ಮಾಲೆ ಧರಿಸಿ, ಕಠಿಣ ವ್ರತ ಆಚರಿಸಿ, ಶಬರಿಮಲೆ ಯಾತ್ರೆ ಕೈಗೊಂಡ ಬಾಲಿವುಡ್ನ ಸ್ಟಾರ್ ನಟ

Written by Soma Shekar

Published on:

---Join Our Channel---

ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಸಾಮಾನ್ಯ ಜನರು ಹಾಗೂ ಸಿನಿಮಾ ಸೆಲೆಬ್ರಿಟಿಗಳು ಮತ್ತು ರಾಜಕೀಯ ನಾಯಕರಲ್ಲಿ ಕೆಲವರು ದಕ್ಷಿಣದ ಸುಪ್ರಸಿದ್ಧ ಪುಣ್ಯಕ್ಷೇತ್ರವಾದ, ಪ್ರಮುಖ ಧಾರ್ಮಿಕ ಕೇಂದ್ರವಾದ ಕೇರಳದಲ್ಲಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಇಲ್ಲಿ ಭಕ್ತರು ಅಯ್ಯಪ್ಪನ ಸನ್ನಿಧಾನಕ್ಕೆ ಆತನ ದರ್ಶನವನ್ನು ಮಾಡಲು ತೆರಳುವ ಮುನ್ನ ಪಾಲಿಸಲೇಬೇಕಾದ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುತ್ತಾರೆ. ಮಾಲೆ ಧರಿಸಿ 41ದಿನಗಳ ಅಯ್ಯಪ್ಪ ವ್ರತವನ್ನು ಭಕ್ತಿಯಿಂದ ಮಾಡಿ, ಅನಂತರ ಶಬರಿಗಿರಿಗೆ ತೆರಳುತ್ತಾರೆ.

ದಕ್ಷಿಣ ಸಿ‌ನಿಮಾರಂಗದ ತಾರೆಯರು ಶಬರಿ ಮಲೆಗೆ ತೆರಳುವುದು ಗೊತ್ತಿದೆ ಆದರೆ ಬಾಲಿವುಡ್ ವಿಚಾರಕ್ಕೆ ಬಂದಾಗ, ಬಾಲಿವುಡ್ ಮಂದಿ ಶಬರಿ ಮಲೆಗೆ ಬಂದ ಉದಾಹರಣೆಗಳು ತೀರಾ ವಿರಳ ಎಂದೇ ಹೇಳಬಹುದು. ಆದರೆ ಈಗ ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ ಅವರು ಶಬರಿ ಮಲೆ ಅಯ್ಯಪ್ಪನ ದರ್ಶನ ಮಾಡಲು ಯಾತ್ರೆ ಕೈಗೊಂಡ ವಿಷಯವು ಎಲ್ಲರ ಗಮನ ಸೆಳೆದಿದೆ ಹಾಗೂ ಸುದ್ದಿಯಾಗಿ ಎಲ್ಲರ ಕುತೂಹಲಕ್ಕೆ ಸಹಾ ಕಾರಣವಾಗಿದೆ.

ಅಯ್ಯಪ್ಪ ವ್ರತ ಮಾಡುವವರು ಮಾಲೆ ಧರಿಸಿ, ಸಾತ್ವಿಕ ಆಹಾರ ಸೇವನೆ ಮಾಡುತ್ತಾ, ಕಾಲಿಗೆ ಚಪ್ಪಲಿ ಧರಿಸದೇ, ಮದ್ಯ, ಮಾಂಸ ಸೇವನೆ ಮಾಡದೇ, ಸಾಂಸಾರಿಕ ಜೀವನದಿಂದ ದೂರ ಉಳಿದು ಒಂದು ಸರಳ ಜೀವನ ಮಾಡಬೇಕು. ನಟ ಅಜಯ್ ದೇವಗನ್ ಅವರು ಸಹಾ ಮಾಲೆ ಧರಿಸಿ, 41 ದಿನಗಳ ವ್ರತವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದು, ಇದೀಗ ಅವರು ಶಬರಿಮಲೆ ಸ್ವಾಮಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಯಾತ್ರೆಯನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ಅಜಯ್ ದೇವಗನ್ ಅವರು ಮಾಲಾಧಾರಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗಳು ಬಾಲಿವುಡ್ ನಲ್ಲೂ ಸಹಾ ಸದ್ದು ಮಾಡಿದೆ. ನಟ ಅಜಯ್ ದೇವಗನ್ ಅವರ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಇದೇ ಮೊದಲ ಬಾರಿಗೆ ಅವರು ದಕ್ಷಿಣದ ಸಿನಿಮಾವೊಂದರಲ್ಲಿ ನಟಿಸಿದ್ದು, ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ನಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

Leave a Comment