ಮಾ ಚುನಾವಣೆಯಲ್ಲಿ ಪ್ರಕಾಶ್ ರಾಜ್ ಗೆ ತೀವ್ರ ಮುಖ ಭಂಗ: ಮಂಚು ವಿಷ್ಣು ವಿ ರು ದ್ದ ಸೋಲುಂಡ ಪ್ರಕಾಶ್ ರಾಜ್

Written by Soma Shekar

Published on:

---Join Our Channel---

ತೆಲುಗು ಚಿತ್ರರಂಗದ ಪ್ರತಿಷ್ಠಿತ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಟ ಪ್ರಕಾಶ್ ರಾಜ್ ಹಾಗೂ ಮಂಚು ವಿಷ್ಣು ಸ್ಪರ್ಧೆ ನಡೆಸಿದ್ದರು. ಚುನಾವಣೆಯಲ್ಲಿ ಇಬ್ಬರು ನಟರ ನಡುವೆ ತೀವ್ರವಾದ ಹಣಾಹಣೆ ಏರ್ಪಟ್ಟಿತ್ತು. ಅಲ್ಲದೇ ನಟ ಪ್ರಕಾಶ್ ರಾಜ್ ಅವರಿಗೆ ಮೆಗಾಸ್ಟಾರ್ ಕುಟುಂಬದ ಬೆಂಬಲ ಸಹಾ ವ್ಯಕ್ತವಾಗಿತ್ತು. ಮಾ ಚುನಾವಣೆಯು ಈ ಬಾರಿ ಒಂದು ಪ್ರತಿಷ್ಠೆಯ ವಿಚಾರವಾಗಿ ಮಾರ್ಪಟ್ಟಿತ್ತು ಕೂಡಾ. ಈಗ ಎಲ್ಲಾ ಮುಗಿದು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ನಟ ಪ್ರಕಾಶ್ ರಾಜ್ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ.

ಮಾ ಚುನಾವಣೆಯಲ್ಲಿ ಮಂಚು ವಿಷ್ಣು 381 ಮತಗಳನ್ನು ಪಡೆದು ಜಯಶಾಲಿಯಾಗಿದ್ದು, ನಟ ಪ್ರಕಾಶ್ ರಾಜ್ 274 ಮತಗಳನ್ನು ಮಾತ್ರವೇ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫಲಿತಾಂಶ ಘೋಷಣೆಯ ಬೆನ್ನಲ್ಲೇ ನಟ ಪ್ರಕಾಶ್ ರಾಜ್, ಫಲಿತಾಂಶವನ್ನು ನಾನು ಗೌರವಿಸುತ್ತೇನೆ. ಮಂಚು ವಿಷ್ಣು ಅವರಿಗೆ ಅಭಿನಂದನೆಗಳು. ಸೋಲು ಗೆಲುವನ್ನು ಮೀರಿ ಎಲ್ಲರೂ ಚಿತ್ರರಂಗದ ಹಿತಕ್ಕಾಗಿ ಒಗ್ಗಟ್ಟಾಗಿ ಕೆಲಸವನ್ನು ಮಾಡೋಣ ಎನ್ನುವ ಮಾತನ್ನು ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.

ತೆಲುಗು ಚಿತ್ರರಂಗದ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ನ ಒಟ್ಟು 925 ಸದಸ್ಯರಲ್ಲಿ 883 ಸದಸ್ಯರಿಗೆ ಮತದಾನದ ಹಕ್ಕು ಇತ್ತು. ಆದರೆ ಇದರಲ್ಲಿ ಕೇವಲ 655 ಮತಗಳು ಮಾತ್ರವೇ ಚಲಾವಣೆ ಆಗಿದೆ. ಟಾಲಿವುಡ್ ನ ಸ್ಟಾರ್ ನಟರಾಗಿರುವ ಅಲ್ಲು ಅರ್ಜುನ್ ,ನಾಗಚೈತನ್ಯ, ಎನ್ ಟಿ ಆರ್ ಹಾಗೂ ಹಿರಿಯ ನಟ ದಗ್ಗುಬಾಟಿ ವೆಂಕಟೇಶ್ ಹೀಗೆ ಹಲವು ಚುನಾವಣೆಯಲ್ಲಿ ತಮ್ಮ ಮತ ಚಲಾವಣೆ ಮಾಡಿದ್ದಾರೆ. ನಟ ಪ್ರಕಾಶ್ ರೈ ರವರಿಗೆ ಮೆಗಾಸ್ಟಾರ್ ಕುಟುಂಬ ಬೆಂಬಲವಾಗಿ ನಿಂತಿತ್ತು.

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪ್ರಕಾಶ್ ರಾಜ್ ಪರವಾಗಿ ಪ್ರಚಾರವನ್ನು ಮಾಡಿದ್ದರು. ಮತ್ತೊಬ್ಬ ಸ್ಪರ್ಧಿ ಮಂಚು ವಿಷ್ಣು ಮೇಲೆ ತೀವ್ರವಾದ ವಾಗ್ದಾಳಿಯನ್ನು ನಡೆಸಿದ್ದರು. ಇನ್ನು ಪ್ರಕಾಶ್ ರಾಜ್ ಮೂಲತಃ ತೆಲುಗು ನಟರಲ್ಲ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಕೆಲವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಈಗ ಚುನಾವಣೆ ಮುಗಿದು, ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ,ಪ್ರಕಾಶ್ ರಾಜ್ ಸೋಲನ್ನು ಅನುಭವಿಸಿದ್ದಾರೆ.

Leave a Comment