ಮಾರ್ಕೆಟ್ ಗೆ ಹೊಸ ದೇವಿ ಎಂಟ್ರಿ: ದರ್ಶನಕ್ಕೆ ಮುಗಿ ಬಿದ್ದ ಜನ, ಹೊಸ ವರ್ಷಕ್ಕೆ ಆಫರ್ ಕೊಟ್ಟ ಅಮ್ಮನವರು

Written by Soma Shekar

Published on:

---Join Our Channel---

ನಮ್ಮ ದೇಶದಲ್ಲಿ ಜನರಿಗೆ ದೇವರು ಹಾಗೂ ಪವಾಡಗಳ ಮೇಲೆ ಅಪಾರವಾದ ನಂಬಿಕೆಯಿದೆ. ಆದ್ದರಿಂದಲೇ ಅದನ್ನೇ ಅ ಸ್ತ್ರ ವನ್ನಾಗಿ ಮಾಡಿಕೊಂಡ ಕೆಲವರು ಮುಗ್ಧ ಜನರಿಗೆ ದೇವರ ಹೆಸರಿನಲ್ಲಿ ಮೋಸ ಮಾಡುವುದು ಕೂಡಾ ನಡೆಯುತ್ತಲೇ ಇರುತ್ತದೆ. ಆದ್ದರಿಂದಲೇ ಇಲ್ಲಿ ಕ್ಷಣಕ್ಕೊಬ್ಬ ಹೊಸ ಬಾಬಾ, ಗಂಟೆಗೊಬ್ಬ ಹೊಸ ಅಮ್ಮನವರು ಎನ್ನುವಂತೆ ಸ್ವಯಂಘೋಷಿತ ದೇವ ಮಾನವರು ಸೃಷ್ಟಿಯಾಗಿ ಬಿಡುತ್ತಾರೆ. ದೇವರು ನಮ್ಮ ಮುಗ್ಧ ಜನರ ದೌರ್ಬಲ್ಯ ಎನ್ನುವುದು ಅರಿತು ಕೆಲವರು ಚಾಣಾಕ್ಷತನದಿಂದ ಜನರಿಗೆ ಮೋಸ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ.

ಪ್ರಸ್ತುತ ತಮಿಳುನಾಡಿನಲ್ಲಿ ಇಂತದ್ದೇ ಒಬ್ಬ ಹೊಸ ದೇವಿಯ ಉಗಮವಾಗಿದೆ. ಅಂದರೆ ಯಾವುದೇ ಆಲಯದಲ್ಲಿ ದೇವರ ಪ್ರತಿಷ್ಠಾಪನೆ ಯಲ್ಲ, ಬದಲಿಗೆ ಮಹಿಳೆಯೊಬ್ಬರು ಅನ್ನಪೂರ್ಣಿ ಅಮ್ಮನವರು ಎನ್ನುವ ಹೆಸರಿನಲ್ಲಿ ದೇವಿಯಾಗಿದ್ದಾರೆ‌. ವಿಶೇಷವೆಂದರೆ ಈ ಅನ್ನಪೂರ್ಣಿ ಅಮ್ಮನವರನ್ನು ದರ್ಶನ ಮಾಡುವುದರಿಂದಲೇ ಜನರ ಸರ್ವ ಸಮಸ್ಯೆಗಳು ಹಾಗೂ ಸಂ ಕ ಷ್ಟ ಗಳು ನಿವಾರಣೆ ಆಗಿ ಬಿಡುತ್ತದೆ ಎನ್ನುವ ಸುದ್ದಿಗಳು ಸಹಾ ಹರಡಿದೆ.

ಹೀಗೆ ಸುದ್ದಿಗಳು ಹರಿದಾಡಿದ ಕೂಡಲೇ ಜನರು ದೊಡ್ಡ ಸಂಖ್ಯೆಯಲ್ಲಿ ಅನ್ನಪೂರ್ಣಿ ಅಮ್ಮನವರ ಪಾದ ಸ್ಪರ್ಶ ಮಾಡಿ, ಸಂ ಕ ಷ್ಟ ಗಳಿಂದ ಮುಕ್ತಿ ಪಡೆಯಲು ಬರುತ್ತಿದ್ದಾರೆ. ಇದೆಲ್ಲವುಗಳ ನಡುವೆ ಹೊಸ ವರ್ಷಕ್ಕೆ ಈ ಅಮ್ಮನವರ ಕಡೆಯಿಂದ ಹೊಸ ಆಫರ್ ಕೂಡಾ ನೀಡಲಾಗಿದೆ. ಅಮ್ಮನವರ ವಿಶೇಷ ದರ್ಶನ ಎಂದು ಚೆನ್ನೈನ ಬೀದಿಗಳಲ್ಲಿ ಪೋಸ್ಟರ್ ಗಳನ್ನು ಹಾಕಲಾಗಿದೆ.

ವಿಷಯ ತಿಳಿಯುತ್ತಿದ್ದರಂತೆ ಪೋಲಿಸರು ರಂಗ ಪ್ರವೇಶ ಮಾಡಿದ್ದು, ಅಮ್ಮನವರ ದರ್ಶನಕ್ಕೆ ಮಂಟಪ ಸಿದ್ಧತೆ ನಡೆಸಿರುವ ಮಾಲೀಕನ ವಿಚಾರಣೆ ಮಾಡಿದ್ದಾರೆ. ಆಗ ಈ ಹಿಂದೆ ಅನ್ನಪೂರ್ಣಿ ಅಮ್ಮನವರ ಮೇಲೆ ಕೆಲವು ಮೋಸದ ದೂರುಗಳು ಇರುವುದು ಗೊತ್ತಾಗಿದೆ. ಆದರೆ ಈಗ ಮತ್ತೊಮ್ಮೆ ಅಮ್ಮನವರ ಅವತಾರ ಎತ್ತಿರುವುದು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ರಾಕೆಟ್ ಯುಗದಲ್ಲಿ ಕೂಡಾ ಜನರು ಇಂತಹ ಕಪಟಿಗಳನ್ನು ನಂಬುವುದು ವಿಪರ್ಯಾಸ ಎನಿಸಿದೆ.

Leave a Comment