ಮಾವಿನ ಹಣ್ಣು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ: ಮಾವಿನ ಅದ್ಭುತ ಗುಣಗಳೇನು ಗೊತ್ತಾ??

Entertainment Featured-Articles Health News
80 Views

ಮಾವಿನ ಹಣ್ಣು ಯಾರಿಗೆ ತಾನೇ ಇಷ್ವವಾಗುವುದಿಲ್ಲ ಹೇಳಿ? ಮಾವಿನ ಹಣ್ಣು ಇಷ್ಟ ಪಡದವರ ಸಂಖ್ಯೆ ಬಹಳ ಕಡಿಮೆ ಎಂದೂ ಹೇಳಬಹುದು. ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದೂ ಕರೆಯುವುದುಂಟು. ‌ಮಾವಿನ ಹಣ್ಣಿನ ಕಾಲ ಬಂತೆಂದರೆ ಬಹಳಷ್ಟು ಜನರು ಈ ಹಣ್ಣನ್ನು ಬಹಳ ಇಷ್ಟಪಟ್ಟು ಸೇವನೆ ಮಾಡುತ್ತಾರೆ.‌ ಮಾವಿನ ಹಣ್ಣು ರುಚಿ ಮಾತ್ರವೇ ಅಲ್ಲದೇ ನಮ್ಮ ದೇಹದ ಆರೋಗ್ಯಕ್ಕೆ ಅಗತ್ಯವಾಗಿರುವಂತಹ ಅನೇಕ ಉತ್ತಮ ಅಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಇದು ನಮ್ಮ ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು. ಹಾಗಾದರೆ ಮಾವು ತಿನ್ನುವುದರಿಂದ ನಮಗೆ ಆಗುವ ಪ್ರಯೋಜನಗಳೇನು? ಬನ್ನಿ ಒಮ್ಮೆ ತಿಳಿಯೋಣ.

ಮಾವಿನ ಹಣ್ಣಿನಲ್ಲಿ ಇರುವಂತಹ ಬೀಟಾ ಕೆರೋಟಿನ್ ಗಳು ವಿಟಮಿನ್ ಎ ಗೆ ಪರಿವರ್ತನೆ ಆಗುತ್ತವೆ. ಇವು ನಮ್ಮ ಮುಖದ ಮೇಲೆ ಏಳುವ ಮೊಡವೆಗಳ ಮೇಲೆ ಪರಿಣಾಮ ವನ್ನು ಬೀರುತ್ತದೆ ಎನ್ನಲಾಗಿದೆ. ಅಂದರೆ ಇವು ಮುಖದ ಅಂದವನ್ನು ಹಾಳು ಮಾಡುವ ಮೊಡವೆಗಳನ್ನು ದೂರವಿಡಲು ನಮಗೆ ನೆರವನ್ನು ಒದಗಿಸುತ್ತದೆ. ಅಂದರೆ ಮೊಡವೆಗಳ ಬಾಧೆಯಿಂದ ಬೇಸತ್ತ ಯುವ ಜನರಿಗೆ ಮಾವು ಖಚಿತವಾಗಿ ಅವರ ಸಮಸ್ಯೆಗೆ ಒಂದು ಪರಿಹಾರವನ್ನು ನೀಡುವುದು ಎಂದು ಹೇಳಬಹುದಾಗಿದೆ.

ಮಾವಿನ ಹಣ್ಣಿನಲ್ಲಿರುವ ಬೀಟಾ ಕೆರೋಟಿನ್ ಆ್ಯಂಟಿ ಏಜಿಂಗ್ ಸಮಸ್ಯೆಯನ್ನು ಸಹಾ ನಿವಾರಣೆ ಮಾಡಲು ಸಹಾಯವನ್ನು ಒದಗಿಸುತ್ತದೆ. ಮಾವಿನ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಕೊಲೆಜನ್ ಕಡಿಮೆ ಮಾಡಲು ನೆರವನ್ನು ನೀಡುತ್ತದೆ. ಅಲ್ಲದೇ ಇದು ಕಪ್ಪು ಕಲೆಗಳು ಹಾಗೂ ಪಿಗ್ಮೆಂಟೇಶನ್ ನ ಸಮಸ್ಯೆಗೆ ಕೂಡಾ ಪರಿಹಾರವನ್ನು ನೀಡುತ್ತದೆ ಎನ್ನಲಾಗಿದೆ. ಈ ಸಮಸ್ಯೆಗಳು ಇರುವವರು ಮಾವಿನ ಹಣ್ಣಿನ ನಿಯಮಿತ ಸೇವನೆಯನ್ನು ಮಾಡಬಹುದು.

