ಮನುಷ್ಯ ಮತ್ತು ಶ್ವಾನದ ನಡುವಿನ ಸ್ನೇಹ ಸಂಬಂಧ ಹಾಗೂ ಆಪ್ಯಾಯತೆ ಇಂದಿನದಲ್ಲ, ಅನಾದಿ ಕಾಲದಿಂದಲೂ ನಾಯಿ ಮನುಷ್ಯನ ಬಹಳ ಪ್ರಾಮಾಣಿಕ ಹಾಗೂ ನಿಷ್ಠೆಯ ಸಂಗಾತಿಯಾಗಿದೆ. ತುತ್ತು ಅನ್ನ ಹಾಕಿದವರಿಗೆ ತನ್ನ ಇಡೀ ಜೀವನ ಅದು ಋಣಿಯಾಗಿರುತ್ತದೆ. ನಿಷ್ಕಲ್ಮಶ ಪ್ರೀತಿ, ನಿಸ್ವಾರ್ಥ ಪ್ರೇಮವನ್ನು ಮೆರೆಯುವ ನಾಯಿಯ ನಿಷ್ಠೆಗೆ ಸರಿಸಾಟಿ ಜಗತ್ತಿನಲ್ಲಿ ಇನ್ನೊಂದಿಲ್ಲ. ನಾಯಿಯ ನಿಷ್ಠೆ ಪ್ರಶ್ನಾತೀತ. ಸಂದರ್ಭ ಒದಗಿ ಬಂದಾಗ ನಾಯಿ ತನ್ನ ಮಾಲೀಕರ ಪ್ರಾಣ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ಸಹಾ ಹಿಂದೇಟು ಹಾಕುವುದಿಲ್ಲ.
ನಾಯಿಯ ನಿಷ್ಠೆಯ ಕುರಿತಾಗಿ ಅನೇಕ ಪುರಾವೆಗಳು, ನಿದರ್ಶನಗಳು ಇತಿಹಾಸದ ಉದ್ದಕ್ಕೂ ಸಹಾ ದಾಖಲಾಗಿದೆ. ಇದೀಗ ಅಂತಹುದೇ ಒಂದು ಘಟನೆ ಮತ್ತೊಮ್ಮೆ ವರದಿಯಾಗಿದೆ. ತನ್ನ ಮಾಲೀಕಳ ಪ್ರಾಣವನ್ನು ಉಳಿಸುವ ಸಲುವಾಗಿ ನಾಯಿಯೊಂದು ತನ್ನ ಪ್ರಾಣವನ್ನು ಪಣಕ್ಕೆ ಇಟ್ಟ ಘಟನೆ ನಡೆದಿದ್ದು, ಈ ವಿಷಯ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದ್ದು ಜನರಿಂದ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದೆ.
ಈ ಘಟನೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ಇಲ್ಲಿ ಯುವತಿಯೊಬ್ಬಳು ವಾಯು ವಿಹಾರಕ್ಕೆ ಎಂದು ತಾನು ಸಾಕಿರುವ ನಾಯಿಯ ಜೊತೆಗೆ ಹೊರಗೆ ಹೋದಂತಹ ಸಂದರ್ಭದಲ್ಲಿ ಪರ್ವತ ಸಿಂಹವೊಂದು ಅವರ ಮೇಲೆ ಧಾ ಳಿ ಇಟ್ಟಿದೆ. ಈ ವೇಳೆ ಯುವತಿಯ ಮೇಲೆ ಸಿಂಹ ಧಾ ಳಿ ಇಟ್ಟ ಕೂಡಲೇ ನಾಯಿ ಅ ಪಾ ಯವನ್ನು ಕಂಡು, ತಾನು ಪ್ರಾಣವನ್ನು ಒತ್ತೆಯಿಟ್ಟು, ಸಿಂಹದ ಎದುರು ಹೋ ರಾ ಡಿ ಯುವತಿಯ ಪ್ರಾಣವನ್ನು ಉಳಿಸಿದೆ.
ಉತ್ತರ ಕ್ಯಾಲಿಫೋರ್ನಿಯಾದ ಟ್ರಿನಿಟಿ ನದಿಯ ಬಳಿ ಎರಿನ್ ವಿಲ್ಸನ್ ಹೆಸರಿನ ಯುವತಿಯು ತನ್ನ ಸಾಕು ನಾಯಿಯೊಂದಿಗೆ ವಿಹರಿಸುತ್ತಿದ್ದಳು. ಆಗಲೇ ಪರ್ವತ ಸಿಂಹವು ಆಕೆಯ ಮೇಲೆ ಧಾ ಳಿ ಇಟ್ಟಿದೆ. ಯುವತಿ ಸಿಂಹವನ್ನು ನೋಡಿ ಕೂಗಾಡಿದ್ದಾಳೆ, ಆಕೆಯ ಜೊತೆಗಿದ್ದ ನಾಯಿ ತನ್ನ ಪ್ರಾಣವನ್ನು ಲೆಕ್ಕಿಸದೇ ಸಿಂಹದ ಮೇಲೆ ಎರಗಿದೆ. ಈ ಘಟನೆಯಲ್ಲಿ ನಾಯಿ ತೀವ್ರವಾಗಿ ಗಾಯಗೊಂಡಿದೆ. ಆಸ್ಪತ್ರೆಯಲ್ಲಿ ನಾಯಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದೆ ಎನ್ನಲಾಗಿದೆ.
ಇನ್ನು ಈ ಶ್ವಾನದ ವಿಚಾರವಾಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅದರ ನಿಷ್ಠೆ ಹಾಗೂ ನಿಯತ್ತಿಗೆ ಅಪಾರವಾದ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಅನೇಕರು ನಾಯಿಗೆ ಇರುವ ಇಂತಹ ಗುಣ, ನಿಯತ್ತು ಅನ್ನೋದು ಮನುಷ್ಯರಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ. ನಾಯಿಯ ಸ್ವಾಮಿ ನಿಷ್ಠೆ ಎಂತದ್ದು ಎನ್ನುವುದನ್ನು ಈ ಘಟನೆಯು ಮತ್ತೊಮ್ಮೆ ಸಾಬೀತು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.