಚರ್ಯ ಪಟ್ಟಿದ್ದಾನೆ. ಏಕೆಂದರೆ ಆ ಬಾಕ್ಸ್ ನೊಳಗೆ ಸೇಫ್ ತುಂಬಾ ಹಣ ಇತ್ತು. ಅದರಲ್ಲಿದ್ದ ಹಣವನ್ನು ಲೆಕ್ಕ ಹಾಕಿದಾಗ ಅದು ಸುಮಾರು ಒಂದು ಲಕ್ಷ ಮೂವತ್ತು ಸಾವಿರ ಡಾಲರ್ ಗಳಿಗಿಂತ ಅಧಿಕ ಮೊತ್ತವನ್ನು ಒಳಗೊಂಡಿತ್ತು.

ಹಾಗೆ ಆ ಬಾಕ್ಸ್ ನ ಒಳಗೆ ಪರೀಕ್ಷಿಸುವಾಗ ಅದರಲ್ಲಿ ರಾಬ್ ಎವರೆಟ್ ಎನ್ನುವ ಉದ್ಯಮಿಗೆ ಈ ಸಂಪತ್ತು ಸೇರಿದ್ದು ಎನ್ನುವುದು ಅದರಲ್ಲಿದ್ದ ಒಂದು ಕಾರ್ಡ್ ನಿಂದ ತಿಳಿದು ಬಂದಿದೆ. ಇದನ್ನು ನೋಡಿ ಜಾರ್ಜ್ ಮತ್ತು ಆತನ ತಂದೆ ಕೆವಿನ್ ಇಬ್ಬರೂ ಸಹಾ ಆ ಹಣವನ್ನು ತಮ್ಮ ಬಳಿ ಇಟ್ಟು ಕೊಳ್ಳುವುದು ಬೇಡ, ಬದಲಾಗಿ ಅದರ ನಿಜವಾದ ಮಾಲೀಕರಿಗೆ ಕೊಟ್ಟು ಬಿಡೋಣ ಎನ್ನುವ ನಿರ್ಣಯವನ್ನು ಮಾಡಿದ್ದಾರೆ. ನಂತರ ಅವರ ರಾಬ್ ಎವರೆಟ್ ಅವರನ್ನು ಸಂಪರ್ಕಿಸಿದ್ದಾರೆ‌.

2000 ನೇ ವರ್ಷದಲ್ಲಿ ರಾಬ್ ಎವರೆಟ್ ಅವರ ಕಛೇರಿಯಲ್ಲಿ ಕಳ್ಳತನವಾಗಿತ್ತು. ಅಲ್ಲಿಂದಲೇ ಹಣ ಇರಿಸಿದ್ದ ಈ ಸೇಫ್ ನಾಪತ್ತೆಯಾಗಿತ್ತು ಎನ್ನುವ ಮಾತನ್ನು ರಾಬ್ ಹೇಳಿದ್ದಾರೆ. ಅಲ್ಲದೇ 22 ವರ್ಷಗಳ ನಂತರ ತನ್ನ ಹಣವನ್ನು ನೋಡಿ ಅವರು ಬಹಳ ಸಂತಸ ಪಟ್ಟಿದ್ದಾರೆ. ಹಣದ ಜೊತೆಗೆ ತನ್ನ ಕೆಲವು ವಸ್ತುಗಳನ್ನು ಕಂಡು ಖುಷಿ ಪಟ್ಟಿರುವ ರಾಬ್, ಜಾರ್ಜ್ ಮತ್ತು ಕೆವಿನ್ ಅವರ ಪ್ರಾಮಾಣಿಕತೆ ಮೆಚ್ಚು, ಅವರಿಗೆ ಸಹಾಯವನ್ನು ನೀಡಲು ಮುಂದಾಗಿದ್ದಾರೆ. ಈ ಅಪರೂಪದ ಘಟನೆಯ ಮಾಹಿತಿ, ವೀಡಿಯೋ ಈಗ ವೈರಲ್ ಆಗಿದೆ.

Leave a Reply

Your email address will not be published.