ಮಾರ್ಕೆಟ್ ನಲ್ಲಿ ಕಂಡ ಬಡವನನ್ನು ಮನೆಗೆ ಕರೆ ತಂದು, ಮದುವೆಯಾದ ಮಹಿಳೆ: ಅಪರೂಪದ ಪ್ರೇಮಕಥೆ ಇದು

Written by Soma Shekar

Published on:

---Join Our Channel---

ಮಹಿಳೆಯರು ಮತ್ತು ಶಾಪಿಂಗ್ ಈ ಎರಡೂ ಸಹಾ ಬಹಳ ನಿಕಟವಾದ ಸಂಬಂಧವನ್ನು ಹೊಂದಿವೆ.‌ ಅನೇಕ ಮಹಿಳೆಯರಿಗೆ ಹೊರಗೆ ಶಾಪಿಂಗ್ ಮಾಡುವುದು, ತಮಗೆ ಇಷ್ಟವಾದ ವಸ್ತುಗಳನ್ನು ಕೊಂಡು ತರುವುದು ಎಂದರೆ ಅದೊಂದು ಬಹಳ ಆಸಕ್ತಿಯ, ಇಷ್ಟದ ಹಾಗೂ ಮನಸ್ಸಿಗೆ ಮುದ ನೀಡುವ ಹವ್ಯಾಸವಾಗಿರುತ್ತದೆ. ಮಹಿಳೆಯರ ಶಾಪಿಂಗ್ ಬಗ್ಗೆ ಬಂದಾಗ ಅನೇಕರು ಅದರ ಮೇಲೆ ಜೋಕ್ ಗಳನ್ನು ಸಹಾ ಮಾಡುವರು. ಮಹಿಳೆಯರ ಶಾಪಿಂಗ್ ಎಂದರೆ ಗಂಡಂದಿರ ಪರ್ಸ್ ಖಾಲಿ ಎಂದು ತಮಾಷೆ ಮಾಡಲಾಗುತ್ತದೆ. ಮಹಿಳೆಯರು ಶಾಪಿಂಗ್ ಗೆ ಹೋದಾಗ ಅವರಿಗೆ ಎಷ್ಟು ಕೊಂಡರೂ ತೃಪ್ತಿ ಸಿಗುವುದೇ ಇಲ್ಲ.

ಶಾಪಿಂಗ್ ಗಾಗಿ ಹೋಗುವ ಮಹಿಳೆಯರು ವಿವಿಧ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಆದರೆ ಮಹಿಳೆಯೊಬ್ಬರು ಮಾರುಕಟ್ಟೆಗೆ ಹೋಗಿ, ಬರುವಾಗ ತನ್ನ ಭಾವೀ ಪತಿಯನ್ನು ಕರೆದು ತಂದರೆ ಹೇಗಿರುತ್ತದೆ?? ಇದು ಅಚ್ಚರಿ ಎನಿಸಬಹುದು, ಹಾಸ್ಯ ಎನಿಸಬಹುದು ಹಾಗೂ ಇದೆಂತ ಮಾತು ಎನ್ನಬಹುದು. ಆದರೆ ಇದು ವಾಸ್ತವವಾದರೆ ಹೇಗಿರುತ್ತದೆ? ಊಹೆ ಮಾಡುವುದು ಸಹಾ ಕಷ್ಟ ಅಲ್ಲವೇ?? ಆದರೆ ನಾವೀಗ ಅಂತಹುದೇ ಒಂದು ಅಸಲಿ ವಿಷಯವನ್ನು, ನಿಜ ಜೀವನದಲ್ಲಿ ನಡೆದ ಘಟನೆಯನ್ನು ನಿಮಗೆ ಹೇಳಲು ಹೊರಟಿದ್ದೇವೆ.

ಇಂತಹುದೊಂದು ವಿಚಿತ್ರ ಘಟನೆಯ ಬಗ್ಗೆ ಸ್ವತಃ ಆ ಮಹಿಳೆಯೇ ತಮ್ಮ ಟಿಕ್ ಟಾಕ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದ್ದಾರೆ. ಈ ಮಹಿಳೆಯ ಹೆಸರು ಜಾಸ್ಮೀನ್ ಗ್ರೆಗೋನ್ , ಈಕೆ ಮಾರುಕಟ್ಟೆಯಿಂದ ಕರೆ ತಂದು ಮದುವೆಯಾದ ವ್ಯಕ್ತಿಯ ಹೆಸರು ಮೆಕಾಲಿ ಮರ್ಚಿ ಎನ್ನುವುದಾಗಿದೆ. ವಿವರಗಳ ಪ್ರಕಾರ ಈ ರೋಮ್ಯಾಂಟಿಕ್ ಪ್ರೇಮ ಕಥೆಯು ಒಂದು ಸೂಪರ್ ಮಾರ್ಕೆಟ್ ನ ಹೊರಗೆ ಆರಂಭವಾಯಿತು ಎನ್ನಲಾಗಿದೆ.

