ಮಿಲ್ಕಿ ಬ್ಯೂಟಿ ಮದುವೆ ಫಿಕ್ಸ್ ಆಗೇ ಹೋಯ್ತಾ? ಮದುವೆ ಯಾವಾಗ ಅಂತ ಬಾಯ್ಬಿಟ್ಟ ನಟಿ!!

Written by Soma Shekar

Published on:

---Join Our Channel---

ಚಿತ್ರರಂಗಕ್ಕೆ ಪ್ರವೇಶ ಮಾಡಿದ ಮೇಲೆ, ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚಿ, ಸ್ಟಾರ್ ನಟಿಯರಾಗಿ ಹೆಸರು ಮಾಡುವಂತಹ ಹಲವು ನಟಿಯರು ತಮ್ಮ ವೈಯಕ್ತಿಕ ಜೀವನದಲ್ಲಿ ಮದುವೆಯಿಂದ ಸಾಕಷ್ಟು ದೂರವೇ ಉಳಿದು ಬಿಡುತ್ತಾರೆ. ಈಗಾಗಲೇ ಸಾಕಷ್ಟು ಜನ ನಟಿಯರು ಇನ್ನೂ ಮದುವೆಯಾಗದೇ ಸಿನಿಮಾ ಕೆಲಸಗಳಲ್ಲಿ ತಮ್ಮನ್ನ ತಾವು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಅಂತಹ ನಟಿಯರ ಸಾಲಿನಲ್ಲಿ ದಕ್ಷಿಣದ ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ತಮನ್ನಾ ಭಾಟಿಯಾ ಕೂಡಾ ಒಬ್ಬರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ದಕ್ಷಿಣ ಸಿನಿಮಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಹೆಚ್ಚು ಬೇಡಿಕೆಯನ್ನು ಪಡೆದಿರುವಂತಹ ತಮನ್ನಾ ಭಾಟಿಯಾ, ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಈ ನಟಿಯು ದಕ್ಷಿಣದ ಬಹುತೇಕ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ತೆರೆಯನ್ನು ಹಂಚಿಕೊಂಡಿದ್ದಾರೆ. ಬಾಹುಬಲಿ ಸಿನಿಮಾದಲ್ಲಿಯೂ ನಾಯಕಿಯಾಗಿ ಮಿಂಚಿದ್ದ ತಮನ್ನಾ ಭಾಟಿಯಾ ಬಾಲಿವುಡ್ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ.

ಸಿನಿಮಾಗಳು ಹಾಗೂ ವೆಬ್ ಸಿರೀಸ್ ಗಳಲ್ಲಿ ಪ್ರಸ್ತುತ ಸಾಕಷ್ಟು ಬ್ಯುಸಿಯಾಗಿರುವ ಈ ನಟಿ ಬಾಹುಬಲಿ ಸಿನಿಮಾದ ನಂತರ ಹೊಸ ಸಿನಿಮಾಗಳ ಆಯ್ಕೆ ವಿಷಯದಲ್ಲಿ ಮೊದಲಿಗಿಂತಲೂ ಹೆಚ್ಚು ಗಮನ ವಹಿಸುತ್ತಿದ್ದಾರೆ. ಆದ್ದರಿಂದಲೇ ಅವರು ನಟಿಸುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆಯಾದರೂ, ಅವರು ನಟಿಸುವ ಸಿನಿಮಾಗಳಲ್ಲಿನ ಅವರ ಪಾತ್ರ ಹಾಗೂ ಆ ಸಿನಿಮಾ ಯಶಸ್ಸಿನ ಪಟ್ಟಿಗೆ ಸೇರುತ್ತಿದೆ. ಹೀಗೆ ಸದಾ ಸಿನಿಮಾ ವಿಷಯ ಗಳಿಂದಲೇ ಸುದ್ದಿಯಾಗುತ್ತಿದ್ದ ತಮನ್ನಾ ಇದೀಗ ಅವರ ಖಾಸಗಿ ಜೀವನದ ವಿಷಯವಾಗಿ ಸುದ್ದಿಯಾಗಿದ್ದಾರೆ.

ನಟಿ ತಮನ್ನಾ ಈಗ ಸುದ್ದಿಯಾಗಿರುವುದು ಅವರ ಮದುವೆಯ ವಿಷಯದಿಂದಾಗಿ. ಹೌದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ, ಅವರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರ ನೀಡಿರುವ ನಟಿ ತಮನ್ನಾ ಇನ್ನು ಎರಡು ವರ್ಷಗಳ ನಂತರ ತಾನು ಮದುವೆಯಾಗುವುದಾಗಿ ಹೇಳಿದ್ದಾರೆ. ಪ್ರಸ್ತುತ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಎರಡು ವರ್ಷಗಳ ಕಾಲ ಮದುವೆಯ ಬಗ್ಗೆ ಆಲೋಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ನಟಿ ತಮನ್ನಾ ತಮ್ಮ ಮದುವೆಯ ವಿಚಾರವನ್ನು ಹೇಳಿದ ಕೂಡಲೇ ತಮನ್ನಾ ಮದುವೆಯಾಗಲಿರುವ ವರ ಯಾರು?? ಎನ್ನುವ ಕುತೂಹಲ ಕೂಡಾ ಹುಟ್ಟಿಕೊಂಡಿದೆ. ತಮನ್ನಾ ಈಗಾಗಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಕನ್ನಡದ ಹೊಸ ಸಿನಿಮಾವೊಂದರಲ್ಲಿ ಅವರು ನಾಯಕಿಯಾಗಿ ನಟಿಸುವುದು ಬಹುತೇಕ ಖಚಿತ ಎನ್ನಲಾಗಿದ್ದು, ಕಬ್ಜಾ ಸಿನಿಮಾದ ಅವರು ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ.

Leave a Comment