ಮಾವಿನ ಹಣ್ಣಿನ ತಿರುಳನ್ನು ಗ್ಲಿಸರಿನ್ ಅಥವಾ ಜೇನುತುಪ್ಪದ ಜೊತೆ ಸೇರಿಸಿ ಚರ್ಮದ ಮೇಲೆ ಅಪ್ಲೈ ಮಾಡುವ ಮೂಲಕ ಡೆಡ್ ಸ್ಕಿನ್ ಸೆಲ್ಸ್ ಗಳನ್ನು ತೆಗೆದು ಹಾಕಲು ನೆರವಾಗುತ್ತದೆ. ಅಲ್ಲದೇ ಚರ್ಮದ ಮೇಲೆ ಇದನ್ನು ಹಾಕಿ, ತೊಳೆದ ಮೇಲೆ ಚರ್ಮವು ಮೊದಲಿಗಿಂತ ಹೆಚ್ಚು ಕಾಂತಿಯುಕ್ತವಾಗಿ, ಆರೋಗ್ಯ ವಾಗಿಯೂ ಹೊಳೆಯುವುದು ಎನ್ನಲಾಗಿದೆ. ಈ ಮೂಲಕ ಮಾವಿ‌ನ ಹಣ್ಣು ನಮ್ಮ ಚರ್ಮ ಸೌಂದರ್ಯ ರಕ್ಷಣೆಯಲ್ಲಿ ತನ್ನ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಯಬಹುದು.

ಮಾವಿನಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಗಳು
ಸಮೃದ್ಧವಾಗಿರುವ ಕಾರಣ ಇದು ನಮ್ಮನ್ನು ಹಲವು ರೋಗಗಳಿಂದ ದೂರವಿಡುತ್ತದೆ. ಮಾವಿನ ಹಣ್ಣು ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ರಕ್ತದ ಕ್ಯಾನ್ಸರ್ ಅನ್ನು ತಡೆಗಟ್ಟಲು ಬಹಳ ಹೆಸರುವಾಸಿಯಾಗಿದೆ. ಹೀಗೆ ಮಾವು ಹಲವು ವಿಧದ ರೋಗಿಗಳನ್ನು ನಮ್ಮಿಂದ ದೂರವಿಡಲು ಸಹಾ ನೆರವಾಗುತ್ತದೆ.‌

ಈ ಮೇಲಿನ ಎಲ್ಲಾ ವಿಷಯಗಳನ್ನು ನೋಡಿದಾಗ ಮಾವಿನಹಣ್ಣಿನ ಪ್ರಾಮುಖ್ಯತೆ ಏನು ಎಂಬುದು ನಮಗೆ ಅರ್ಥವಾಗುತ್ತದೆ. ಕೇವಲ ರುಚಿಯಿಂದ ಮಾತ್ರವೇ ಅಲ್ಲದೆ ಮಾವಿನ ಹಣ್ಣು ತನ್ನಲ್ಲಿರುವ ವಿಶೇಷವಾದ ಪೋಷಕಾಂಶಗಳಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಬಹಳಷ್ಟು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ನಮಗೆ ಅರ್ಥವಾಗುತ್ತದೆ. ಮಾವಿನ ಹಣ್ಣಿನ ರಾಜ ಎನ್ನುವುದು ಸಾರ್ಥಕವೆನಿಸುತ್ತದೆ.

Leave a Reply

Your email address will not be published. Required fields are marked *