ಜಾಸ್ಮೀನ್ ಶಾಪಿಂಗ್ ಮಾಡುವುದಕ್ಕಾಗಿ ಸೂಪರ್ ಮಾರ್ಕೆಟ್ ಗೆ ಹೋಗಿದ್ದಾರೆ. ಈ ವೇಳೆ ಅಲ್ಲೊಬ್ಬ ವ್ಯಕ್ತಿಯನ್ನು ನೋಡಿ, ಆತನ ಪರಿಸ್ಥಿತಿಗೆ ಮರುಕಪಟ್ಟ ಜಾಸ್ಮಿನ್ ಅವರಿಗೆ ಹಣದ ಸಹಾಯವನ್ನು ಮಾಡಲು ಹೋಗಿದ್ದಾರೆ. ಆದರೆ ಆ ವ್ಯಕ್ತಿ ಜಾಸ್ಮೀನ್ ನೀಡದ ಹಣವನ್ನು ಸ್ವೀಕರಿಸಿಲ್ಲ. ಜಾಸ್ಮಿನ್ ಸೂಪರ್ ಮಾರ್ಕೆಟ್ ಒಳಗೆ ಹೋಗಿದ್ದಾರೆ. ಆದರೆ ಆಕೆಯ ಮನಸ್ಸಿನಲ್ಲಿ ಮಾತ್ರ ತನ್ನಿಂದ ಸಹಾಯ ಪಡದ ವ್ಯಕ್ತಿಯ ಬಗೆಗಿನ ಆಲೋಚನೆಗಳೇ ಕಾಡುತ್ತಿದ್ದವು. ಆಕೆ ಆತನ ಬಗ್ಗೆ ಚಿಂತೆಯನ್ನು ಮಾಡುತ್ತಿದ್ದರು.

ಜಾಸ್ಮೀನ್ ಶಾಪಿಂಗ್ ಮುಗಿಸಿ ಹೊರಬಂದಾಗ ಆಕೆಗೆ ಖರೀದಿ ಮಾಡಿದ್ದ ವಸ್ತುಗಳನ್ನು ಸಾಗಿಸಲು ಒಬ್ಬರ ಸಹಾಯ ಬೇಕಿತ್ತು. ಅದನ್ನು ಗಮನಿಸಿದ ಹೊರಗಿದ್ದ ಆ ವ್ಯಕ್ತಿ ಕೂಡಲೇ ಬಂದು ಜಾಸ್ಮಿನ್ ಗೆ ಕಾರಿನವರೆಗೆ ಸರಕುಗಳನ್ನು ಸಾಗಿಸಲು ಸಹಾಯ ಮಾಡಿದ್ದಾನೆ. ಆಗ ಜಾಸ್ಮಿನ್ ಆತನನ್ನು ಡಿನ್ನರ್ ಗೆ ಕರೆದಿದ್ದಾರೆ. ಆದರೆ ಆ ವ್ಯಕ್ತಿ ಹಿಂಜರಿಕೆಯಿಂದಲೇ ಒಪ್ಪಿಕೊಂಡಿದ್ದಾರೆ. ಜಾಸ್ಮಿನ್ ಆತನನ್ನು ಮನೆಗೆ ಕರೆದುಕೊಂಡು ಹೋಗಿ ಅವರ ಜೊತೆ ಮಾತನಾಡಿದ್ದಾರೆ. ಬಹಳ ಹೊತ್ತು ಮಾತನಾಡಿದಾಗ ಜಾಸ್ಮಿನ್ ಗೆ ಆತನ ಹೆಸರು ಮೆಕಾಲಿ ಎಂದು, ಆತನ ಸಂಕಷ್ಟದ ಬಗ್ಗೆ ತಿಳಿದುಕೊಂಡಿದ್ದಾರೆ.

ಮನೆಯಿಲ್ಲದ ಆತನಿಗಾಗಿ ಹೊಟೇಲ್ ಒಂದರಲ್ಲಿ ಜಾಸ್ಮಿನ್ ರೂಮ್ ಬುಕ್ ಮಾಡಿಸಿ ಕೊಟ್ಟಿದ್ದು, ಆತನಿಗೆ ಹೊಸ ಫೋನ್ ಕೊಡಿಸಿದ್ದಾರೆ. ನಂತರ ಅವರ ಮಧ್ಯೆ ಫೋನ್ ಚಾಟಿಂಗ್, ಆಗಾಗ ಕರೆ ಮಾಡುವುದು, ಮಾತನಾಡುವುದು ಎಲ್ಲಾ ಆರಂಭವಾಗಿ ಅವರ ಸ್ನೇಹ ಗಾಢವಾಗಿದೆ. ಕೊನೆಗೆ ಒಂದು ದಿನ ಜಾಸ್ಮೀನ್ ಗೆ ಮೆಕಾಲಿ ತನ್ನ ಜೀವನದಲ್ಲಿ ಉತ್ತಮ ಸಂಗಾತಿ ಆಗಬಲ್ಲನೆಂದು ಎನಿಸಿ, ಆತನೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆತನ ಲುಕ್ ಬದಲಿಸಿದ್ದಾರೆ. ಆತನೊಂದಿಗೆ ವಿವಾಹ ಮಾಡಿಕೊಂಡಿದ್ದಾರೆ.

ಜಸ್ಮೀನ್ ಕೆಲವು ವರ್ಷಗಳ ಹಿಂದಿನ ತನ್ನ ಈ ಪ್ರೇಮಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಮೆಕಾಲಿ ಉದ್ಯೋಗ ಮಾಡುತ್ತಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ‌. ಜಾಸ್ಮಿನ್ ಮೆಕಾಲಿಯ ಜೀವನಕ್ಕೆ ಒಂದು ಹೊಸ ಅರ್ಥವನ್ನು ನೀಡುವ ಜೊತೆಗೆ ಆತನ ಮೇಲೆ ಅಪಾರವಾದ ಪ್ರೀತಿಯನ್ನು ತೋರಿಸಿ ತಮ್ಮ ಜೀವನ ಸಂಗಾತಿ ಮಾಡಿಕೊಂಡಿರುವುದು ತಿಳಿದು ಅನೇಕರು ಮೆಚ್ಚುಗೆಗಳನ್ನು ನೀಡಿ ಹಾಡಿ ಹೊಗಳಿದ್ದಾರೆ.

Leave a Comment