ಮಾಲತೇಶ ಸ್ವಾಮಿಯ ದೈವವಾಣಿ: ಕೊರೊನಾ ಬಗ್ಗೆ ಅಚ್ಚರಿಯ ಭವಿಷ್ಯವಾಣಿ ನುಡಿದ ದೈವ
ವಿಜಯದಶಮಿಯ ಪ್ರಯುಕ್ತ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವವು ಬಹಳ ಸಂಭ್ರಮ ಹಾಗೂ ಭಕ್ತಿ ಶ್ರದ್ಧೆಯಿಂದ ನೆರವೇರಿದ್ದು, ಈ ವೇಳೆ ದೇವರಗುಡ್ಡ ಗ್ರಾಮದ ಹೊರವಲಯದಲ್ಲಿ ಇರುವಂತಹ ಕರಿಯಾಲ ದಲ್ಲಿ, 21 ಅಡಿ ಬಿಲ್ಲನ್ನೇರಿ ಗೊರವಯ್ಯ ನಾಗಪ್ಪ “ಯರಿ ದೊರೆ ಅಕ್ಕತಲೆ, ದೈವ ದರ್ಬಾರ ಅಕ್ಕತಲೆ ಪರಾಕ್” ಎನ್ನುವ ದೈವವಾಣಿ ಒಂದನ್ನು ಗೊರವಯ್ಯ ಸ್ವಾಮಿ ನುಡಿಯುವ ಮೂಲಕ ನಾಡಿನ ಜನರಿಗೆ ಶುಭ ತರುವ ಭವಿಷ್ಯವಾಣಿ ಒಂದನ್ನು ನೀಡಿದ್ದು, ಈ ಭವಿಷ್ಯವಾಣಿಯ ಅರ್ಥವನ್ನು ಸಹಾ ವಿಶ್ಲೇಷಣೆ ಮಾಡಲಾಗಿದೆ.
ದೈವವಾಣಿಯು ನುಡಿದಿರುವ ಮಾತಿನ ಪ್ರಕಾರ, ರೈತರ ಬೆಳೆಗಳು ಉತ್ತಮ ಫಸಲು ಬಂದು, ರೈತರ ಬದುಕು ಸಮೃದ್ಧವಾಗುತ್ತದೆ. ಮುಂದಿನ ದಿನಗಳಲ್ಲಿ ಭೂಮಿಗೆ ಉತ್ತಮ ಬೆಲೆಯೂ ದೊರೆಯುತ್ತದೆ. ರೈತರು ಉತ್ತಮ ಫಸಲನ್ನು ಪಡೆಯಲಿದ್ದಾರೆ. ರೋಗ ರುಜಿನಗಳು ಬಾರದಂತೆ, ಕೊರೊನಾ ಮೂರನೇ ಅಲೆ ಬರೆದಂತೆ ಜನರ ಮೇಲೆ ದೈವದ ಕೃಪೆ ಇರುತ್ತದೆ ಎನ್ನುವ ಮಾತನ್ನು ಕಾರ್ಣಿಕ ದೈವ ವಾಣಿಯನ್ನು, ಮಾಲತೇಶ ದೇವರ ಪ್ರಧಾನ ಅರ್ಚಕರಾಗಿ ಇರುವಂತಹ ಸಂತೋಷ ಭಟ್ಟ ಗುರೂಜಿ ಅವರು ವಿಶ್ಲೇಷಣೆಯನ್ನು ಮಾಡಿದ್ದಾರೆ.
ರಾಜಕೀಯವಾಗಿ ಕೂಡಾ ಈ ವೇಳೆ ಕೆಲವು ವಿಶ್ಲೇಷಣೆಗಳನ್ನು ಮಾಡಲಾಗಿದೆ. ಪಕ್ಷೇತರರ ಸಹಾಯದಿಂದ ಮುಂದಿನ ರಾಜಕೀಯ ಭವಿಷ್ಯ ಇರುತ್ತದೆ ಎಂದು ಹೇಳಲಾಗಿದೆ. ಅಲ್ಲದೇ ದೇವರಿಗೆ ಪ್ರಿಯವಾಗುವಂತಹ ಆಡಳಿತವನ್ನು ಮುಂದಿನ ಸರ್ಕಾರಗಳು ನೀಡಲಿದೆ ಎಂದೂ ರಾಜಕೀಯದ ಕುರಿತಾಗಿ ಸಂತೋಷ ಭಟ್ಟ ಗುರೂಜಿ ಅವರು ವಿಶ್ಲೇಷಣೆಯನ್ನು ಮಾಡುವ ಮೂಲಕ ರಾಜ್ಯದ ಜನರ ಮನಸ್ಸಿಗೆ ಒಂದು ನೆಮ್ಮದಿಯನ್ನು ನೀಡುವಂತಹ ಭವಿಷ್ಯವಾಣಿಯನ್ನು ವಿಶ್ಲೇಷಣೆ ಮಾಡಿದ್ದಾರೆ. ಎಲ್ಲವೂ ಹೀಗೆ ನಡೆದು ಜನರಿಗೆ ನೆಮ್ಮದಿ ದೊರೆಯಲೆಂದು ಪ್ರಾರ್ಥಿಸೋಣ.